ಖಯ್ಯಮ್ 
ಬಾಲಿವುಡ್

ಬಾಲಿವುಡ್ ಹಿರಿಯ ಸಂಗೀತ ನಿರ್ದೇಶಕ ಖಯ್ಯಮ್ ನಿಧನ, ಪಿಎಂ ಮೋದಿ ಸೇರಿ ಗಣ್ಯರ ಸಂತಾಪ

ಖಯ್ಯಮ್ ಎಂದೇ ಖ್ಯಾತವಾಗಿದ್ದ ಬಾಲಿವಿಡ್ ನ ಹಿರಿಯ ಸಂಗೀತ ನಿರ್ದೇಶಕ ಮೊಹಮ್ಮದ್​ ಜಹುರ್​ ಹಶ್ಮಿ ಸೋಮವಾರ ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 92 ವರ್ಷ ವಯಸ್ಸಾಗಿತ್ತು.

ಖಯ್ಯಮ್ ಎಂದೇ ಖ್ಯಾತವಾಗಿದ್ದ ಬಾಲಿವಿಡ್ ನ ಹಿರಿಯ ಸಂಗೀತ ನಿರ್ದೇಶಕ ಮೊಹಮ್ಮದ್​ ಜಹುರ್​ ಹಶ್ಮಿ ಸೋಮವಾರ ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 92 ವರ್ಷ ವಯಸ್ಸಾಗಿತ್ತು.

ಕಭಿ ಕಭಿ, ಉಮ್ರಾವ್ ಜಾನ್  ನಂತಹಾ ಪ್ರಸಿದ್ದ ಚಿತ್ರಗಳಿಗೆ ಸಂಗೀತ ನೀಡಿದ್ದ ಖಯ್ಯಮ್ ಜುಹುವಿನ ಸುಜಯ್ ಆಸ್ಪತ್ರೆಯಲ್ಲಿ ಶ್ವಾಸಕೋಶದ ಕಾಯಿಲೆಯಿಂದ ನಿಧನ ಹೊಂದಿದ್ದಾರೆ.

 "ಉಸಿರಾಟದ ತೊಂದರೆಗಳು ಮತ್ತು ವಯೋಸಹಜ ಇತರೆ ಖಾಯಿಲೆಗಳ ಕಾರಣ  ಅವರನ್ನು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 9.30 ರ ಸುಮಾರಿಗೆ ಅವರು ನಿಧನರಾದರು" ಎಂದು ಕುಟುಂಬದ ಸ್ನೇಹಿತ ಪಿಟಿಐಗೆ ತಿಳಿಸಿದ್ದಾರೆ. ಖಯ್ಯಮ್ ಪತ್ನಿ ಜಗಜೀತ್ ಕೌರ್ ಇದ್ದಾರೆಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.

17 ನೇ ವಯಸ್ಸಿನಲ್ಲಿ ಸಂಗೀತ  ಕ್ಷೇತ್ರಕ್ಕೆ ಕಾಲಿಟ್ಟ ಖಯ್ಯಮ್ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿಗೂ ಭಾಜನರಾಗಿದ್ದರು.ಅಷ್ಟೇ ಅಲ್ಲ, ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ,  ಫಿಲ್ಮ್‌ಫೇರ್ ಪ್ರಶಸ್ತಿ ಸಹ ಸಂದಿದೆ.ಕಭಿ ಕಭಿ ಮತ್ತು ಉಮ್ರಾವ್ ಜಾನ್ ಅವರಲ್ಲದೆ, ಅವರ ಇತರ  ಇಚಿತ್ರಗಳಾದ ತ್ರಿಶೂಲ್, ನೂರಿ ಆಂಡ್ ಶೋಲಾ ಔರ್ ಶಬನಮ್ ಚಿತ್ರಗಳಿಗೆ ಅವರ ಸಂಗೀತ ನಿಡಿದ್ದು ಜನಪ್ರಿಯವಾಗಿದೆ. 

ನಟಿ ಮೀನಾ ಕುಮಾರಿ ಅವರ ಆಲ್ಬಂ ಐ ರೈಟ್, ಐ ರೆಸೈಟ್ ಗೆ ಸಹ ಖಯ್ಯಮ್ ಸಂಗೀತ ಸಂಯೋಜನೆ ಮಾಡಿದ್ದರು.

ಹಿರಿಯ ಸಂಗೀತ ನಿರ್ದೇಶಕರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಲತಾ ಮಂಗೇಷ್ಕರ್ ಸೇರಿ ಹಲವಾರು  ಖ್ಯಾತನಾಮರು ಮತ್ತು ರಾಜಕಾರಣಿಗಳೂ ಕಂಬನಿ ಮಿಡಿದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT