ಬಾಲಿವುಡ್

ಕಾಶ್ಮೀರ ವಿವಾದಕ್ಕೆ 'ಸರಿಯಾದ ರೀತಿಯ ಶಿಕ್ಷಣ' ಪರಿಹಾರವಾಗಬಹುದು: ಸಲ್ಮಾನ್ ಖಾನ್

Lingaraj Badiger
ಮುಂಬೈ: ಸರಿಯಾದ ರೀತಿಯ ಶಿಕ್ಷಣದಿಂದ ಸಂಘರ್ಷ ಪೀಡಿತ ಕಾಶ್ಮೀರದ ವಿವಾದವನ್ನು ಇತ್ಯರ್ಥಪಡಿಸಬಹುದು ಎಂದು ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರು ಹೇಳಿದ್ದಾರೆ.
ಸಲ್ಮಾನ್ ಖಾನ್ ನಿರ್ಮಾಣದ 'ನೋಟ್ ಬುಕ್' ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಇದರಲ್ಲಿ ನಟ ಮೊನಿಶ್ ಭಾಲ್  ಪುತ್ರಿ ಪ್ರನೂತನ್ ಹಾಗೂ ಹೊಸ ಪ್ರತಿಭೆ ಝಹೀರ್ ಇಕ್ಲಾಬ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರನೂತನ್ ಹಾಗೂ ಝಹೀರ್ ಚಿತ್ರದಲ್ಲಿ ಶಾಲಾ ಶಿಕ್ಷಕ, ಶಿಕ್ಷಕಿಯಾಗಿದ್ದಾರೆ.
ಸಂದರ್ಶನವೊಂದರಲ್ಲಿ, ಶಿಕ್ಷಣದಿಂದ ಕಣಿವೆ ರಾಜ್ಯದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಲ್ಮಾನ್ ಖಾನ್, ಎಲ್ಲರೂ ಶಿಕ್ಷಣ ಪಡೆಯುತ್ತಾರೆ. ಆದರೆ ಸರಿಯಾದ ರೀತಿಯ ಶಿಕ್ಷಣ ಪಡೆಯುವುದು ತುಂಬಾ ಮುಖ್ಯ ಎಂದಿದ್ದಾರೆ.
ಪರೋಕ್ಷವಾಗಿ ಪುಲ್ವಾಮ ಉಗ್ರ ದಾಳಿಗೆ ಪ್ರತಿಕ್ರಿಯಿಸಿದ ಸಲ್ಲು, ದಾಳಿ ನಡೆಸಿದ್ದು ಯಾರು? ಆತನೂ ಉನ್ನತ ಶಿಕ್ಷಣ ಪಡೆದವನು. ಆದರೆ ಆತನ ಶಿಕ್ಷಕರು, ಮಾರ್ಗದರ್ಶಕರು ತಪ್ಪಾಗಿರಬಹುದು ಎಂದರು.
ನಮ್ಮ ನೋಟ್ ಬುಕ್ ಚಿತ್ರವೂ ಅದೇ ಹಿನ್ನೆಲೆಯನ್ನು ಹೊಂದಿದ್ದು, ನಮ್ಮ ಮಕ್ಕಳು ಹಿಂಸಾಪ್ರವೃತ್ತಿಯಿಂದ ಹೊರಬರಬೇಕು ಎಂದು ಹೇಳಿದ್ದಾರೆ.
ನೋಟ್ ಬುಕ್ ಚಿತ್ರ ಮಾರ್ಚ್ 29ರಂದು ತೆರೆಗೆ ಬರಲಿದೆ.
SCROLL FOR NEXT