ಚಿತ್ರದ ಪ್ರಚಾರ ಸಮಾರಂಭದಲ್ಲಿ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್, ಕಂಗನಾ ರಾನಾವತ್ ಮತ್ತು ನಟ ರಾಜ್ ಕುಮಾರ್ ರಾವ್ 
ಬಾಲಿವುಡ್

ವರದಿಗಾರನ ಜೊತೆ ಕಂಗನಾ ರಾನಾವತ್ ವಾಗ್ವಾದ: ಪತ್ರಕರ್ತರ ಕ್ಷಮೆ ಕೋರಿದ ಬಾಲಾಜಿ ಟೆಲಿಫಿಲ್ಮ್ಸ್

ಪಿಟಿಐ ಸುದ್ದಿಸಂಸ್ಥೆಯ ವರದಿಗಾರರ ಜೊತೆ ಬಾಲಿವುಡ್ ನಟಿ ಕಂಗನಾ ರಾನಾವತ್ ವಾಗ್ವಾದ ನಡೆಸಿದ ...

ಮುಂಬೈ: ಪಿಟಿಐ ಸುದ್ದಿಸಂಸ್ಥೆಯ ವರದಿಗಾರರ ಜೊತೆ ಬಾಲಿವುಡ್ ನಟಿ ಕಂಗನಾ ರಾನಾವತ್ ವಾಗ್ವಾದ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಏಕ್ತಾ ಕಪೂರ್ ಅವರ ನಿರ್ಮಾಣ ಸಂಸ್ಥೆ ಬಾಲಾಜಿ ಟೆಲಿಫಿಲ್ಮ್ಸ್ ಬುಧವಾರ ಪತ್ರಕರ್ತರ ಕ್ಷಮೆ ಕೇಳಿದೆ. 
ಕಳೆದ ಭಾನುವಾರ ನಡೆದ ಸಮಾರಂಭದಲ್ಲಿ ನಡೆದ ಅಹಿತಕರ ಘಟನೆಗೆ ಕ್ಷಮೆ ಕೋರುವುದಾಗಿ ಬಾಲಾಜಿ ಟೆಲಿಫಿಲ್ಮ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಮೊನ್ನೆ ಜುಲೈ 7ರಂದು ಸಮಾರಂಭದಲ್ಲಿ ನಮ್ಮ ಚಿತ್ರ ಜಡ್ಜ್ ಮೆಂಟಲ್ ಹೈ ಕ್ಯಾ ಮತ್ತು ಪತ್ರಕರ್ತ ಜಸ್ಟಿನ್ ರಾವ್ ನಡುವೆ ನಡೆದ ಮಾತುಕತೆಗೆ ಸಂಬಂಧಿಸಿದಂತೆ ಹಲವು ರೀತಿಯಲ್ಲಿ ವರದಿಗಳು ಬಂದಿವೆ. ದುರದೃಷ್ಟವಶಾತ್ ಕಾರ್ಯಕ್ರಮ ವಿಕೋಪಕ್ಕೆ ತಿರುಗಿತು. 
ಈ ವಿಷಯದಲ್ಲಿ ಭಾಗಿಯಾದ ವ್ಯಕ್ತಿಗಳು ತಮ್ಮ ದೃಷ್ಟಿಕೋನದಲ್ಲಿ ಮಾತನಾಡಿದ್ದಾರೆ. ಆದರೆ ಅದು ನಮ್ಮ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಆಗಿರುವುದರಿಂದ ಚಿತ್ರದ ನಿರ್ಮಾಪಕರಾಗಿ ನಾವು ಈ ಘಟನೆಗೆ ಸಂಬಂಧಿಸಿ ವಿಷಾದ ವ್ಯಕ್ತಪಡಿಸುತ್ತಿದ್ದು ಕ್ಷಮೆ ಕೋರುತ್ತಿದ್ದೇವೆ. ಯಾರ ಭಾವನೆಗಳಿಗೂ ನೋವುಂಟುಮಾಡುವುದು ಮತ್ತು ಯಾರಿಗೂ ಅಗೌರವ ತೋರಿಸುವುದು ನಮ್ಮ ಉದ್ದೇಶವಾಗಿರಲಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 World Cup 2026: Allen ದಾಖಲೆ ಶತಕ; ಅಜೇಯ ಆಫ್ರಿಕಾ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ನ್ಯೂಜಿಲ್ಯಾಂಡ್!

Video: ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಅಮೆರಿಕ ದಾಳಿ; ಕನಿಷ್ಠ 87 ನಾವಿಕರು ಸಾವು

'ನರಕ.. ಇರಾನಿಯನ್ನರಲ್ಲ ಅಂದ್ರೆ ಮುಚ್ಕೊಂ*ರಿ': Khamenei ಸಾವಿಗೆ ಅಳುವ ಭಾರತೀಯ ಮುಸ್ಲಿಂ ಮಹಿಳೆಯರ ಲೇವಡಿ ಮಾಡಿದ ಇರಾನ್ ಮಹಿಳೆಯರು!

ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಏರಿಕೆ ಶಾಕ್; ಆದ್ರೆ ರೈತರಿಗೆ ಗುಡ್ ನ್ಯೂಸ್!

ಬಿಹಾರದಲ್ಲಿ ರಾಜಕೀಯ ಬಿರುಗಾಳಿ: ಮುಖ್ಯಮಂತ್ರಿ ಸ್ಥಾನಕ್ಕೆ ನಿತಿಶ್ ಕುಮಾರ್ ರಾಜೀನಾಮೆ?

SCROLL FOR NEXT