ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸೆಕ್ಸ್ ಡಾಕ್ಟರ್ ಪಾತ್ರದಲ್ಲಿ ಅಭಿನಯಿಸಿದ್ದ ಖಾಂದಾನಿ ಶಫ್ಖಾನಾ ಚಿತ್ರದ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು ಈ ನಡುವೆ ಸೋನಾಕ್ಷಿಯನ್ನು ಬಂಧಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋನಾಕ್ಷಿ ಸಿನ್ಹಾ ಅವರ ಕೈಗಳಿಗೆ ಹಿಂಬದಿಯಿಂದ ಕೈ ಕೋಳ ತೊಡಿಸುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ವಿಡಿಯೋದಲ್ಲಿ ಸೋನಾಕ್ಷಿ ನನ್ನನ್ನು ಬಂಧಿಸಲು ಸಾಧ್ಯವಿಲ್ಲ. ನಾನ್ಯಾರು ಗೊತ್ತ? ನಾನು ಮುಗ್ಧೆ, ನನಗೇನು ಗೊತ್ತಿಲ್ಲ. ನನ್ನನ್ನು ಈ ರೀತಿ ಹೇಗೆ ಬಂಧಿಸಲು ಸಾಧ್ಯ? ಎಂದೆಲ್ಲ ಹೇಳುತ್ತಿರುವುದು ಕೇಳಿಸುತ್ತದೆ.
ಮಿಷನ್ ಮಂಗಲ್ ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆಯಂತೆ. ಇದು ಪ್ರಚಾರದ ತಂತ್ರವೋ ಅಥವಾ ನಿಜವಾಗಿಯೂ ಬಂಧನಕ್ಕೊಳಗಾಗಿದ್ದಾರಾ ಇನ್ನಷ್ಟೇ ತಿಳಿಯಬೇಕಿದೆ.
ಕೆಲ ತಿಂಗಳ ಹಿಂದೆ ಕಾರ್ಯಕ್ರಮದ ಆಯೋಜಕರನ್ನು ಸೋನಾಕ್ಷಿ ವಂಚಿಸಿದ್ದು ಕಾನೂನು ತೊಂದರೆಗೆ ಸಿಲುಕಿದ್ದಾರೆ ಎನ್ನಲಾಗಿದೆ. ಉತ್ತರ ಪ್ರದೇಶದಲ್ಲಿ ಸೋನಾಕ್ಷಿ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics