ಮುಂಬೈ: ಬಾಲಿವುಡ್ ನಿರ್ಮಾಪಕ ರಾಜ್ ಕುಮಾರ್ ಬಾರ್ಜತ್ಯಾ ಅವರು ಗುರುವಾರ ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರಾಜಶ್ರೀ ಪ್ರೊಡಕ್ಷನ್ ಸಂಸ್ಥೆ ಅಧ್ಯಕ್ಷರಾಗಿದ್ದ ರಾಜ್ ಕುಮಾರ್ ಅವರು, ಹಮ್ ಆಪ್ಕೆ ಹೈ ಕೌನ್, ಹಮ್ ಸಾಥ್-ಸಾಥ್ ಹೈ, ವಿವಾಹ್, ಪ್ರೇಮ ರತನ್ ಧನ್ ಪಾಯೋ ಮತ್ತಿತರ ಚಿತ್ರಗಳನ್ನು ನಿರ್ಮಿಸಿದ್ದರು. ಅವರ ನಿರ್ಮಾಣದ ಕೊನೇ ಸಿನಿಮಾ ಹಮ್ ಚಾರ್ ಫೆ.15ರಂದು ಬಿಡುಗಡೆಗೊಂಡಿತ್ತು.
'ಹಮ್ ಆಪ್ಕೆ ಹೈ ಕೌನ್' ನಾಯಕಿ ಮಾಧುರಿ ದಿಕ್ಷಿತ್, ಪ್ರೇಮ ರತನ್ ಧನ್ ಪಾಯೋ ನಟಿ ಸೋನಂ ಕಪೂರ್ ಹಾಗೂ ಹಿರಿಯ ನಟ ಅನುಪಂ ಖೇರ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ರಾಜ್ ಕುಮಾರ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ರಾಜ್ ಕುಮಾರ್ ಅವರು ಪತ್ನಿ ಸುಧಾ ಬಾರ್ಜತ್ಯಾ, ಮಗ ಸೂರಜ್ ಬಾರ್ಜತ್ಯಾ ಅವರನ್ನು ಅಗಲಿದ್ದಾರೆ.