ಬಾಲಿವುಡ್

ಸೋದರನೊಂದಿಗಿನ ರಕ್ಷಾ ಬಂಧನ ನೆನಪನ್ನು ಹಂಚಿಕೊಂಡ ಸುಶಾಂತ್ ಸಿಂಗ್ ಸೋದರಿ

ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ರಕ್ಷಾ ಬಂಧನ್ ಆಚರಣೆಯಂದು ಅಮೂಲ್ಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸುಶಾಂತ್ ಹಾಗೂ ಶ್ವೇತಾ ಸಿಂಗ್ ಬಾಲ್ಯದಲ್ಲಿ ರಾಖಿ ಹಬ್ಬ ಆಚರಿಸಿಕೊಂಡ ಕ್ಷಣಗಳು ಸೆರೆಯಾಗಿದೆ.

ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ರಕ್ಷಾ ಬಂಧನ್ ಆಚರಣೆಯಂದು ಅಮೂಲ್ಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಸುಶಾಂತ್ ಹಾಗೂ ಶ್ವೇತಾ ಸಿಂಗ್ ಬಾಲ್ಯದಲ್ಲಿ ರಾಖಿ ಹಬ್ಬ ಆಚರಿಸಿಕೊಂಡ ಕ್ಷಣಗಳು ಸೆರೆಯಾಗಿದೆ.

“ಹ್ಯಾಪಿ ರಕ್ಷಾಬಂಧನ್ ಮೇರಾ ಸ್ವೀಟ್ ಸಾ ಬೇಬಿ ... ಬಹುತ್ ಪ್ಯಾರ್ ಕಾರ್ಟೆ ಹೈ ಹಮ್ ಆಪ್ಕೊ ಜಾನ್.... ಔರ್ಹಮೇಶ ಕಾರ್ಟೆ ರಹೇಂಗೆ ...  ನೀನು ಎಲ್ಲೇ , ಹೇಗೆ ಇದ್ದರೂ ಸದಾ ನಮಗೆ ಹೆಮ್ಮೆಯ ನೆನಪಾಗಿದ್ದೀ...@sushantsinghrajput #happyrakshabandhan,”ಶ್ವೇತಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಸುಶಾಂತ್ ಅವರ ಮಾಜಿ ಗೆಳತಿ ಅಂಕಿತಾ ಲೋಖಂಡೆ  ಸಹ ಸಾಮಾಜಿಕ ತಾಣದಲ್ಲಿ ತಮ್ಮ ನೆನಪು ಹಂಚಿಕೊಂಡಿದ್ದು ಶ್ವೇತಾ ಅವರ ಪೋಸ್ಟ್ ಗೆ . "Diiiiiiiii,"  ಎಂದು ಕಮೆಂಟ್ ಮಾಡಿದ್ದಾರೆ.

ಸುಶಾಂತ್ ಅವರ ಹಿರಿಯ ಸಹೋದರಿ ನೀತು ಸಿಂಗ್ ಅವರನ್ನು ‘ರಾಣಿ ಡಿ’ ಎಂದು ಪ್ರೀತಿಯಿಂದ ಸಂಬೋಧಿಸಿದ್ದು, ಅವರಿಗಾಗಿ ಒಂದು ಭಾವನಾತ್ಮಕ  ನೋಟ್ ಸಹ ಬರೆದಿದ್ದಾರೆ. “ಇಂದು ನಿನ್ನ ದಿನ. ಇಂದು ನಮ್ಮ ದಿನ. ಇಂದು ರಾಖಿ.ಹಬ್ಬ, 35 ವರ್ಷಗಳಲ್ಲಿ ಮೊದಲ ಬಾರಿಗೆ ಪೂಜಾ ಕೋಣೆಯನ್ನು  ಅಲಂಕರಿಸಲಾಗಿದೆ, ದೀಪ ಬೆಳಗಲಾಗಿದೆ.  ಆದರೆ ನಾನು ನಿನಗೆ ಆರತಿ ಮಾಡಲು ಸಾಧ್ಯವಿಲ್ಲ. ನಿನ್ನ ಮಣಿಕಟ್ಟಿನ ಮೇಲೆ ರಾಖಿಯನ್ನು ಕಟ್ಟಲು ಸಾಧ್ಯವಿಲ್ಲ. ನಾನು ನಿನಗೆ ಸಿಹಿತಿಂಡಿಗಳನ್ನು ನೀಡಲು ಸಾಧ್ಯವಿಲ್ಲ. ನಾನು ನಿನ್ನ ಹಣೆಗೆ ಮುತ್ತಿಡಲು ಸಾಧ್ಯವಿಲ್ಲ. ನಾನು ನಿನ್ನನ್ನು ತಬ್ಬಿಕೊಳ್ಳಲಾರೆ. ”

"ನೀನು ಜನಿಸಿದಾಗ ಜೀವನವು ಪ್ರಕಾಶಮಾನವಾಯಿತು. ನಿನ್ನ ಜೀವಿತಾವಧಿಯಲ್ಲಿ ನೀನು  ಸಂತೋಷವನ್ನು ಹರಡುತ್ತಿದ್ದೆ. ಆದರೆ ಈಗ ನೀನು ಇಲ್ಲಿಲ್ಲದ ಕಾರಣ, ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ನೀನು ಇಲ್ಲದೆ ಹೇಗೆ ಬದುಕಬೇಕು ಎಂದು ನನಗೆ ತಿಳಿದಿಲ್ಲ. ನಾನು ಈ ದಿನವನ್ನು ನೋಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ - ನೀನು ಇಲ್ಲದ ದಿನ.... ನಾವು ಒಟ್ಟಿಗೆ ತುಂಬಾ ಕಲಿತಿದ್ದೇವೆ. ಆದರೆ ನೀನು ಇಲ್ಲದೆ ಬದುಕಲು ನಾನು ಹೇಗೆ ಕಲಿಯಬೇಕು? ನೀನು ನನಗೆ ಹೇಳು. ಎಂದೆಂದಿಗೂ ನಿನ್ನ ರಾಣಿ  ಡಿ, ” ಹಿಂದಿಯಲ್ಲಿ ಬರೆದ ಪೋಸ್ಟ್ ನಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

SCROLL FOR NEXT