ಭಾರತೀಯ ಚಿತ್ರರಂಗದಲ್ಲಿ ಇದೀಗ ಮೀಟೂ ಆರೋಪಗಳು ದೊಡ್ಡ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ. ಈ ಮಧ್ಯೆ ತಮಗಾದ ಕರಾಳ ಅನುಭವವನ್ನು ಬಾಲಿವುಡ್ ನ ಹಾಟ್ ಬೆಡಗಿ ಪೂನಂ ಪಾಂಡೆ ಹಂಚಿಕೊಂಡಿದ್ದಾರೆ.
ತಮ್ಮ ಬೋಲ್ಡ್ ಲುಕ್ ನಿಂದ ಖ್ಯಾತಿ ಗಳಿಸಿರುವ ಪೂನಂ ಪಾಂಡೆ ಅವರು ತಾವು ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಾಗ ಎದುರಾದ ಕರಾಳ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಮಾಡೆಲಿಂಗ್ ನ ಆರಂಭಿಕ ದಿನಗಳಲ್ಲಿ ನಾನೂ ಕೂಡ ಇದನ್ನು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಸಹ ಆಯೋಜಕನೊಬ್ಬ ನನ್ನಿಂದ ಬೇರೆಯದನ್ನೇ ಬಯಸಿದ್ದೆ. ಆತ ಒಂದು ದಿನ ನನ್ನ ರೂಮಿಗೆ ಬಂದು ಪರೋಕ್ಷವಾಗಿ ಅದರ ಬಗ್ಗೆ ಮಾತನಾಡಿದ. ನನಗೆ ಆತನ ಅಂತರಾಳ ಅರ್ಥವಾಯಿತು. ನಾನು ಅಷ್ಟೇ ನಯವಾಗಿ ಆತನಿಗೆ ಉತ್ತರಿಸಿದೆ. ಇಲ್ಲಿಂದ ಪೊಲೀಸ್ ಠಾಣೆಗೆ ಐದು ನಿಮಿಷದ ದಾರಿ, ನೀನು ನನ್ನ ಜತೆ ಬರ್ತಿಯಾ ಎಂದು ಕೇಳಿದೆ. ನನ್ನ ಪ್ರಶ್ನೆಗೆ ತಬ್ಬಿಬ್ಬಾದ ಆ ಮನುಷ್ಯ ರೂಮ್ ನಿಂದ ಕಾಲ್ಕಿತ್ತ ಎಂದು ಪೂನಂ ಹೇಳಿಕೊಂಡಿದ್ದಾರೆ.