ಶಕುಂತಲಾ ದೇವಿ ಪಾತ್ರದಲ್ಲಿ ವಿದ್ಯಾಬಾಲನ್ 
ಬಾಲಿವುಡ್

'ಶಕುಂತಲಾ ದೇವಿ’ಯಾದ ವಿದ್ಯಾಬಾಲನ್- ಮಾನವ ಕಂಪ್ಯೂಟರ್ ಜೀವನಗಾಥೆ ಬಿಡುಗಡೆ ದಿನಾಂಕ ಫಿಕ್ಸ್

ಬಾಲಿವುಡ್ ನಟ ವಿದ್ಯಾ ಬಾಲನ್ ಅಭಿನಯಿಸಿರುವ ಗಣಿತ ಪ್ರತಿಭೆಯ 'ಶಕುಂತಲಾ ದೇವಿ’ ಜೀವನಚರಿತ್ರೆ ಆಧಾರಿತ ಚಲನಚಿತ್ರ ೨೦೨೦ ರ ಮೇ ೮ ರಂದು ತೆರೆಗೆ ಬರಲಿದೆ

ನವದೆಹಲಿ:  ಬಾಲಿವುಡ್ ನಟ ವಿದ್ಯಾ ಬಾಲನ್ ಅಭಿನಯಿಸಿರುವ ಗಣಿತ ಪ್ರತಿಭೆಯ 'ಶಕುಂತಲಾ ದೇವಿ’ ಜೀವನಚರಿತ್ರೆ ಆಧಾರಿತ ಚಲನಚಿತ್ರ ೨೦೨೦ ರ ಮೇ ೮ ರಂದು ತೆರೆಗೆ ಬರಲಿದೆ

ವಿದ್ಯಾಬಾಲನ್ ಗುರುವಾರ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಶಕುಂತಲಾದೇವಿಯ ಬುದ್ಧಿ, ಮೋಡಿ ಮತ್ತು ಸಹಜ ಪ್ರತಿಭೆಗಳಿಂದ ಆಕರ್ಷಿತರಾಗಲು ಸಿದ್ಧರಾಗಿ! ಶಕುಂತಲಾದೇವಿ ನಿಮ್ಮ ಹತ್ತಿರ ಚಿತ್ರಮಂದಿರಗಳಿಗೆ ಯಾವಾಗ ಬರುತ್ತಾರೆ ಎಂದು ತಿಳಿಯಲು ವೀಡಿಯೊ ನೋಡಿ!" ಎಂದು ಬರೆದುಕೊಂಡಿರುವುದರ ಜತೆಗೆ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ

ಅನು ಮೆನನ್ ನಿರ್ದೇಶನದ ಈ ಚಿತ್ರದಲ್ಲಿ ವಿದ್ಯಾ ಬಾಲನ್ ’ಮಾನವ ಕಂಪ್ಯೂಟರ್’ ಎಂದು ಕರೆಯಲ್ಪಡುವ ಮಾನಸಿಕ ಕ್ಯಾಲ್ಕುಲೇಟರ್ ಶಕುಂತಲಾ ದೇವಿ ಪಾತ್ರದಲ್ಲಿ ನಟಿಸಿದ್ದಾರೆ.

ಈ ಹಿಂದೆ ಪಿಟಿಐಗೆ ನೀಡಿದ್ದ ಸಂದರ್ಶನವೊಂದರಲ್ಲಿ ವಿದ್ಯಾ ಬಾಲನ್ ಶಕುಂತಲಾ ದೇವಿಯಾಗಿ ತಾನು ಕಾಣಿಸಿಕೊಳ್ಳುತ್ತಿರುವುದು ಸಂಸ್ತಸ ತಂದಿದೆ, ಆಕೆ ನಿಜಕ್ಕೂ  ಬಲವಾದ ಸ್ತ್ರೀಸಮಾನತಾವಾದಿ ಧ್ವನಿಯನ್ನು ಹೊಂದಿದ್ದರು. ಯಶಸ್ಸಿನ ಪರಾಕಾಷ್ಠೆಯನ್ನು ತಲುಪುವುದಕ್ಕೆ ಹಲವರಿಗೆ ಮಾರ್ಗವನ್ನು ತೋರಿದರು.. ಆದರೆ ನನ್ನನ್ನು ನಿಜವಾಗಿಯೂ ಆಕರ್ಷಿಸುವ ಸಂಗತಿಯೆಂದರೆ, ನೀವು ಸಾಮಾನ್ಯವಾಗಿ ಮಾಒಜಿನ ಸಾಂಗತಿಗಳನ್ನು ಯಾರೂ ಗಣಿತದೊಂದಿಗೆ ಸಂಯೋಜಿಸುವುದಿಲ್ಲ ಆದರೆ ಆಕೆ ಇದಕ್ಕೆ ತದ್ವಿರುದ್ಧವಾಗಿ ಎಲ್ಲವನ್ನೂ ಗಣಿತದ ಪರಿಧಿಯೊಳಗೆ ತಂದಿದ್ದಳು. ಆಕೆ ಈ ದೇಶದ ಅತ್ಯಂತ ಸ್ಪೂರ್ತಿದಾಯಕ ಮಹಿಳೆಯರಲ್ಲಿ ಒಬ್ಬಳು ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

SCROLL FOR NEXT