ಬಾಲಿವುಡ್

ಆಯೋಗದ ಕರ್ತವ್ಯದಲ್ಲಿ ಮಧ್ಯ ಪ್ರವೇಶವಿಲ್ಲ: ಪಿಎಂ ನರೇಂದ್ರ ಮೋದಿ ಚಿತ್ರ ವಿವಾದ ಸಂಬಂಧ 'ಸುಪ್ರೀಂ' ಹೇಳಿಕೆ

Srinivasamurthy VN
ನವದೆಹಲಿ: ಯಾವುದೇ ಕಾರಣಕ್ಕೂ ಚುನಾವಣಾ ಆಯೋಗದ ಕರ್ತವ್ಯದಲ್ಲಿ ತಾನು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಪಿಎಂ ನರೇಂದ್ರ ಮೋದಿ ಚಿತ್ರ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಇಂದು ಹೇಳಿಕೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರ ಪಿಎಂ ನರೇಂದ್ರ ಮೋದಿ ಚಿತ್ರ ಬಿಡುಗಡೆ ಸಂಬಂಧ ಭುಗಿಲೆದ್ದಿರುವ ವಿವಾದ ಸಂಬಂಧ ಇಂದು ಸುಪ್ರೀಂ ಕೋರ್ಟ್ ಇಂದು ತನ್ನ ನಿಲುವು ಸ್ಪಷ್ಟ ಪಡಿಸಿದೆ. ಹಾಲಿ ಲೋಕಸಭಾ ಚುನಾವಣೆ ಮುಕ್ತಾಯದವರೆಗೂ ಚಿತ್ರ ಬಿಡುಗಡೆಗೆ ಅವಕಾಶವಿಲ್ಲ ಎಂದು ಹೇಳಿದ್ದ ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿದ್ದ ಚಿತ್ರತಂಡ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಕೆ ಮಾಡಿತ್ತು. 
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ತನ್ನ ನಿಲುವು ಸ್ಪಷ್ಟ ಪಡಿಸಿದ್ದು ಮಾತ್ರವಲ್ಲದೇ ಚಿತ್ರ ತಂಡ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ವಜಾಗೊಳಿಸಿದೆ ಎನ್ನಲಾಗಿದೆ.
ಈ ಹಿಂದೆ ಹಾಲಿ ಲೋಕಸಭಾ ಚುನಾವಣೆ ಮುಕ್ತಾಯವಾಗುವವರೆಗೂ ಪಿಎಂ ನರೇಂದ್ರ ಮೋದಿ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟ ಪಡಿಸಿತ್ತು. 'ಚಿತ್ರವನ್ನು ತಡೆಯುವ ಹಿಂದೆ ಆಯೋಗಕ್ಕೆ ಯಾವುದೇ ಹಿತಾಸಕ್ತಿ ಇಲ್ಲ. ಆದರೆ ಚಿತ್ರದಲ್ಲಿ ಪ್ರಧಾನಿ ಮೋದಿ ಅವರನ್ನು ವೈಭವೀಕರಿಸಲಾಗಿದ್ದು, ಇದರಿಂದ ಮತದಾರರ ಮೇಲೆ ಪ್ರಭಾವ ಬೀರಿದಂತಾಗುತ್ತದೆ. ಇದೇ ಕಾರಣಕ್ಕೆ ಆಯೋಗ ಚಿತ್ರ ಬಿಡುಗಡೆಗೆ ನಿರ್ಬಂಧ ಹೇರಿದ್ದು, ಚುನಾವಣೆ ಮುಕ್ತಾಯದ ಬಳಿಕ ಚಿತ್ರ ಬಿಡುಗಡೆ ಮಾಡಬಹುದು. ಇದು ಮೋದಿಯವರ ಜೀವನ ಚರಿತ್ರೆ ಎನ್ನುವುದಕ್ಕಿಂತ ರಾಜಕೀಯ ಕಾರ್ಯಸೂಚಿಗಳನ್ನು ತೋರಿಸಿದ ಸಂತ ಚರಿತ್ರೆ ಎನ್ನಬಹುದು. ಈಗಲೇ ಬಿಡುಗಡೆ ಮಾಡಿದರೆ ಚುನಾವಣಾ ವ್ಯವಸ್ಥೆ ಆಡಳಿತ ರೂಢ ಬಿಜೆಪಿ ಪಕ್ಷದ ಕಡೆಗೆ ವಾಲಿದಂತೆ ಆಗುತ್ತದೆ. ಹಾಗಾಗಿ ಸದ್ಯ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ' ಎಂದು ತನ್ನ ನಿಲುವನ್ನು ಆಯೋಗ ಸ್ಪಷ್ಟಪಡಿಸಿತ್ತು.
SCROLL FOR NEXT