ತಮಿಳುನಾಡು ಮಾಜಿ ಸಿಎಂ ಜಯಲಲಿತಾ, ಕಂಗನಾ ರಾನಾವತ್ 
ಬಾಲಿವುಡ್

ಮಾಜಿ ಸಿಎಂ ಜಯಲಲಿತಾ ಜೀವನಾಧಾರಿತ 'ತಲೈವಿ' ಸಿನಿಮಾದಲ್ಲಿ ಕಂಗನಾ ರಾನಾವತ್

ಮಣಿಕರ್ಣಿಕಾ ಸಿನಿಮಾದಲ್ಲಿ ಜಾನ್ಸಿ ರಾಣಿ ಲಕ್ಷ್ಮೀ ಬಾಯಿ ಪಾತ್ರ ಮಾಡಿದ ಜನಮನಸೆಳೆದಿದ್ದ ಕಂಗನಾ...

ಮಣಿಕರ್ಣಿಕಾ ಸಿನಿಮಾದಲ್ಲಿ ಜಾನ್ಸಿ ರಾಣಿ ಲಕ್ಷ್ಮೀ ಬಾಯಿ ಪಾತ್ರ ಮಾಡಿದ ಜನಮನಸೆಳೆದಿದ್ದ ಕಂಗನಾ ರಾನಾವತ್ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನ ಕಥೆಯಾಧಾರಿತ ಚಿತ್ರದಲ್ಲಿ ನಟಿಸಲಿದ್ದಾರೆ.
ಅದರ ಹೆಸರು ತಲೈವಿ. ವಿಜಯ್ ನಿರ್ದೇಶನದ ತಲೈವಿ ಚಿತ್ರಕ್ಕೆ ಬಾಹುಬಲಿ ಖ್ಯಾತಿಯ ವಿಜೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಕಂಗನಾ ಅವರ ಮಣಿಕರ್ಣಿಕಾ ಚಿತ್ರಕ್ಕೂ ಸಹ ವಿಜೇಂದ್ರ ಪ್ರಸಾದ್ ಅವರೇ ಕಥೆ ಬರೆದಿದ್ದರು.
ಚಿತ್ರಕ್ಕೆ ಜಯಲಲಿತಾ ಅವರ ಜೀವನದ ನಿಖರ ಮಾಹಿತಿಗಳು ಮತ್ತು ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಸತತ 9 ತಿಂಗಳುಗಳ ಕಾಲ ಸಂಶೋಧನೆ ನಡೆಸಿದೆಯಂತೆ. ಫೆಬ್ರವರಿ 24ರಂದು ಜಯಲಲಿತಾ ಅವರ ಹುಟ್ಟುಹಬ್ಬದ ದಿನ ಚಿತ್ರಕ್ಕೆ ಚಾಲನೆ ಸಿಕ್ಕಿದೆ.
ಹಿಂದಿಯಲ್ಲಿ ಕೂಡ ಜಯ ಶೀರ್ಷಿಕೆಯಡಿ ಚಿತ್ರ ತಯಾರಾಗುತ್ತಿದೆ. ವಿಷ್ಣುವರ್ಧನ್ ಇದುರಿ ಮತ್ತು ಶೈಲೇಶ್ ಆರ್ ಸಿಂಗ್ ವಿಬ್ರಿ ಮತ್ತು ಕರ್ಮ ಮೀಡಿಯಾ ಎಂಟರ್ಟೈನ್ ಮೆಂಟ್ ನಡಿ ತಯಾರಾಗುತ್ತಿರುವ ಜಯಲಲಿತಾ ಕಥೆಯಾಧಾರಿತ ಚಿತ್ರಕ್ಕೆ ಜಿ ವಿ ಪ್ರಕಾಶ್ ಅವರ ಸಂಗೀತ ಮತ್ತು ನೀರವ್ ಶಾ ಅವರ ಸಂಗೀತವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!