ಬಾಲಿವುಡ್

ನಾನಾ ಪಾಟೇಕರ್ ರಿಂದ ತನುಶ್ರೀ ದತ್ತಗೆ ಲೀಗಲ್ ನೋಟಿಸ್

Lingaraj Badiger
ನವದೆಹಲಿ: ಬಾಲಿವುಡ್ ಹಿರಿಯ ನಟ ಹಾಗೂ ನಿರ್ಮಾಪಕ ನಾನಾ ಪಾಟೇಕರ್ ಅವರು ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ತನುಶ್ರೀ ದತ್ತ ಅವರಿಗೆ ಲೀಗಲ್ ನೋಟಿಸ್ ನೀಡಲು ನಿರ್ಧರಿಸಿದ್ದಾರೆ.
ತನುಶ್ರೀ ದತ್ತ ಅವರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ನಾನಾ ಪರ ವಕೀಲ ರಾಜೇಂದ್ ಶಿಕೋಡ್ಕರ್ ಅವರು, ಇದು ಸತ್ಯಕ್ಕೆ ದೂರವಾದದ್ದು ಮತ್ತು ಸುಳ್ಳು ಆರೋಪ ಎಂದು ಹೇಳಿದ್ದಾರೆ.
ಹಿರಿಯ ನಟನ ವಿರುದ್ಧ ಸುಳ್ಳು ಆರೋಪ ಮಾಡಿರುವ ತನುಶ್ರೀ ದತ್ತಗೆ ಲೀಗಲ್ ನೋಟಿಸ್ ನೀಡುವ ಪ್ರಕ್ರಿಯೆ ನಡೆದಿದೆ. ಇಂದು ಸಂಜೆಯೊಳಗೆ ಆರೋಪಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸುವಂತೆ ನಟಿಗೆ ನೋಟಿಸ್ ನೀಡುತ್ತೇವೆ ಎಂದು ಅವರು ನಾನಾ ಪರ ವಕೀಲರು ತಿಳಿಸಿದ್ದಾರೆ.
2008ರಲ್ಲಿ ‘ಹಾರ್ನ್​ ಓಕೆ ಪ್ಲೀಸ್​’ ಚಿತ್ರದ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ಅವರು​ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ,  ಲೈಂಗಿಕ ಕಿರುಕುಳ ನೀಡಿದ್ದರು ಎಂದು ತನುಶ್ರೀ ಆರೋಪಿಸಿದ್ದರು.
SCROLL FOR NEXT