ಬಾಲಿವುಡ್

'ಹಿಂದಿ ಬಿಗ್ ಬಾಸ್ ಸೀಸನ್ 13' ಸರಣಿಯ ವಿಜೇತ ಸಿದ್ಧಾರ್ಥ್ ಶುಕ್ಲ 

Sumana Upadhyaya

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಹಿಂದಿ ಬಿಗ್ ಬಾಸ್ ಸೀಸನ್ 13ಕ್ಕೆ ಶನಿವಾರ(ಫೆಬ್ರವರಿ14)ತೆರೆಬಿದ್ದಿದ್ದು ಸಿದ್ಧಾರ್ಥ್ ಶುಕ್ಲ ವಿಜೇತರಾಗಿ ಹೊರಹೊಮ್ಮಿದ್ದಾರೆ.ರೂಪದರ್ಶಿ ಮತ್ತೊಬ್ಬ ಸ್ಪರ್ಧಿ ಆಸಿಮ್ ರಿಯಾಜ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.


ಬಿಗ್ ಬಾಸ್ ಸೀಸನ್ 13ರ ಟ್ರೋಫಿ ಮತ್ತು ನಗದು ಬಹುಮಾನ 40 ಲಕ್ಷ ರೂಪಾಯಿಗಳನ್ನು ಸಿದ್ಧಾರ್ಥ್ ಗೆದ್ದುಕೊಂಡಿದ್ದಾರೆ.


ಸ್ಪರ್ಧೆಯ ಅಂತಿಮ ಸುತ್ತಿಗೆ ಆಸಿಮ್, ಶೆಹನಾಜ್ ಗಿಲ್, ರಶಮಿ ದೇಸಾಯಿ, ಆರತಿ ಸಿಂಗ್ ಮತ್ತು ಪರಸ್ ಛಬ್ರ ಆಯ್ಕೆಯಾಗಿದ್ದರು. ಪರಸ್ 10 ಲಕ್ಷ ರೂಪಾಯಿ ನಗದು ಬಹುಮಾನ ಪಡೆದು ಅಂತಿಮ ಸುತ್ತಿನಲ್ಲಿ ಶೋ ಬಿಟ್ಟು ಹೋದರು. ಅಂತಿಮ ಸುತ್ತಿಗೆ ಬಂದವರಿಗೆ ಅಬು ದಾಬಿಗೆ ತಮ್ಮ ಇಷ್ಟದವರ ಜೊತೆ ಪ್ರವಾಸ ಹೋಗುವ ಅವಕಾಶವಿದೆ.


ಹಿಂದಿ ಬಿಗ್ ಬಾಸ್ ಸೀಸನ್ 13ಗೆ ಅಧಿಕ ಟಿಆರ್ ಪಿ ಸಿಕ್ಕಿದ ಕಾರಣ ನಿಗದಿತ ಸಮಯಕ್ಕಿಂತ 5 ವಾರಗಳಷ್ಟು ಮುಂದೂಡಿ 149 ದಿನಗಳ ಕಾಲ ನಡೆದಿತ್ತು. 

SCROLL FOR NEXT