ಸುಶಾಂತ್ ಸಿಂಗ್ ಸಾವಿನ ತನಿಖೆ: 'ಆಸ್ಪತ್ರೆಯಲ್ಲಿ ರಿಯಾ ಚಕ್ರವರ್ತಿ ತಪ್ಪಿತಸ್ಥರಂತೆ ವರ್ತಿಸುತ್ತಿದ್ದರು' 
ಬಾಲಿವುಡ್

ಸುಶಾಂತ್ ಸಿಂಗ್ ಸಾವಿನ ತನಿಖೆ: "ಆಸ್ಪತ್ರೆಯಲ್ಲಿ ರಿಯಾ ಚಕ್ರವರ್ತಿ ತಪ್ಪಿತಸ್ಥರಂತೆ ವರ್ತಿಸುತ್ತಿದ್ದರು" 

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜ್ಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡ ಬೆನ್ನಲ್ಲೆ ಪ್ರಮುಖ ವ್ಯಕ್ತಿಯೊಬ್ಬರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. 

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜ್ಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡ ಬೆನ್ನಲ್ಲೆ ಪ್ರಮುಖ ವ್ಯಕ್ತಿಯೊಬ್ಬರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. 

ಮೃತ ಬಾಲಿವುಡ್ ನಟನ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ತರಲಾಗಿತ್ತು. ಈ ವೇಳೆಯಲ್ಲಿ ಸುಶಾಂತ್ ಸಿಂಗ್ ರಜ್ಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ಅಪರಾಧಿಯಂತೆ ವರ್ತಿಸುತ್ತಿದ್ದರು, ಸುಶಾಂತ್ ಪಾರ್ಥಿವ ಶರೀರದ ಮೇಲೆ ಕೈಯ್ಯಿಟ್ಟು ಕ್ಷಮೆ ಕೇಳುತ್ತಿದ್ದರು ಎಂದು ಆಸ್ಪತ್ರೆಯಲ್ಲೇ ಇದ್ದ ಕರಣಿ ಸೇನಾದ ಸದಸ್ಯನೋರ್ವ ಹೇಳಿಕೆ ನೀಡಿದ್ದಾರೆ. 

ಮರಣೋತ್ತರ ಪರೀಕ್ಷೆ ನಡೆದ ಬಳಿಕ ರಿಯಾ ಚಕ್ರವರ್ತಿ ಪಾರ್ಥಿವ ಶರೀರವನ್ನು ನೋಡಲು ಮನವಿ ಮಾಡಿದ್ದರು, ನಾನೇ ಆಸ್ಪತ್ರೆ ಸಿಬ್ಬಂದಿಗಳಿಗೆ ಮನವಿ ಮಾಡಿ ಪಾರ್ಥಿವ ಶರೀರವನ್ನು ನೋಡಲು ಅವಕಾಶ ಸಿಗುವಂತೆ ಮಾಡಿದೆ. ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆಯೇ ರಿಯಾ ಚಕ್ರವರ್ತಿ ಆತನ ಎದೆಯ ಮೇಲೆ ಕೈಯ್ಯಿಟ್ಟು ಕ್ಷಮಿಸು ಬಾಬು ಎಂದು ಹೇಳುತ್ತಿದ್ದರು. ಅಪರಾಧಿಯಂತೆ ವರ್ತಿಸುತ್ತಿದ್ದರು ಎಂದು ಸುರ್ಜೀತ್ ಸಿಂಗ್ ರಾಥೋಡ್ ಹೇಳಿದ್ದಾರೆ. 

ಸಿಬಿಐ ತಮ್ಮನ್ನು ತನಿಖೆಗೆ ಹಾಜರಾಗುವಂತೆ ಕೇಳಿದೆ. ಸಂತೋಷದಿಂದ ವಿಚಾರಣೆಗೆ ಹಾಜರಾಗುತ್ತೇನೆ ಎಂದು ರಾಥೋಡ್ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬೆಂಜಮಿನ್ ನೆತನ್ಯಾಹು ಮಾಡಿದ ಫೋನ್ ಕರೆಯೇ ಅಮೆರಿಕ-ಇರಾನ್ ಶಾಂತಿ ಮಾತುಕತೆ ಹಳಿತಪ್ಪುವಂತೆ ಮಾಡಿತು'

ಕ್ಷೇತ್ರಗಳ ಮರುವಿಂಗಡಣೆ ಪ್ರಸ್ತಾಪ ಅತ್ಯಂತ ಅಪಾಯಕಾರಿ ಹಾಗೂ ಸಂವಿಧಾನದ ಮೇಲಿನ ದಾಳಿ: ಸೋನಿಯಾ ಗಾಂಧಿ

ರಾಜ್ಯದಲ್ಲಿ ರಣ ಬಿಸಿಲು: 35 ಡಿಗ್ರಿ ತಲುಪಿದ ತಾಪಮಾನ, ಮಳೆ ಮುನ್ಸೂಚನೆ ಇಲ್ಲ ಎಂದ IMD

ಆಗ VOLVO, ಈಗ BMW; ಹಾರುಬೂದಿ ಸಾಗಿಸುತ್ತಿದ್ದ ಲಾರಿ ಉರುಳಿ ಐಶಾರಾಮಿ ಕಾರು ಅಪ್ಪಚ್ಚಿ, Video

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

SCROLL FOR NEXT