ಬಾಲಿವುಡ್

ಕೃಷ್ಣಮೃಗ ಬೇಟೆ ಪ್ರಕರಣ: ಸೈಫ್ , ಸೊನಾಲಿ, ನೀಲಂ, ಟಬುಗೆ ಹೊಸ ನೋಟಿಸ್ ನೀಡಿದ ರಾಜಸ್ತಾನ ಹೈಕೋರ್ಟ್

Nagaraja AB

ಜೋಧ್ ಪುರ: 1998ರಲ್ಲಿ ನಡೆದಿದ್ದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್  ಹಾಗೂ ನಟಿಯರಾದ  ಸೊನಾಲಿ ಬೇಂದ್ರೆ, ನೀಲಂ ಕೊಠಾರಿ, ಟಬುಗೆ  ರಾಜಸ್ತಾನ ಹೈಕೋರ್ಟಿನ ಜೋಧ್ ಪುರ ಪೀಠ ಮತ್ತೆ ಹೊಸದಾದ ನೋಟಿಸ್ ನೀಡಿದೆ.

ಇವರನ್ನು ದೋಷಮುಕ್ತಗೊಳಿಸಿ ಕಳೆದ ವರ್ಷ ಏಪ್ರಿಲ್ 5 ರಂದು ಸಿಜೆಎಂಸಿ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ರಾಜಸ್ತಾನ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ  ಹೈಕೋರ್ಟಿನ ಏಕ ಸದಸ್ಯ ಪೀಠ ಈ ನೋಟಿಸ್  ನೀಡಿದೆ.

ಕೃಷ್ಣಮೃಗ ಬೇಟಿ ಪ್ರದೇಶದಲ್ಲಿ ಸೈಫ್ ಅಲಿಖಾನ್ ಜೊತೆಯಲ್ಲಿದ್ದ ದುಷ್ಯಂತ್ ಸಿಂಗ್ ಅವರಿಗೂ ನೋಟಿಸ್ ನೀಡಲಾಗಿದೆ. ಎಂಟು ವಾರಗಳ ನಂತರ ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶ ಗಾರ್ಗ್ ಅವರು ನಿರ್ದೇಶಿಸಿದ್ದಾರೆ.

ಆರೋಪಗಳಿಂದ ದೋಷಮುಕ್ತಗೊಳಿಸಿರುವುದನ್ನು ಪ್ರಶ್ನಿಸಿ ರಾಜ್ಯಸರ್ಕಾರ ಸಲ್ಲಿಸಿರುವ ಮೇಲ್ಮನವಿ ಕುರಿತು ಪ್ರತಿವಾದಿಗಳಿಗೆ  ಮಾರ್ಚ್ 11ರಂದು  ಹೈಕೋರ್ಟ್ ನೋಟಿಸ್ ನೀಡಿತ್ತು.

1998ರ ಬ್ಲಾಕ್ ಬೂಸ್ಟರ್ ಚಿತ್ರ ಹಮ್ ಸಾಥ್ ಸಾಥ್ ಹೈನ್ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಕೃಷ್ಣಮೃಗ ಬೇಟಿ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಪರಿಗಣಿಸಿದ ಸಿಜೆಎಂ ನ್ಯಾಯಾಲಯ, ಐದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂ ವಿಧಿಸಿತ್ತು.ಆದರೆ, ಸಹ ನಟ ಸೈಫ್ ಅಲಿಖಾನ್, ನೀಲಂ, ಮತ್ತು ಟಬು ಅವರನ್ನು ದೋಷಮುಕ್ತಗೊಳಿಸಲಾಗಿತ್ತು.

SCROLL FOR NEXT