ಸಂಜಯ್ ದತ್ ಸುನಿಯೆಲ್ ಶೆಟ್ಟಿ 
ಬಾಲಿವುಡ್

ಕೋವಿಡ್ ಬಿಕ್ಕಟ್ಟು: ಮುಂಬೈನ ಡಬ್ಬಾವಾಲಾಗಳಿಗೆ ಬಾಲಿವುಡ್ ಸ್ಟಾರ್ ಗಳ ನೆರವಿನ ಹಸ್ತ

ಬಾಲಿವುಡ್ ಸ್ಟಾರ್ ನಟರಾದ ಸಂಜಯ್ ದತ್ ಹಾಗೂ ಸುನೀಲ್ ಶೆಟ್ಟಿ ಲಾಕ್ ಡೌನ್ ಸಮಯದಲ್ಲಿ ಮುಂಬಯಿಯ ಪ್ರಸಿದ್ದ ಡಬ್ಬಾವಾಲಾಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಲಾಕ್ ಡೌನ್ ಕಾಲದಲ್ಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಡಬ್ಬಾವಾಲಾಗಳ ಕುಟುಂಬಗಳಿಗೆ ನಟರು ಆಹಾರಸಾಮಗ್ರಿಗಳನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ.

ಬಾಲಿವುಡ್ ಸ್ಟಾರ್ ನಟರಾದ ಸಂಜಯ್ ದತ್ ಹಾಗೂ ಸುನೀಲ್ ಶೆಟ್ಟಿ ಲಾಕ್ ಡೌನ್ ಸಮಯದಲ್ಲಿ ಮುಂಬಯಿಯ ಪ್ರಸಿದ್ದ ಡಬ್ಬಾವಾಲಾಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಲಾಕ್ ಡೌನ್ ಕಾಲದಲ್ಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿರುವ ಡಬ್ಬಾವಾಲಾಗಳ ಕುಟುಂಬಗಳಿಗೆ ನಟರು ಆಹಾರಸಾಮಗ್ರಿಗಳನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತಿದ್ದಾರೆ.

"ಇದು ಅಸ್ಲಂ ಭಾಯ್(ಕ್ಯಾಬಿನೆಟ್ ಸಚಿವ ಅಸ್ಲಂ ಶೇಖ್) ಮತ್ತು ಸಂಜು(ಸಂಜಯ್ ದತ್)ಅವರು ಪ್ರಾರಂಭಿಸಿದ ಉಪಕ್ರಮ, ಅವರೊಂದಿಗೆ ಕೈಜೋಡಿಸಲು ನನಗೆ ಯಾವುದೇ ಹಿಂಜರಿಕೆ ಇರಲಿಲ್ಲ. ಎಲ್ಲರೂ ಒಗ್ಗೂಡಿದಾಗ ನಮ್ಮೆಲ್ಲರ ಪ್ರೀತಿಯ ಡಬ್ಬಾವಾಲಾಗಳ ಬದುಕು ಇನ್ನಷ್ಟು ಸುಂದರವಾಗಲಿದೆ. ಈಗಾಗಲೇ ಆಹಾರ ಟ್ರಕ್‌ಗಳನ್ನು ಪುಣೆಗೆ ಕಳುಹಿಸಲಾಗಿದೆ, ಅಲ್ಲಿ ಹಲವಾರು ಡಬ್ಬಾವಾಲಾಗಳು ತಾವು ಕ್ಯಾಂಪ್ ಹಾಕಿಕೊಂಡಿದ್ದಾರೆ." ಸುನೀಲ್ ಶೆಟ್ಟಿ ಹೇಳಿದ್ದಾರೆ.

ಈವರೆಗೆ 800 ಕಿಟ್‌ಗಳ ಅಕ್ಕಿ ಬೆಳೆ, ಸಕ್ಕರೆ, ಹಿಟ್ಟು ಮತ್ತು ಎಣ್ಣೆಯನ್ನು ಖೇಡ್ ಮತ್ತು ಮಾಲ್ವಾಲ್‌ಗೆ ಕಳಿಸಲಾಗಿದೆ. ಸೇವ್ ದಿ ಚಿಲ್ಡ್ರನ್ ಇಂಡಿಯಾ ಎಂಬ ಎನ್‌ಜಿಒ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಮೂವರು 5000 ಕುಟುಂಬಗಳ ಪ್ರತಿ ಸದಸ್ಯರನ್ನು ಲುಪಲು ಉದ್ದೇಶಿಸಿದ್ದಾರೆ. ಎನ್‌ಜಿಒ ಎಲ್ಲವನ್ನು ಪರಿಶೀಲಿಸಲು ಸಿಬ್ಬಂದಿಗಳನ್ನು ಹೊಂದಿದೆ. ನಮ್ಮದು ಮೂರು ತಿಂಗಳ ಯೋಜನೆಯಾಗಿದೆ ಎಂದು ನಟ ಹೇಳಿದ್ದಾರೆ.

ಬಹುಹಿಂದೆ  ಸುನಿಯೆಲ್ ಶೆಟ್ಟಿಯ ತಂದೆ ಎರಡು ಉಡುಪಿ ರೆಸ್ಟೋರೆಂಟ್‌ಗಳನ್ನು ಹೊಂದಿದ್ದರು, ನಂತರ ಅವರು ಅದನ್ನು ಉತ್ತಮ ಊಟದ  ರೆಸ್ಟೋರೆಂಟ್ ಆಗಿಸಿದ್ದರು. "ನಾನು ಜನರಿಗೆ ಆಹಾರವನ್ನು ನೀಡುವ ಕಾರ್ಯ ಪ್ರಾರಂಭಿಸಿದ್ದೆ. ಅವರು ಬಂದು ರೆಸ್ಟೋರೆಂಟ್‌ನಲ್ಲಿ ಊಟ ಮಾಡಬೇಕೆಂದು ನಾನು ಬಯಸಿದೆ. ಆದರೆ ಇದು ಮಾಮೂಲಿ ಸಮಯವಲ್ಲ. ಮತ್ತು ನಿಸ್ಸಂದೇಹವಾಗಿ ನಮ್ಮ ಜೀವನದ ಕಠಿಣ ಹಂತಗಳಲ್ಲಿ ಆಹಾರಕ್ಕಾಗಿ ಅನೇಕ ಜನರು ಹೆಣಗಾಡುತ್ತಿರುವುದು ಬೇಸರದ ಸಂಗತಿ. ಹಾಗಾಗಿ ಅವರಿದ್ದಲ್ಲಿಗೇ ಊಟ, ಆಹಾರವನ್ನು ಪೂರೈಸುವದಕ್ಕೆ ತೀರ್ಮಾನಿಸಿದೆ" ಸುನೀಶ್ ಶೆಟ್ಟಿ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT