ರಣವೀರ್ ಸಿಂಗ್ - ದೀಪಿಕಾ ಪಡುಕೋಣೆ 
ಬಾಲಿವುಡ್

ಎರಡು ಶೈಲಿಯಲ್ಲಿ ನಡೆಯಲಿದೆ ದೀಪಿಕಾ ಮತ್ತು ರಣ​ವೀರ್​ ಮದುವೆ

ಬಾಲಿವುಡ್ ಖ್ಯಾತ ನಟಿ, ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಮತ್ತು ಬಾಲಿವುಡ್ ನಟ ರಣವೀರ್​ ಸಿಂಗ್...

ಮುಂಬೈ: ಬಾಲಿವುಡ್ ಖ್ಯಾತ ನಟಿ, ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಮತ್ತು ಬಾಲಿವುಡ್ ನಟ ರಣವೀರ್​ ಸಿಂಗ್ ಅವರು​ ನವೆಂಬರ್​ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ದಕ್ಷಿಣ ಭಾರತ ಮತ್ತು ಉತ್ತರ ಭಾರತ ಎರಡೂ ಶೈಲಿಯಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.
ನವೆಂಬರ್​ 14ರಂದು ದೀಪಿಕಾ ಪಡುಕೋಣೆ ಕುಟುಂಬಕ್ಕಾಗಿ ದಕ್ಷಿಣ ಭಾರತ ಶೈಲಿಯಲ್ಲಿ ಮದುವೆಯಾಗಲಿದ್ದು, ರಣವೀರ್​ ಸಿಂಧಿಯವರಾಗಿರುವುದರಿಂದ  ನವೆಂಬರ್​ 15ರಂದು ಸಿಂಧಿ ಶೈಲಿಯಲ್ಲಿ ಮದುವೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮಿಡ್-ಡೇ ವರದಿ ಮಾಡಿದೆ.
ಬಾಜಿರಾವ್‌ ಮಸ್ತಾನಿ, ರಾಮ್‌ ಲೀಲಾ, ಪದ್ಮಾವತ್‌ ಸೇರಿದಂತೆ ಹಲವು ಸೂಪರ್‌ಹಿಟ್‌ ಚಿತ್ರಗಳನ್ನು ನೀಡಿದ ಈ ಜೋಡಿಯ ಎರಡೂ ಶೈಲಿಯ ಧಿರಿಸುಗಳು ಈಗಾಗಲೇ ಸಿದ್ಧಗೊಂಡಿವೆ. 
ಇಟಲಿಯಲ್ಲಿ ನಾಲ್ಕು ದಿನಗಳ ಕಾಲ ತಾರಾ ಜೋಡಿಯ ಮದುವೆ ನಡೆಯಲಿದ್ದು, ನವೆಂಬರ್​ 13ರಂದು ಸಂಗೀತ್​ ಕಾರ್ಯಕ್ರಮದಿಂದ ಮದುವೆಗೆ ಚಾಲನೆ ಸಿಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ