ಚಿತ್ರದ ಪೋಸ್ಟರ್ 
ಬಾಲಿವುಡ್

ಬಾಕ್ಸ್ ಆಫೀಸ್ ಚಿಂದಿ,ಬಿಡುಗಡೆಯಾದ ಕೇವಲ 2 ದಿನದಲ್ಲೇ 73. 30 ಕೋಟಿ ಬಾಚಿದ 'ಭಾರತ್ '

ಆಲಿ ಅಬ್ಬಾಸ್ ಜಾಫರ್ ನಿರ್ದೇಶನದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ಭಾರತ್ ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಬಿಡುಗಡೆಯಾದ ಕೇವಲ 2 ಎರಡು ದಿನಗಳಲ್ಲಿಯೇ 73 ಕೋಟಿ 30 ಲಕ್ಷ ರೂಪಾಯಿ ಬಾಚಿದೆ.

ಮುಂಬೈ: ಆಲಿ ಅಬ್ಬಾಸ್ ಜಾಫರ್ ನಿರ್ದೇಶನದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ  'ಭಾರತ್ ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಬಿಡುಗಡೆಯಾದ ಕೇವಲ 2 ಎರಡು ದಿನಗಳಲ್ಲಿಯೇ  73 ಕೋಟಿ 30 ಲಕ್ಷ ರೂಪಾಯಿ ಬಾಚಿದೆ.
ಈದ್ ಉಲ್ ಫಿತ್ತರ್ ದಿನದಂದು ಬಿಡುಗಡೆಯಾದ ಈ ಚಿತ್ರ ಮೊದಲ ದಿನವೇ 42 ಕೋಟಿ 30 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು  ಮಾಡಿತ್ತು.ಈಗ  ಕೇವಲ ಎರಡೇ ದಿನದಲ್ಲೇ 73. 30 ಕೋಟಿ ರೂಪಾಯಿ  ಗಳಿಸುವ ಮೂಲಕ ಹಿಂದಿ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. 
ಆದಾಗ್ಯೂ, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸಲ್ಮಾನ್ ಖಾನ್ ಅವರನ್ನು ನಿರೀಕ್ಷೆಗೆ ತಕ್ಕಂತೆ ತೋರಿಸಿಲ್ಲ ಎಂಬಂತಹ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. 
ಇನ್ನೂ ಚಿತ್ರದಲ್ಲಿ ಸಲ್ಮಾನ್ ಖಾನ್ ಜೋಡಿಯಾಗಿ ಕತ್ರಿನಾ ಕೈಫ್ ಅಭಿನಯಿಸಿದ್ದಾರೆ. ಕಳೆದ ವರ್ಷ ನಿಕ್ಕಿ ಜೋನ್ಸ್ ಜೊತೆಗೆ ವಿವಾಹದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಪ್ರಿಯಾಂಕಾ ಚೋಪ್ರಾ ಚಿತ್ರದಿಂದ ಹೊರಬಂದ ನಂತರ ಕತ್ರಿನಾ ಕೈಫ್  ನಾಯಕಿಯಾಗಿ ಅಭಿನಯಿಸಿದ್ದಾರೆ.ಸುನೀಲ್ ಗ್ರೌವರ್ , ಸೊನಾಲಿ ಕುಲಕರ್ಣಿ, ಜಾಕಿ ಶ್ರಾಫ್ , ದಿಶಾ ಪಠಾಣಿ ಮತ್ತಿತರ ತಾರಾಬಳಗವಿದೆ. 
'ಭಾರತ್'  ದೇಶಭಕ್ತ ವ್ಯಕ್ತಿಯ ಕತೆಯಾಗಿದ್ದು, ಆ ಮೂಲಕ ಭಾರತ-ಪಾಕಿಸ್ತಾನ ವಿಭಜನೆಯ ನಂತರ ದೇಶದ ಬದಲಾದ ಸ್ವರೂಪ ಹಾಗೂ ಅದರೊಂದಿಗೆ ಬದಲಾಗುವ ಆಂತರಿಕ ಭಾವನೆಯನ್ನು ತೋರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!