ನಾನಾ ಪಟೇಕರ್ ಮತ್ತಿತರರು 
ಬಾಲಿವುಡ್

ನಾನಾ ಪಟೇಕರ್ ಮುಂದಿನ ಸಿನಿಮಾ 'ಹೌಸ್ ಪುಲ್ 4 ' ಚಿತ್ರೀಕರಣ ಆರಂಭ

ಬಾಲಿವುಡ್ ನಟಿ ತನುಶ್ರೀ ದತ್ ಅವರ ಎಲ್ಲಾ ಆರೋಪಗಳ ನಡುವೆಯೂ ಸಜ್ಜಿದ್ ಖಾನ್ ನಿರ್ದೇಶನದ ಮುಂದಿನ ಸಿನಿಮಾ ಹೌಸ್ ಪುಲ್ 4 ಚಿತ್ರದ ಚಿತ್ರೀಕರಣವನ್ನು ಜೈಸಲ್ಮೇರ್ ನಲ್ಲಿ ಆರಂಭಿಸಿದ್ದಾರೆ.

ನವದೆಹಲಿ: ಬಾಲಿವುಡ್ ನಟಿ ತನುಶ್ರೀ ದತ್ ಅವರ ಎಲ್ಲಾ ಆರೋಪಗಳ ನಡುವೆಯೂ ಸಜ್ಜಿದ್ ಖಾನ್ ನಿರ್ದೇಶನದ ಮುಂದಿನ ಸಿನಿಮಾ ಹೌಸ್ ಪುಲ್ 4 ಚಿತ್ರದ ಚಿತ್ರೀಕರಣವನ್ನು ಜೈಸಲ್ಮೇರ್ ನಲ್ಲಿ  ಆರಂಭಿಸಿದ್ದಾರೆ.

2008ರಲ್ಲಿ  'ಹಾರ್ನ್ ಒಕೆ ಪ್ಲೀಸಸ್ '  ಚಿತ್ರದ ಚಿತ್ರೀಕರಣ ವೇಳೆಯಲ್ಲಿ ಬಾಲಿವುಡ್ ಹಿರಿಯ ನಟ ನಾನಾ ಪಟೇಕರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಲೈಂಗಿಕ ಕಿರುಕುಳು ನೀಡಿದ್ದಾರೆ ಎಂದು ಆರೋಪಿದ್ದರು.

ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಮೇಲೂ ತನುಶ್ರೀ ದತ್ ಆರೋಪ ಮಾಡಿದ್ದರು. ಆದಾಗ್ಯೂ, ಈ ಎಲ್ಲಾ ನಾಟಕಗಳ ಮಧ್ಯೆ, ನಾನಾ ಪಟೇಕರ್ ಅವರ ಮುಂದಿನ ಚಿತ್ರದ ಚಿತ್ರೀಕರಣವನ್ನು ಆರಂಭಿಸಿದ್ದಾರೆ.

ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿರುವ  ಪರ್ಹನ್ ಖಾನ್  ಚಿತ್ರೀಕರಣದ ಚಿತ್ರವೊಂದನ್ನು ತಮ್ಮ ಇನ್ ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ.
ಕೀರ್ತಿ ಸನಾನ್, ಪೂಜಾ ಹೆಗ್ಡೆ, ನಾನಾ ಪಟೇಕರ್ ಈ ಪೋಟೋದಲ್ಲಿದ್ದಾರೆ.

ಅಕ್ಷಯ್ ಕುಮಾರ್, ಬಾಬಿ ಡಿಯೊಲ್, ರಿತೇಶ್ ದೇಶ್ ಮುಖ್  ಹಾಗೂ ಕೀರ್ತಿ ಕರಬಂಧ ಮತ್ತಿತರ ತಾರಾಗಣವಿರುವ ಈ ಚಿತ್ರ  ಹೌಸ್ ಪುಲ್ ಚಿತ್ರ ಸರಣಿಯ ನಾಲ್ಕನೇ ಸಿನಿಮಾವಾಗಿದೆ.

ಮುಂದಿನ  ವರ್ಷದ ಅಕ್ಟೋಬರ್  ವೇಳೆಗೆ ದೀಪಾವಳಿ ಕೂಡುಗೆಯಾಗಿ ಚಿತ್ರ ಬಿಡುಗಡೆ ಆಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT