ಬಾಲಿವುಡ್

ಎಂಎಸ್ ಎಸ್ ಎಚ್ಚರಿಕೆ: ಯೂಟ್ಯೂಬ್ ನಿಂದ ಪಾಕ್ ಗಾಯಕರ ಹಾಡಗಳನ್ನು ಕಿತ್ತು ಹಾಕಿದ ಟಿ ಸಿರೀಸ್

Raghavendra Adiga
ಮುಂಬೈ: ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ 40ಕ್ಕು ಹೆಚ್ಚು ಯೋಧರು ಹುತಾತ್ಮರಾದ ಬಳಿಕ ಮಹಾರಾಷ್ಟ್ರ ನವನಿರ್ಮಾಣ ಸೇನೆ ದೇಶದ ಪ್ರಖ್ಯಾತ ಸಂಗೀತ ಸಂಸ್ಥೆಗಳಿಗೆ ಪಾಕ್ ಗಾಯಕರ ಹಾಡನ್ನು ಪ್ರಮೋಟ್ ಮಾಡುವುದನ್ನು ಕೈಬಿಡಲು ಎಚ್ಚರಿಕೆ ನೀಡಿದ ಬೆನ್ನಲ್ಲೇ ಟ್-ಸಿರೀಸ್ ಸಂಸ್ಥೆ ಪಾಕಿಸ್ತಾನಿ ಗಾಯಕರ ಹಾಡುಗಳನ್ನು ತನ್ನ ಯೂ ಟ್ಯೂಬ್ ಚಾನಲ್ ನಿಂದ ತೆರೆವು ಮಾಡಿದೆ.
ಪಾಕಿಸ್ತಾನಿ ಗಾಯಕರೊಂದಿಗೆ ಕೆಲಸ ಮಾಡದಿರುವಂತೆ  ಟಿ-ಸಿರೀಸ್, ಸೋನಿ ಮ್ಯೂಸಿಕ್, ಶುಕ್ರ, ಟಿಪ್ಸ್ ಮ್ಯೂಸಿಕ್ ಮುಂತಾದ ಭಾರತೀಯ ಸಂಗೀತ ಕಂಪೆನಿಗಳಿಗೆ ನಾವು  ಆಗ್ರಹಿಸಿದ್ದೇವೆ.ಈ ಕಂಪನಿಗಳು ಅದನ್ನು ತಕ್ಷಣ ನಿಲ್ಲಿಸಬೇಕು ಅಥವಾ  ನಮ್ಮ ಕ್ರಮವನ್ನು ಎದುರಿಸಬೇಕು. ಎಂದು ಎಂಎನ್ ಎಸ್ ಚಿತ್ರಪಥ್ ಸೇನಾ ಮುಖ್ಯಸ್ಥ ಅಮೆ ಕೋಪ್ಕರ್ ಹೇಳಿದ್ದಾರೆ.
ಇತ್ತೀಚೆಗೆ ಭೂಷಣ್ ಕುಮಾರ್ ಅವರ ಟಿ-ಸೀರಿಸ್ ಪಾಕ್ ಗಾಯಕರಾದ ಮತ್ತು ಅತಿಫ್ ಅಸ್ಲಾಮ್ ಅವರೊಂದಿಗೆ ಎರಡು ವಿಭಿನ್ನ ಆಲ್ಬಮ್ ಗಳನ್ನು ತರಲು ಒಪ್ಪಂದ ಮಾಡಿಕೊಂಡಿತ್ತು.
2016ರಲ್ಲಿ ಉರಿ ದಾಳಿಯಾಗಿದ್ದ ವೇಳೆ ಸಹ ಇದೇ ಎಂಎನ್ ಎಸ್ ದೇಶದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಪಾಕಿಸ್ತಾನಿಗಳು ದೇಶ ತೊರೆದು ಹೋಗಲು  48 ಗಂಟೆಗಳ ಗಡುವನ್ನು ನಿಗದಿಪಡಿಸಿದ್ದನ್ನು ನಾವಿಲ್ಲಿ ನೆನೆಯಬಹುದು.
SCROLL FOR NEXT