ಜಾಹ್ನವಿ ಕಪೂರ್ 
ಬಾಲಿವುಡ್

ಉರ್ದು ಭಾಷೆ, ಕಥಕ್ ಕಲಿಯುವಲ್ಲಿ ಜಾಹ್ನವಿ ಕಪೂರ್ ಬ್ಯುಸಿ

ಬಾಲಿವುಡ್ ಧಡಕ್ ಬೆಡಗಿ ಜಾಹ್ನವಿ ಕಪೂರ್, ತಮ್ಮ ಮುಂಬರುವ ಚಿತ್ರಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸಿದ್ದು, ಉರ್ದು ಭಾಷೆ ಹಾಗೂ ಕಥಕ್ ಕಲಿಯುವಲ್ಲಿ ಮಗ್ನರಾಗಿದ್ದಾರೆ. 

ಮುಂಬೈ: ಬಾಲಿವುಡ್ ಧಡಕ್ ಬೆಡಗಿ ಜಾಹ್ನವಿ ಕಪೂರ್, ತಮ್ಮ ಮುಂಬರುವ ಚಿತ್ರಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸಿದ್ದು, ಉರ್ದು ಭಾಷೆ ಹಾಗೂ ಕಥಕ್ ಕಲಿಯುವಲ್ಲಿ ಮಗ್ನರಾಗಿದ್ದಾರೆ. 

ಕರಣ್ ಜೋಹರ್ ನಿರ್ದೇಶಿಸುತ್ತಿರುವ ಬಹುತಾರಾಗಣದ ಚಿತ್ರ ತಖ್ತ್ ನಲ್ಲಿ ಜಾಹ್ನವಿ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಾಹ್ನವಿ, ಚಿತ್ರಕ್ಕೆ ಸಮ್ಮತಿ ಸೂಚಿಸಿದಾಗಿನಿಂದಲೂ ಉರ್ದು ಭಾಷೆ ಹಾಗೂ ಕಥಕ್ ನೃತ್ಯ ಕಲಿಯುತ್ತಿದ್ದೇನೆ. ಮೊದಲಿಂದಲೂ ನನಗೆ ಪುರಾತನ ಕಥೆಗಳೆಂದರೇ ಬಲು ಇಷ್ಟ. ಪ್ರಸ್ತುತ ಮೂಡಿಬರುತ್ತಿರುವ ಚಿತ್ರಗಳ ಪಾತ್ರಕ್ಕಿಂತ, ನಾಟಕದ ಪಾತ್ರಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳುತ್ತೇನೆ ಎಂದರು. 

ಒಂದು ವರ್ಷದ ನಂತರ ಚಿತ್ರೀಕರಣ ಆರಂಭವಾಗಲಿದೆ ಎಂಬುದು ಗೊತ್ತಿದೆ. ಆದರೆ, ಈ ವಿಚಾರದಲ್ಲಿ ನನಗೆ ಕಲಿಯುವ ಆಸಕ್ತಿ ತುಂಬಾ ಇದೆ. ಆಧುನಿಕ ಜಗತ್ತಿನ ಪಾತ್ರಕ್ಕಿಂತ, ತಖ್ತ್ ದಲ್ಲಿನ ಪಾತ್ರಕ್ಕೆ ಹೆಚ್ಚು ನ್ಯಾಯ ಒದಗಿಸಬಲ್ಲೆ ಎಂಬ ವಿಶ್ವಾಸ ತಮಗಿದೆ ಎಂದರು. 

ಮುಘಲ್ -ಎ-ಆಜಾಮ್, ಪಾಕಿಜಾ, ಉಮ್ರಾವ್ ಜಾನ್ ಇಂತಹ ಚಿತ್ರಗಳ ಹುಚ್ಚು ನನಗೆ ಮೊದಲಿನಿಂದಲೂ ಇದೆ. ಅಲ್ಲದೆ, ಇಂತಹ ಚಿತ್ರಗಳಿಗೂ ತಮಗೂ ಅವಿನಾಭಾವ ಸಂಬಂಧವಿದೆ ಎಂದರು. 

ತಖ್ತ್ ಚಿತ್ರದಲ್ಲಿ ವಿಕ್ಕಿ ಕೌಶಲ್, ರಣವೀರ್ ಸಿಂಗ್, ಭೂಮಿ ಪೆಡ್ನೇಕರ್, ಆಲಿಯಾ ಭಟ್, ಕರೀನಾ ಕಪೂರ್ ಹಾಗೂ ಅನಿಲ್ ಕಪೂರ್ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವು ಔರಂಗಾಜೇಬ್ ಹಾಗೂ ಧಾರಾ ಶಿಕೋಹ್ ಅವರ ಕಥಾ ಆಧಾರಿತವಾಗಿದೆ‌.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!