ನವದೆಹಲಿ: ಹೊಸ ಜೀವನಕ್ಕೆ ಅಣಿಯಾಗುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ , ಇತ್ತೀಚಿಗೆ ತನ್ನ ತಾಯಿ ಹಾಗೂ ಗೆಳೆತಿಯರೊಂದಿಗೆ ನ್ಯೂಯಾರ್ಕ್ ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಕುತ್ತಿಗೆ ತುಂಬಾ ಬೆಳ್ಳೆಯ ನಕ್ಲೇಸ್, ಬಿಳಿ ಬಣ್ಣದ ಸ್ಟ್ರಾಪ್ ಲೆಸ್ ಮಾರ್ಚೆಸಾ ಡ್ರೆಸ್ ತೊಟ್ಟು ವಧುವಿನ ರೂಪದಲ್ಲಿ ಕಂಗೊಳಿಸುತ್ತಿದ್ದ ಪ್ರಿಯಾಂಕಾ ಚೋಪ್ರಾ, ಕಡಿಮೆ ಮೇಕ್ ಆಪ್ ಮಾಡಿಕೊಂಡಿದ್ದು, ಡ್ರೆಸ್ ಗೆ ಹೊಂದಾಣಿಕೆಯಾಗುವಂತೆ ತನ್ನ ಕೂದಲೆಲ್ಲಾ ಇಳಿಬಿಟ್ಟು, ನರ್ತಿಸಿದ್ದಾರೆ.
ಈ ಪೋಟೋ ಹಾಗೂ ವಿಡಿಯೋವನ್ನು ಇನ್ಸಾಟಾಗ್ರಾಂನಲ್ಲಿ ಪ್ರಿಯಾಂಕಾ ಚೋಪ್ರಾ ಹಾಕಿದ್ದು, ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕುಟುಂಬ ಸದಸ್ಯರು ಹಾಗೂ ಗೆಳೆತಿಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ಬರೆದುಕೊಂಡಿದ್ದಾರೆ.