ಬಾಲಿವುಡ್

'ಸ್ಟ್ರೀಟ್ ಡಾನ್ಸರ್' ಚಿತ್ರದಲ್ಲಿ ಮತ್ತೊಮ್ಮೆ 'ಮುಕ್ಕಾಲಾ ಮುಕಾಬುಲಾ' ಹಾಡು!

Srinivas Rao BV
ಮುಂಬಯಿ: ಬಾಲಿವುಡ್ ನೃತ್ಯ ಸಂಯೋಜಕ ಪ್ರಭು ದೇವ್ ತಾವು ನಿರ್ದೇಶಿಸಲಿರುವ 'ಸ್ಟ್ರೀಟ್ ಡಾನ್ಸರ್' ಚಿತ್ರದಲ್ಲಿ ಮತ್ತೊಮ್ಮೆ 'ಮುಕ್ಕಾಲಾ ಮುಕಾಬುಲಾ' ಹಾಡನ್ನು ರಿಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ.
ಸದ್ಯ ಬಾಲಿವುಡ್ ನಲ್ಲಿ ಹಳೆಯ ಹಾಡಿಗೆ ಹೊಸ ಹೊಳಪು ಕೊಡುವ ಕಾರ್ಯ ನಡೆಯುತ್ತಿದೆ. ಈಗ 90ರ ದಶಕದ ಸೂಪರ್ ಹಿಟ್ 'ಮುಕ್ಕಾಲಾ ಮುಕಾಬುಲಾ' ಹಾಡು ರಿ-ಕ್ರಿಯೇಟ್ ಆಗಲಿದೆ. ಈ ಹಾಡು 1994ರಲ್ಲಿ 'ಕಾದಲನ್' ತಮಿಳು ಚಿತ್ರದಲ್ಲಿ ಮೊದಲ ಬಾರಿಗೆ ತೆರೆ ಕಂಡಿತ್ತು. ನಂತರ ಹಿಂದಿಯ 'ಹಮ್ಸೇ ಹೈ ಮುಕಾಬುಲಾ' ಚಿತ್ರದಲ್ಲಿ ಹಾಡನ್ನು ಬಳಸಿಕೊಂಡಿದ್ದು, ಎಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದರು.
ಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರದಲ್ಲಿ ಪ್ರಭುದೇವ್ ಅವರು ನೃತ್ಯ ಮಾಡುವ ಸಂದರ್ಭದಲ್ಲಿ ಈ ಹಾಡನ್ನು ಮತ್ತೊಮ್ಮೆ ರಿಕ್ರಿಯೇಟ್ ಮಾಡುವ ಅಗತ್ಯವಿತ್ತು.  ಈ ಹಾಡಿಗೂ ಮೊದಲಿನ ಹಾಡಿನಷ್ಟೇ ಮಹತ್ವ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.
SCROLL FOR NEXT