ಬಾಲಿವುಡ್

ಶಾರೂಖ್ ಖಾನ್ ತಡರಾತ್ರಿ ಬರ್ತ್ ಡೇ ಪಾರ್ಟಿಗೆ ಪೊಲೀಸರ ತಡೆ!

Shilpa D
ನವದೆಹಲಿ: ಬಾಲಿವುಡ್‌ ಬಾದ್ ಶಾ  ಶಾರುಖ್‌ ಖಾನ್‌ ಅವರು ಶುಕ್ರವಾರ ತಮ್ಮ 53 ನೇ ಜನ್ಮದಿನದ ಅದ್ದೂರಿ ಬರ್ತ್‌ಡೇ ಪಾರ್ಟಿಗೆ ಪೊಲೀಸರು ತಡೆ ಹಾಕಿದ್ದಾರೆ.
ಬಾಲಿವುಡ್‌ ಸ್ನೇಹಿತರು ಮತ್ತು ಗಣ್ಯರೊಂದಿಗೆ ಬಾಂದ್ರಾದ ಅರ್ಥ್ ನೈಟ್‌ಕ್ಲಬ್‌ನಲ್ಲಿ  ತಡರಾತ್ರಿ 3 ಗಂಟೆಯ ವರಗೆ ಮೋಜು ಮಸ್ತಿ ಪಾರ್ಟಿ ನಡೆಯುತ್ತಿತ್ತು. ದೊಡ್ಡದಾಗಿ ಮ್ಯೂಸಿಕ್ ಹಾಕಲಾಗಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಪಾರ್ಟಿಗೆ ಬ್ರೇಕ್‌ ಹಾಕಿದ್ದಾರೆ. 
ಪೊಲೀಸರ ಆಗಮನದ ಬಳಿಕ ಮಿತ್ರರೊಂದಿಗೆ ಶಾರುಖ್‌ ಖಾನ್‌ ಅವರು ಹೊರ ಬರುತ್ತಿರುವ ದೃಶ್ಯಗಳು ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿವೆ. 
ಸಾಮಾನ್ಯ ಜನರಿಗಾಗಿ ಕ್ಲಬ್ 1 ಗಂಟೆಯವರೆಗೂ ತೆರೆದಿರುತ್ತದೆ. ಆದರೆ ಶಾರೂಕ್ ಹುಟ್ಟುಹಬ್ಬಕ್ಕಾಗಿ ತಮ್ಮ ಸ್ನೇಹಿತರನ್ನು ಪಾರ್ಟಿಗೆ ಆಹ್ವಾನಿಸಿದ ಕಾರಣ ಶುಕ್ರವಾರ ರಾತ್ರಿ ಕ್ಲಬ್‍ಗೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ.
SCROLL FOR NEXT