ಮುಂಬೈ: ಮಾಜಿ ನೀಲಿ ತಾರೆ, ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ಇದೀಗ ಹಾಡೊಂದಕ್ಕೆ ಮೈ ಬಳುಕಿಸಿದ್ದು ಸನ್ನಿ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸನ್ನಿ ಲಿಯೋನ್ ತನ್ನ ಸಹ ಸಿಬ್ಬಂದಿಯೊಂದಿಗೆ ನೃತ್ಯ ಮಾಡಿದ್ದಾರೆ. ಬೊಲೊ ತಾರಾ ರಾ ರಾ ಎಂದು ಕುಣಿದು ಕುಪ್ಪಳಿಸಿದ್ದಾರೆ. ಸನ್ನಿ ಬಿಳಿ ಬಣ್ಣದ ಕ್ಯಾಪ್ ಧರಿಸಿ, ಕೆಂಪು ಹಾಗೂ ನೀಲಿ ಮಿಶ್ರಿತ ಜರ್ಕಿನ್ ಮತ್ತು ಜಿನ್ಸ್ ಧರಿಸಿ ಪಂಜಾಬಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ.
ಸನ್ನಿ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದು ಈಗಾಗಲೇ 23 ಲಕ್ಷ ಮಂದಿ ನೋಡಿದ್ದು ಮೆಚ್ಚುಗೆಗಳ ಸುರಿಮಳೆ ಬಂದಿದೆ.
ಇನ್ನು ಸನ್ನಿ ಲಿಯೋನ್ ಜೀವನ ಚರಿತ್ರೆ ಆಧರಿತ ವೆಬ್ ಸೀರಿಸ್ ಕರಣ್ ಜಿತ್ ಕೌರ್: ದಿ ಅನ್ ಟೋಲ್ಡ್ ಆಫ್ ಸನ್ನಿ ಲಿಯೋನ್ ಸಹ ಸದ್ದು ಮಾಡುತ್ತಿದೆ.