ಕಂಗನಾ ರಾನೌತ್-ವಿಕಾಸ್ ಬಹ್ಲ್ 
ಬಾಲಿವುಡ್

'ಕ್ವೀನ್ ' ನಿರ್ದೇಶಕ ವಿಕಾಸ್ ಬಹ್ಲ್ ವಿರುದ್ಧ ಕಂಗನಾ ರಾನೌತ್ ಲೈಂಗಿಕ ಕಿರುಕುಳ ಆರೋಪ

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳದ ಆರೋಪ...

ಮುಂಬೈ: ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳದ ಆರೋಪ ಮಾಡಿ ನಟ-ನಟಿಯರಿಂದ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗಿರುವ ಬೆನ್ನಲ್ಲೇ, ಹಿಂದಿ ಚಿತ್ರರಂಗದ ವಿವಾದಿತ ನಟಿಯೆಂದೇ ಹೆಸರಾಗಿರುವ ಕಂಗನಾ ರನಾವತ್ ಕ್ವೀನ್ ಚಿತ್ರದ ನಿರ್ದೇಶಕ ವಿಕಾಸ್ ಬಹ್ಲ್  ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಇಂಡಿಯಾ ಟುಡೇ ಸಂದರ್ಶದಲ್ಲಿ ಮಾತನಾಡಿರುವ ಅವರು, ಹಲವಾರು ಸಂದರ್ಭಗಳಲ್ಲಿ ವಿಕಾಸ್ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಅವರು ನನ್ನನ್ನು ಬಿಗಿದಪ್ಪಿ, ನನ್ನ ಕೇಶರಾಶಿಯ ಪರಿಮಳವನ್ನು ಆಘ್ರಾಣಿಸಿದ್ಧಾರೆ ಎಂದು ಕಂಗನಾ ಆರೋಪಿಸಿದ್ದಾರೆ. ಫ್ಯಾಂಟಂ ಫಿಲಂಸ್ ಚಿತ್ರ ನಿರ್ಮಾಣ ಸಂಸ್ಥೆಯ ಪಾಲುದಾರರಾಗಿರುವ ವಿಕಾಸ್ ವಿರುದ್ಧ ಅದೇ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರು ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ನಿರ್ದೇಶಕರ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಮಾಡುವ ಮೂಲಕ ಮಣಿಕರ್ಣಿಕಾ ನಟಿ ಮತ್ತೊಮ್ಮೆ ಪುರುಷರ ವಿರುದ್ದ ಸಮರಕ್ಕೆ ಸಜ್ಜಾಗಿದ್ದು, ಇದು ಯಾವ ರೂಪ ಪಡೆದುಕೊಳ್ಳಲಿದೆ ಎಂದು ನೋಡಬೇಕು.

ಗೋವಾದಲ್ಲಿ ಚಿತ್ರೀಕರಣಕ್ಕೆ ಹೋಗಿದ್ದ ಸಂದರ್ಭದಲ್ಲಿ ವಿಕಾಸ್ ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದರು ಎಂದು ಫ್ಯಾಂಟ ಫಿಲಂಸ್ ಮಹಿಳಾ ಉದ್ಯೋಗಿ ಆ ಸಂಸ್ಥೆಯ ಪಾಲುದಾರರಾಗಿದ್ದ ನಿರ್ದೇಶಕ ಅನುರಾಜ್ ಕಶ್ಯಪ್ ಅವರಿಗೆ ದೂರು ನೀಡಿ ಕೆಲಸ ಬಿಟ್ಟಿದ್ದರು.  ಆ ಮಹಿಳೆ ಪರ ಧ್ವನಿ ಎತ್ತಿರುವ ಕ್ವೀನ್ ಕಂಗನಾ, ಆ ಆರೋಪದಲ್ಲಿ ಶೇ.100ರಷ್ಟು ಸತ್ಯವಿದೆ. ಅಲ್ಲದೇ ವಿಕಾಸ್‍ನಿಂದ ನಾನು ಕೂಡ ಅದೇ ರೀತಿಯ ತೊಂದರೆಗೆ ಒಳಗಾಗಿದ್ದೇನೆ. ಅವರು ಹಲವು ಸಂದರ್ಭಗಳಲ್ಲಿ ನನ್ನನ್ನು ವಿನಾಕಾರಣ ಬಿಗಿಯಾಗಿ ಹಿಡಿದುಕೊಂಡು ನನ್ನ ಕೇಶರಾಶಿಯ ಪರಿಮಳ ಆಘ್ರಾಣಿಸಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT