ಉದಯ್ ಚೋಪ್ರಾ 
ಬಾಲಿವುಡ್

ಮಾರಿಜುವಾನ ಕಾನೂನುಬದ್ಧಗೊಳಿಸಿ, ಉದಯ್ ಚೋಪ್ರಾ ಹೇಳಿಕೆಗೆ 'ಹುಷಾರ್ 'ಎಂದ ಪೊಲೀಸರು !

ಮಾದಕ ವಸ್ತು ಮಾರಿಜುವಾನ ಕಾನೂನುಬದ್ಧಗೊಳಿಸುವಂತೆ ದೂಮ್ ಖ್ಯಾತಿಯ ಬಾಲಿವುಡ್ ನಟ ಉದಯ್ ಚೋಪ್ರಾ ಹೇಳಿಕೆ ನೀಡಿದ್ದು, ಹುಷಾರಾಗಿ ಇರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಮುಂಬೈ: ಮಾದಕ ವಸ್ತು  ಮಾರಿಜುವಾನ  ಕಾನೂನುಬದ್ಧಗೊಳಿಸುವಂತೆ  ದೂಮ್ ಖ್ಯಾತಿಯ ಬಾಲಿವುಡ್ ನಟ ಉದಯ್ ಚೋಪ್ರಾ ಹೇಳಿಕೆ ನೀಡಿದ್ದು, ಹುಷಾರಾಗಿ ಇರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಮಾರಿಜುವಾನ ವೈದ್ಯಕೀಯವಾಗಿಯೂ ಸಾಕಷ್ಟು ಅನುಕೂಲವಾಗುವುದರಿಂದ   ಅದನ್ನು ಕಾನೂನುಬದ್ಧಗೊಳಿಸುವಂತೆ ಉದಯ್ ಚೋಪ್ರಾ ನಿನ್ನೆ ಟ್ವೀಟ್ ಮಾಡಿದ್ದರು.

ಮಾರಿಜುವಾನ  ಭಾರತೀಯ ಸಂಸ್ಕೃತಿಯ ಭಾಗವಾಗಿದ್ದು, ಅದನ್ನು ಕಾನೂನುಬದ್ಧಗೊಳಿಸಬೇಕು , ಅದನ್ನು ಕಾನೂನುಬದ್ಧಗೊಳಿಸಿ ತೆರಿಗೆ ವಿಧಿಸುವುದರಿಂದ ಹೆಚ್ಚಿನ ಪ್ರಮಾಣದ ಆದಾಯ ಬರುತ್ತದೆ. ಜೊತೆಗೆ  ಹೆಚ್ಚಿನ ಪ್ರಮಾಣದ ವೈದ್ಯಕೀಯ ಅನುಕೂಲವೂ ಆಗಲಿದೆ ಎಂದು ಅವರು ಹೇಳಿದ್ದರು.

 ಉದಯ್ ಚೋಪ್ರಾ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವಂತೆ ಮುಂಬೈ ಪೊಲೀಸರಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೇಶದ ನಾಗರಿಕರಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡುವಾಗ ಹುಷಾರಾಗಿರಿ.1985ರ ಕಾಯ್ದೆ ಪ್ರಕಾರ  ಮಾರಿಜುವಾನ  ಸೇವನೆ, ಸಂಗ್ರಹ, ಹಾಗೂ ಮಾರಾಟಕ್ಕೆ  ಕಠಿಣ ಶಿಕ್ಷೆಗೊಳಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಚೋಪ್ರಾ ಟ್ವಿಟ್ ಗೆ ಇಂದು ಮದ್ಯಾಹ್ನ 300  ಪ್ರತಿಕ್ರಿಯೆಗಳು ಬಂದಿದ್ದು, 1 ಸಾವಿರ ಲೈಕ್ ಹಾಗೂ ಅನೇಕ ಟೀಕೆಗಳು ಬಂದಿವೆ. ಅನೇಕ ಮಂದಿ ಚೋಪ್ರಾ ಅವರ ದೃಷ್ಟಿ ಹಾಸ್ಯಾಸ್ಪದದಿಂದ ಕೂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

 ಈ ಟ್ವಿಟ್ ಗಳಲ್ಲಿ ಪ್ರತಿಕ್ರಿಯಿಸಿರುವ ಚೋಪ್ರಾ,  ಮದ್ಯವನ್ನು ಕಾನೂನುಬದ್ಧಗೊಳಿಸದಂತೆ ಏಕೆ ಜನರು ಕೇಳುತ್ತಿಲ್ಲ ಎಂಬ ಬಗ್ಗೆ ಆಶ್ಚರ್ಯವಾಗುತ್ತಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!