ರಣದೀರ್ ಕಪೂರ್ 
ಬಾಲಿವುಡ್

ಇದು ನನ್ನ ಕೊನೆಯ ಗಣೇಶ ಚತುರ್ಥಿ ಆಚರಣೆ ಆಗುತ್ತೇನೋ? ಗದ್ಗದಿತರಾದ ನಟ ರಣದೀರ್ ಕಪೂರ್!

ಬಾಲಿವುಡ್ ನ ಹಿರಿಯ ನಟ ರಣದೀರ್ ಕಪೂರ್ ಗಣೇಶ ಚತುರ್ಥಿಯನ್ನು ಆರ್ ಕೆ ಸ್ಟುಡಿಯೋದಲ್ಲಿ ಆಚರಿಸಿದ್ದು ಇದು ನನ್ನ ಕೊನೆಯ ಗಣೇಶ ಚತುರ್ಥಿ ಆಚರಣೆ ಆಗಲಿದೆ ಎಂದು ಅವರು ಗದ್ಗದಿತರಾಗಿದ್ದಾರೆ...

ಬಾಲಿವುಡ್ ನ ಹಿರಿಯ ನಟ ರಣದೀರ್ ಕಪೂರ್ ಗಣೇಶ ಚತುರ್ಥಿಯನ್ನು ಆರ್ ಕೆ ಸ್ಟುಡಿಯೋದಲ್ಲಿ ಆಚರಿಸಿದ್ದು ಇದು ನನ್ನ ಕೊನೆಯ ಗಣೇಶ ಚತುರ್ಥಿ ಆಚರಣೆ ಆಗಲಿದೆ ಎಂದು ಅವರು ಗದ್ಗದಿತರಾಗಿದ್ದಾರೆ. 
ಬಾಲಿವುಡ್ ದಿಗ್ಗಜ ರಾಜ್ ಕಪೂರ್ ಅವರು ನಿರ್ಮಿಸಿದ್ದ ಆರ್ ಕೆ ಸ್ಟುಡಿಯೋ ಬಾಲಿವುಡ್ ನ ಪ್ರಖ್ಯಾತ ಸ್ಟುಡಿಯೋಗಳಲ್ಲಿ ಒಂದಾಗಿದ್ದು ಕಳೆದ 70 ವರ್ಷಗಳ ಇತಿಹಾಸ ಹೊಂದಿದೆ. ಇಂತಹ ಆರ್ ಕೆ ಸ್ಟುಡಿಯೋವನ್ನು ಮಾರಲು ತೀರ್ಮಾನಿಸಿದ್ದು ನಮ್ಮ ಕುಟುಂಬ ತೆಗೆದುಕೊಂಡ ಕಠಿಣ ನಿರ್ಣಯಗಳಲ್ಲಿ ಒಂದಾಗಿದೆ ಎಂದು ರಣದೀರ್ ಕಪೂರ್ ಹೇಳಿದ್ದಾರೆ. 
ಕಪೂರ್ ಕುಟುಂಬ ಆರ್ ಕೆ ಸ್ಟುಡಿಯೋದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದ್ದರು. ಇನ್ನು ಗಣೇಶನಿಗೆ ಆರತಿ ಮಾಡುವಾಗ ರಣದೀರ್ ಕಪೂರ್ ಗದ್ಗದಿತರಾದರು. ಆರ್ ಕೆ ಸ್ಟುಡಿಯೋದಲ್ಲಿ ಇದು ನಮ್ಮ ಕೊನೆಯ ಗಣೇಶ ಚತುರ್ಥಿ ಆಗಲಿದೆ ಎಂದು ಹೇಳಿದ್ದಾರೆ. 
ಕಳೆದ ವರ್ಷ ಆರ್ ಕೆ ಸ್ಟುಡಿಯೋದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಈ ಘಟನೆ ನಂತರ ಕಪೂರ್ ಕುಟುಂಬದ ಸದಸ್ಯರಾದ ರಣದೀರ್ ಕಪೂರ್, ರಿಶಿ ಕಪೂರ್, ರಾಜೀವ್ ಕಪೂರ್ ಸ್ಟುಡಿಯೋವನ್ನು ಮಾರುವ ತೀರ್ಮಾನ ಕೈಗೊಂಡಿದ್ದರು. 
ಇನ್ನು ಸ್ಟುಡಿಯೋವನ್ನು ಮಾರುತ್ತಿರುವ ಬಗ್ಗೆ ಮಾತನಾಡಿದ ರಣದೀರ್ ಕಪೂರ್ ಕಳೆದ ವರ್ಷ ಭಾರೀ ಅಗ್ನಿ ಅವಘಡ ಸಂಭವಿಸಿದ್ದು ಅಪಾರ ಆಸ್ತಿ ನಷ್ಟವಾಗಿತ್ತು. ಇನ್ನು ಸ್ಟುಡಿಯೋವನ್ನು ಪುನರ್ ನಿರ್ಮಿಸುವ ಕೆಲಸ ನಮ್ಮ ಕೈಯಲ್ಲಿ ಆಗುವುದಿಲ್ಲ ಹೀಗಾಗಿ ನಾವು ಸ್ಟುಡಿಯೋವನ್ನು ಮಾರುವ ತೀರ್ಮಾನಕ್ಕೆ ಬರಲಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!