ಬಾಲಿವುಡ್

ಲೆಹ್: '3 ಈಡಿಯಟ್ಸ್' ಶಾಲೆಯ 'ರಾಂಚೊ' ಗೋಡೆ ನೆಲಸಮಕ್ಕೆ ನಿರ್ಧಾರ!

Raghavendra Adiga
ಲೇಹ್: ಬಾಲಿವುಡ್ ನಟ ಅಮೀರ್ ಖಾನ್ ನಟನೆಯ 3 ಈಡಿಯಟ್ಸ್ ಚಿತ್ರೀಕರಣ ನಡೆದ ಬಳಿಕ ಲೇಹ್ ನ ದಿ ಡ್ರೂಕ್ ಪದ್ಮಾ ಕಾರ್ಪೋ ಸ್ಕೂಲ್ ಜಗತ್ಪ್ರಸಿದ್ದಿ ಪಡೆದುಕೊಂಡಿದೆ. ಆದರೀಗ ಇದೇ ಪ್ರಖ್ಯಾತಿ ಅಲ್ಲಿ ಕಲಿಯುವ ವಿದ್ಯಾರ್ಥಿಗಳ ಪಾಲಿಗೆ ಅಡಚಣೆಯಾಗಿಯೂ ಮಾರ್ಪಾಡಾಗಿದೆ.
ಚಿತ್ರೀಕರಣ ನಡೆದ ಶಾಲೆಯನ್ನು ಕಣ್ಣಾರೆ ಕಾಣಲು ನಾನಾ ಭಾಗಗಳಿಂದ ನಿತ್ಯವೂ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದ ಶಾಲ ವಿದ್ಯಾರ್ಥಿಗಳಿಗೆ ಏಕಾಗ್ರತೆ ಕೊರತೆಯಾಗುವುದು ಖಚಿತ. ಹೀಗಾಗಿ ಶಾಲಾ ಆಡಳಿತ ಇದೀಗ ಶಾಲಾ ವೀಕ್ಷಣೆಗೆ ಪ್ರವಾಸಿಗರಿಗೆ ಅನುಮತಿ ನಿರಾಕರಿಸಲು ನಿರ್ಧರಿಸಿದೆ. ಅಲ್ಲದೆ ಚಿತ್ರದಲ್ಲಿ ಬಳಕೆಯಾಗಿದ್ದ ’ರಾಂಚೋ ವಾಲ್’ ಅನ್ನು ಅಳಿಸಿ ಹಾಕಲು ತೀರ್ಮಾನಿಸಿದೆ.
3 ಈಡಿಯಟ್ಸ್  ಚಿತ್ರದ ಪಾತ್ರದಲ್ಲಿ ಒಂದಾದ ಚತುರ್ ಚಿತ್ರದಲ್ಲಿ ಈ ಗೋಡೆ ಮುಂದೆ ನಿಂತು ಮೂತ್ರ ವಿಸರ್ಜನೆಗೆ ಯತ್ನಿಸುವಾಗ ಶಾಲಾ ವಿದ್ಯಾರ್ಥಿಗಳು ತಮ್ಮ ವಿಶೇಷ ಸಾಮರ್ಥ್ಯ ಬಳಸಿ ಅವನಿಗೆ ವಿದ್ಯುತ್ ಆಘಾತವನ್ನುಂಟು ಮಾಡುವ ದೃಶ್ಯ ಇದ್ದು ಈ ದೃಶ್ಯ ಚಿತ್ರೀಕರಣವಾದ ಸ್ಥಳವನ್ನು ಶಾಲೆ ರಾಂಚೋ ವಾಲ್ ಎಂದು ಹೆಸರಿಸಿತ್ತು. ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು.
"ಚಿತ್ರವು ಶಾಲೆಗೆ ಸಾಕಷ್ಟು ಪ್ರಚಾರವನ್ನು ನೀಡಿತು. ಲಡಾಖ್ ಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಬಹುಪಾಲು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಈ ಕಾರಣ ಇಲ್ಲಿ ಶಾಲೆ ನದೆಸುವುದೇ ಕಷ್ಟವಾಗಿದೆ.ದೆ ವಿದ್ಯಾರ್ಥಿಗಳು ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ಮಾತ್ರವಲ್ಲ ಶಾಲೆಗೆ ಸೇರಿದ ಜಾಗದಲ್ಲಿ ಪ್ರತಿದಿನ ಸಂಗ್ರಹವಾಗುವ ಕಸ್ದ ರಾಶಿಯನ್ನು ಸಾಗಿಸುವುದು ಸಹ ಸವಾಲಾಗಿದೆ"  ಶಾಲೆಯ ಪ್ರಾಂಶುಪಾಲರಾದ ಸ್ಟ್ಯಾಂಜಿಂಗ್ ಕುಂಜಂಗ್ ಪಿಟಿಐ ಗೆ ಹೇಳಿದ್ದಾರೆ.
ಲಡಾಖ್ ನ ಆಧ್ಯಾತ್ಮಿಕ ಗುರು ಗೇಲ್ವಾಂಗ್ ಡ್ರುಕ್ಪಾ ಅವರ ಪವಿತ್ರ ಉದ್ದೇಶವನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಶಾಲೆ ಪ್ರಾರಂಭವಾಗಿದೆ.ಶಾಲೆಯು ಲಡಾಖಿಯ ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ನೀಡುವ ಗುರಿ ಹೊಂದಿದೆ ನಮ್ಮ ಸಂಸ್ಕೃತಿ ಸಂತೋಷ, ಉತ್ಸಾಹದ ಜೀವನಕ್ಕೆ ದಾರಿಯಾಗಬಲ್ಲ ಶಿಕ್ಷಣ ನೀಡುವುದು ನಮ್ಮ ಉದ್ದೇಶ ಎಂದು ಕುಂಜಂಗ್ ಹೇಳಿದರು.
1998 ರಲ್ಲಿ ಡ್ರೂಕ್ ಪದ್ಮಾ ಕಾರ್ಪೋ ಎಜುಕೇಶನ್ ಸೊಸೈಟಿಯಿಂದ ಸ್ಥಾಪಿಸಲ್ಪಟ್ಟ ಈ ಶಾಲೆಯು 2010 ರಲ್ಲಿ ಲೇಹ್, ಲಡಾಖ್ ಗಳಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಭಾಗಷಃ ನಾಶವಾಗಿತ್ತು.ದರೆ ನಂತರ ಅದನ್ನು ನವೀಕರಿಸಲಾಯಿತು.
SCROLL FOR NEXT