ಅಕ್ಷಯ್ ಕುಮಾರ್-ಅರ್ನಾಲ್ಡ್ ಶ್ವಾರ್ಜಿನೆಗ್ಗರ್ 
ಬಾಲಿವುಡ್

2.0 ಚಿತ್ರದಲ್ಲಿ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಬದಲು ಅಕ್ಷಯ್ ಕುಮಾರ್ ನಟಿಸಿದ್ದರ ಕಾರಣ ಬಿಚ್ಚಿಟ್ರು ನಿರ್ದೇಶಕ ಶಂಕರ್

ಶಂಕರ್ ನಿರ್ದೇಶನದ 2.0 ಚಿತ್ರ ನವೆಂಬರ್ 29 ರಂದು ಬಿಡುಗಡೆಯಾಗಲಿದ್ದು ಚಿತ್ರತಂಡ ಪ್ರೊಮೋಷನ್ ನಲ್ಲಿ ಕಾರ್ಯನಿರತವಾಗಿದೆ.

ಶಂಕರ್ ನಿರ್ದೇಶನದ 2.0 ಚಿತ್ರ ನವೆಂಬರ್ 29 ರಂದು ಬಿಡುಗಡೆಯಾಗಲಿದ್ದು ಚಿತ್ರತಂಡ ಪ್ರೊಮೋಷನ್ ನಲ್ಲಿ ಕಾರ್ಯನಿರತವಾಗಿದೆ. 
ರಜನಿಕಾಂತ್, ಅಕ್ಷಯ್ ಕುಮಾರ್, ಆಮಿ ಜಾನ್ಸನ್, ಆದಿಲ್ ಹುಸೇನ್, ಸುಧಾಂಶು ಪಾಂಡೇ ತಾರಾಗಣವನ್ನು ಹೊಂದಿರುವ 2.0 ಅಕ್ಷಯ್ ಕುಮಾರ್ ನ್ನು ಕಾಲಿವುಡ್ ಗೆ ಪರಿಚಯಿಸಿರುವ ಸಿನಿಮಾ ಕೂಡಾ ಆಗಿದೆ.  ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾದ ಬಗ್ಗೆ ನಿರ್ದೇಶಕ ಶಂಕರ್ ಹಾಗೂ ಅಕ್ಷಯ್ ಕುಮಾರ್ ಪತ್ರಿಕಾಗೋಷ್ಠಿ ನಡೆಸಿದ್ದು, ಚಿತ್ರದಲ್ಲಿ  ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಬದಲು ಅಕ್ಷಯ್ ಕುಮಾರ್ ನಟನೆ ಮಾಡಿದ್ದೇಕೆ ಎಂಬುದಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದಾರೆ. 
"ಅಕ್ಷಯ್ ಕುಮಾರ್ ನಿರ್ವಹಿಸಿರುವ ಪಾತ್ರದಲ್ಲಿ ನಟನೆ ಮಾಡಲು ಪ್ರಾರಂಭದಲ್ಲಿ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರಿಗೆ ಮನವಿ ಮಾಡಲಾಗಿತ್ತು.  ಅರ್ನಾಲ್ಡ್ ಅವರು ನಟಿಸಿದ್ದರೆ ಸಿನಿಮಾವನ್ನು ಜಾಗತಿಕ ಪ್ರೇಕ್ಷಕರೊಂದಿಗೂ ಬೆಸೆಯಬಹುದಿತ್ತು ಎಂಬ ಆಲೋಚನೆಯೂ ಇತ್ತು. ಅರ್ನಾಲ್ಡ್ ಜೊತೆ ಮಾತುಕತೆ ನಂತರ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿ ಕಾಲ್ ಶೀಟ್ ನ್ನೂ ನೀಡಿದ್ದರು. ಆದರೆ ನಂತರದ ದಿನಗಳಲ್ಲಿ ಭಾರತದ ಕಾಲ್ ಶೀಟ್ ಗೂ ಹಾಲಿವುಡ್ ಕಾಲ್ ಶೀಟ್ ನಲ್ಲಿ ತುಂಬಾ ವ್ಯತ್ಯಾಸವಿದ್ದ ಕಾರಣ ಎಲ್ಲವೂ ಸರಿ ಹೋಗಲಿಲ್ಲ. ಆ ನಂತರವೇ ಭಾರತೀಯ ನಟರಿಗಾಗಿ ಹುಡುಕಾಟ ನಡೆಸಲಾಯಿತು. ಈ ಸಂದರ್ಭದಲ್ಲೇ ಅಕ್ಷಯ್ ಕುಮಾರ್ ಅವರನ್ನು ಸಂಪರ್ಕಿಸಲಾಯಿತು" ಎಂದು ಶಂಕರ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!