ದೀರಿಕಾ ಪಡುಕೋಣೆ -ರಣವೀರ್ ಸಿಂಗ್ 
ಬಾಲಿವುಡ್

ದೀಪಿಕಾ-ರಣವೀರ್ ಮದುವೆಗೆ ಇಟಲಿಯ ಕೊಮೊ ಸರೋವರ ತೀರ ಆಯ್ಕೆಗೆ ಕಾರಣ?

ಬಾಲಿವುಡ್ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಗೆ ಇಟಲಿಯನ್ನು ...

ರೋಮ್: ಬಾಲಿವುಡ್ ನ ಖ್ಯಾತ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮದುವೆಗೆ ಇಟಲಿಯನ್ನು ಆಯ್ಕೆಮಾಡಿಕೊಂಡಿದ್ದಾರೆ.

ಅಷ್ಟು ದೂರ ಹೋಗಿ ಏಕೆ ಮದುವೆಯಾಗುತ್ತಿದ್ದಾರೆ, ಭಾರತದಲ್ಲಿ ಎಲ್ಲಿಯೂ ಜಾಗ ಸಿಗಲಿಲ್ಲವೇ ಎಂದು ಕೇಳಿದವರಿಗೆ ಇಲ್ಲಿನ ಪರಿಸರ ಸೌಂದರ್ಯವನ್ನು ನೋಡಿದರೆ ಉತ್ತರ ಸಿಗುತ್ತದೆ. ಯುರೋಪ್ ನ ಈ ಅದ್ಭುತ ಜಾಗ ಡೇವಿಡ್ ಬೋವೀ ಮತ್ತು ಜಾರ್ಜ್ ಕ್ಲೂನಿಯಿಂದ ಹಿಡಿದು ಕಿಮ್ ಕರ್ದಾಸಿಯಾನ್ ನಂತಹ ಖ್ಯಾತ ತಾರಾ ಜೋಡಿಯನ್ನು ಆಕರ್ಷಿಸಿದೆ.
ಈ ಸ್ಥಳದ ಸೌಂದರ್ಯ, ಇತಿಹಾಸ, ಗ್ಲಾಮರ್ ಲುಕ್ ಎಂತವರನ್ನೂ ಆಕರ್ಷಿಸದೆ ಇರದು.

ಉತ್ತರ ಇಟಲಿಯ ಮೂಲೆಯಲ್ಲಿರುವ ಕೊಮೊ ಸರೋವರದ ತೀರದಲ್ಲಿ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. 30 ಮೀಟರ್ ಗಿಂತ ಕಡಿಮೆ ಆಳವಿರುವ ದ್ವೀಪ ಪ್ರದೇಶ ಇದಾಗಿದ್ದು ವಿಶ್ವದ ಅತಿದೊಡ್ಡ ನೀರಿನ ಪ್ರದೇಶವನ್ನು ಸುತ್ತುವರೆದಿದೆ.  ಈ ದ್ವೀಪ ಸರೋವರಕ್ಕೆ ಶ್ರೀಮಂತರು ಪ್ರವೇಶಿಸಲು ದುಬಾರಿ ಪ್ರವೇಶದ್ವಾರವಿದೆ. ಇತಿಹಾಸ ಕಾಲದಿಂದಲೇ ರೋಮ್ ಅತ್ಯಂತ ಸಂಪದ್ಭರಿತ ದೇಶವಾಗಿದೆ.



ಕೊಮೊ ದ್ವೀಪ ಸರೋವರ ತೀರ

ಕಾಬ್ಬಾಲ್ಡ್ ಬೀದಿಗಳು, ಇಟಾಲಿಯೇಟ್ ವಾಸ್ತುಶಿಲ್ಪ, ವಿಸ್ಮಯಕರ ವಾತಾವರಣ ಮತ್ತು ಆಕಾಶದಲ್ಲಿನ ಮೋಡಗಳು, ಸುತ್ತಲೂ ಪರ್ವತಗಳನ್ನು ತಬ್ಬಿಕೊಂಡಂತೆ ಉದಯಿಸುವ ಸೂರ್ಯ ಇವೆಲ್ಲವನ್ನೂ ಹೊಂದಿರುವ ಕೊಮೊ ಸರೋವರ ಪ್ರಣಯದಲ್ಲಿ ಅದ್ದಿ ತೆಗೆದಂತಿದೆ.
ಈ ರಸ್ತೆಯಲ್ಲಿ ನಡೆಯುತ್ತಾ ಹೋಗುತ್ತಿದ್ದಂತೆ ಪ್ರಣಯವೇ ಉಕ್ಕಿ ಬರುವ ವಾತಾವರಣ ಇಲ್ಲಿದೆ ಎನ್ನಬಹುದು. ಇದಕ್ಕೆ ಕಳಶವಿಟ್ಟಂತೆ ವಿಲ್ಲಾ ಡೆಲ್ ಬಲ್ಬಿಯನೆಲ್ಲೊ ಎಂಬ ಇಟಾಲಿಯನ್ ವಿಲ್ಲಾವಿದೆ, ಇದು ಸುಮಾರು 7 ಶತಮಾನಗಳಷ್ಟು ಹಳೆಯದು. ಇದೇ ವಿಲ್ಲಾದಲ್ಲಿ ದೀಪಿಕಾ ಮತ್ತು ರಣವೀರ್ ಮದುವೆ ನಡೆಯಲಿದೆ.


ಇಟೆಲಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕೇವಲ ಆಪ್ತ ಕುಟುಂಬ ವರ್ಗದವರಿಗೆ ಮತ್ತು ಸ್ನೇಹಿತರಿಗೆ ಮಾತ್ರ ಆಹ್ವಾನವಿದೆ. ಶಾರೂಕ್ ಖಾನ್, ಫರಾ ಖಾನ್ ಮತ್ತು ಸಂಜಯ್ ಲೀಲಾ ಬನ್ಸಾಲಿಯವರ ಸಮ್ಮುಖದಲ್ಲಿ ದೀಪಿಕಾರ ಕಡೆಯ ಕೊಂಕಣಿ ಸಂಪ್ರದಾಯದಲ್ಲಿ ಮತ್ತು ರಣವೀರ್ ಸಿಂಗ್ ಕಡೆಯ ಸಿಂಧಿ ಶೈಲಿಯಲ್ಲಿ ಎರಡು ಸಂಪ್ರದಾಯಗಳಂತೆ ತಾರಾ ಜೋಡಿ ಹಸೆಮಣೆ ಏರಲಿದ್ದಾರೆ.

ಬಾಲಿವುಡ್ ನ ಖ್ಯಾತ ಜೋಡಿಯ ಮದುವೆ ನಡೆಯುತ್ತಿರುವ ಈ ಸ್ಥಳದಲ್ಲಿ ಸಹಜವಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ನಿನ್ನೆಯವರೆಗೂ ವಿಲ್ಲಾ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿತ್ತು. ಆದರೆ ಇಂದಿನಿಂದ ನಾಲ್ಕೈದು ದಿನ  ದೀಪಿಕಾ-ರಣವೀರ್ ಮದುವೆ ಹಿನ್ನಲೆಯಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಮದುವೆ ನಡೆಯುವ ವಿಲ್ಲಾದಲ್ಲಿ ಈಗಾಗಲೇ ಅಲಂಕಾರ ಮಾಡಲಾಗುತ್ತಿದೆ. ಸಕಲ ಸಿದ್ದತೆಗಳು ನಡೆಯುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT