ಮುಂಬೈ: ನನಗೆ ಇದಾಗಲೇ ಮೂರು ವರ್ಷದ ಮಗಳಿದ್ದಾಳೆ, ನಾನು ಇಷ್ತ ಬಂದಾಗ ಮದುವೆಯಾಗುತ್ತೇನೆ ಎಂದು ಬಾಲಿವುಡ್ ನಟಿ ಮಹಿ ಗಿಲ್ ಹೇಳಿದ್ದಾರೆ. ಈ ಮೂಲಕ ತಾವೆಷ್ಟು ಬೋಲ್ಡ್ ಆಗಿದ್ದೇವೆಂದು ಆಕೆ ಸಾರಿದ್ದಾರೆ.
ಸಾಹೇಬ್, ಬಿವಿ ಔರ್ ಗ್ಯಾಂಗ್ಸ್ಟರ್ ಮತ್ತು ದೇವ್ -ಡಿ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಮಹಿ ಗಿಲ್ ಇತ್ತೀಚೆಗೆ ತಾವು ನೀಡಿದ್ದ ಸಂದರ್ಶನವೊಂದರಲ್ಲಿ ಈ ಮೇಲಿನ ಹೇಲೀಕೆ ನಿಡಿದ್ದಾರೆ.
"ನಾನು ಹಲವಾರು ತಿಂಗಳಿನಿಂದ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದೇನೆ. ಅದಲ್ಲದೆ ನನಗೀಗಾಗಲೇ ಮಗಳಿದ್ದು ಮುಂದಿನ ಆಗಸ್ಟ್ ಗೆ ಆಕೆಗೆ ಮೂರು ವರ್ಷವಾಗಲಿದೆ. ಆದರೆ ನಾನೀಗಲೂ ಅವಿವಾಹಿತಳು"
ಸಿಂಗಲ್ ಪೇರೆಂಟ್ ಆಗಿರುವ ಬಗೆಗೆ ನನಗೆ ಹೆಮ್ಮೆ ಇದೆ, ಎನ್ನುವ ನಟಿ ನನಗೆ ಹೀಗೆ ಸಿಂಗಲ್ ಆಗಿ ಇರುವುದೇ ತುಂಬ ಇಷ್ಟ. ಮದುವೆಯಾಗದೆಯೇ ಸಂತೋಷದಿಂದ ಇರಬಹುದೆಂದು ನಾನು ಭಾವಿಸುತ್ತೇನೆ.ವಿವಾಹ ಎಂಬುದು ಅತ್ಯಂತ ಸುಂದರ ಪದ್ಧತಿ. ಆದರೆ ಇದು ಅವರವರ ವೈಯುಕ್ತಿಕ ಆಯ್ಕೆಯಾಗಿದೆ. ನನಗೆ ಪ್ರೀತಿ ಮುಖ, ಆದರೆ ಸ್ವಾತಂತ್ರಕ್ಕೆ ಅಡ್ಡಿಯಾಗುವಂತಿರಬಾರದು. ಅಂತಹವರು ನನಗೀಗಾಗಲೇ ದೊರಕಿದ್ದಾರೆ.ಅವರೀಗ ಗೋವಾದಲ್ಲಿದ್ದು ನಾವಿಬ್ಬರೂ ಲಿವ್ ಇನ್ ಸಂಬಂಧದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಈ ವಿಚಾರವನ್ನು ಇಷ್ಟು ದಿನ ಏಕೆ ಹೇಳಿಲ್ಲ ಎಂದು ಕೇಳಿದರೆ ನಟಿ "ಇಷ್ಟು ದಿನ ಯಾರೂ ನನ್ನನ್ನು ಈ ವಿಷಯ ಕೇಳಿರಲಿಲ್ಲ" ಎಂದಿದ್ದಾರೆ.
ಬಾಲಿವುಡ್ ನ ಇನ್ನೋರ್ವ ನಟಿ ನೀನಾ ಗುಪ್ತಾ ಹಿಂದೊಮ್ಮೆ ಇದೇ ರೀತಿಯಾಗಿ ವಿವಾಹವಾಗದೆ ಮಗುವಿನ ತಾಯಿಯಾಗಿರುವ ಬಗೆಗೆ ಬಹಿರಂಗಪಡಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics