ಸಂಗ್ರಹ ಚಿತ್ರ 
ಬಾಲಿವುಡ್

ಬಾಲಿವುಡ್ ನಲ್ಲಿ ಮತ್ತೆ ಮೀಟೂ ಅಬ್ಬರ, ನಿರ್ದೇಶಕ ರಾಜ್ ಕುಮಾರ್ ಹಿರಾನಿ ವಿರುದ್ಧ ಗಂಭೀರ ಆರೋಪ

3 ಇಡಿಯಟ್ಸ್ ಖ್ಯಾತಿಯ ನಿರ್ದೇಶಕ ರಾಜ್ ಕುಮಾರ್ ಹಿರಾನಿ ತಮ್ಮ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಮುಂಬೈ: ಈ ಹಿಂದೆ ಇಡೀ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಮೀಟೂ ಆರೋಪ ಇದೀಗ ಮತ್ತೆ ಬಾಲಿವುಡ್ ನಲ್ಲಿ ಜೋರು ಸುದ್ದಿಗೆ ಗ್ರಾಸವಾಗಿದ್ದು, 3 ಇಡಿಯಟ್ಸ್ ಖ್ಯಾತಿಯ ನಿರ್ದೇಶಕ ರಾಜ್ ಕುಮಾರ್ ಹಿರಾನಿ ತಮ್ಮ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಮಹಿಳೆಯೇ ಆರೋಪಿಸಿರುವಂತೆ ಕಳೆದ ವರ್ಷ ತೆರೆ ಕಂಡಿದ್ದ ಸಂಜು ಚಿತ್ರ ನಿರ್ಮಾಣದ ವೇಳೆ ತಮ್ಮ ಸಹಾಯಕಿಯಾಗಿದ್ದ ನನ್ನ ಮೇಲೆ ರಾಜ್ ಕುಮಾರ್ ಹಿರಾನಿ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. 2017ರ ಹಿಟ್‌ ಸಿನಿಮಾ 'ಸಂಜು'ದಲ್ಲಿ ಅವರ ಜತೆ 'ಸಹಾಯಕಿ'ಯಾಗಿ ಕೆಲಸ ಮಾಡಿದ್ದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಮಾಧ್ಯಮವೊಂದರಲ್ಲಿ ಪ್ರಕಟವಾದ ಲೇಖನದಲ್ಲಿ ಈ ಬಗ್ಗೆ ಮಹಿಳೆ ವಿವರ ನೀಡಿದ್ದು, 2018ರ ಮಾರ್ಚ್‌ನಿಂದ ಸೆಪ್ಟೆಂಬರ್‌ ನಡುವೆ ಒಂದಕ್ಕಿಂತ ಹೆಚ್ಚು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. 
2018ರ ನವೆಂಬರ್‌ 3 ರಂದು ಈ ಮಹಿಳೆ ಸಂಜು ಚಿತ್ರದ ಸಹ ನಿರ್ಮಾಪಕ ವಿಧು ವಿನೋದ್‌ ಚೋಪ್ರಾ ಅವರಿಗೆ ವಿವರವಾದ ಇ-ಮೇಲ್‌ ಮಾಡಿದ್ದು, 2018ರ ಏಪ್ರಿಲ್‌ 9ರಂದು ಹಿರಾನಿ ಅವರು ತಮ್ಮ ಗೃಹ ಕಚೇರಿಯಲ್ಲಿ ತನ್ನನ್ನು ದುರ್ಬಳಕೆ ಮಾಡಿಕೊಂಡರು ಎಂದಿದ್ದಾರೆ. ಹಿರಾನಿ ಅವರನ್ನು ತಂದೆಯ ಸ್ಥಾನದಲ್ಲಿಟ್ಟು ನೋಡುತ್ತಿದ್ದುದಾಗಿ ಹೇಳಿರುವ ಆಕೆ ಅಂದೇ ಪ್ರತಿಭಟನೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಜತೆಗೆ ಹಿರಾನಿ ಅವರಿಗೆ ಅಂದೇ ಇ ಮೇಲ್‌ ಮಾಡಿದ್ದಾಗಿಯೂ ವಿವರಿಸಿದ್ದಾರೆ. 
'ಏಪ್ರಿಲ್‌ 9ರ ರಾತ್ರಿ ನನ್ನ ಮನಸು, ದೇಹ ಮತ್ತು ಹೃದಯವನ್ನು ದುರ್ಬಳಕೆ ಮಾಡಿಕೊಳ್ಳಲಾಯಿತು. ಈ ದುರ್ಬಳಕೆ ಮುಂದಿನ ಆರು ತಿಂಗಳುಗಳ ಕಾಲ ಮುಂದುವರಿಯಿತು. ಚೋಪ್ರಾ ಅವರು ಬೆದರಿಸಿ ನನ್ನನ್ನು ಬಳಸಿಕೊಂಡರು,' ಎಂದು ಲೇಖನದಲ್ಲಿ ವಿವರಿಸಲಾಗಿದೆ. ತಂದೆಯ ಗಂಭೀರ ಅನಾರೋಗ್ಯ ಮತ್ತು ಉದ್ಯೋಗದ ಅನಿವಾರ್ಯತೆಯಿಂದಾಗಿ ತಾನು ಹಿರಾನಿ ಅವರ ದುರ್ವರ್ತನೆಯನ್ನು ಸಹಿಸಿಕೊಂಡಿದ್ದಾಗಿ ಮಹಿಳೆ ಹೇಳಿದ್ದರು. 
ಆದರೆ, ಹಿರಾನಿ ಅವರ ವಕೀಲ ಆನಂದ್‌ ದೇಸಾಯಿ ಅವರು ಈ ಆರೋಪಗಳನ್ನು ಸುಳ್ಳು, ದುರುದ್ದೇಶಪ್ರೇರಿತ ಮತ್ತು ಮಾನಹಾನಿಕರ ಎಂದು ತಳ್ಳಿಹಾಕಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!