ಬಾಲಿವುಡ್

ಮಿಡಿದ ಶಾರೂಕ್ ಹೃದಯ: ರೈಲ್ವೆ ನಿಲ್ದಾಣದಲ್ಲಿ ಮೃತ ತಾಯಿಯೊಂದಿಗೆ ಆಟವಾಡುತ್ತಿದ್ದ ಮಗುವಿಗೆ ಸಹಾಯ

Sumana Upadhyaya

ನವದೆಹಲಿ: ಬಿಹಾರದ ಮುಜಾಫರ್ ಪುರ್ ರೈಲ್ವೆ ನಿಲ್ದಾಣದಲ್ಲಿ ಮೃತ ತಾಯಿಯನ್ನು ಅರಿವೇ ಇಲ್ಲದ ಪುಟ್ಟ ಕಂದಮ್ಮ ಎಬ್ಬಿಸುತ್ತಿರುವ ವಿಡಿಯೊ ಮನಮಿಡಿಯುವಂತಿತ್ತು. ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಇದೀಗ ಆ ಮಗುವಿನ ನೆರವಿಗೆ ಬಾಲಿವುಡ್ ನಟ ಶಾರೂಖ್ ಖಾನ್ ನಡೆಸುತ್ತಿರುವ ಸರ್ಕಾರೇತರ ಸಂಘಟನೆ ಮೀರ್ ಫೌಂಡೇಶನ್ ಬಂದಿದೆ.

ಲಾಕ್ ಡೌನ್ ಆದ ನಂತರ ದೇಶದಲ್ಲಿ ವಲಸೆ ಕಾರ್ಮಿಕರ ಸ್ಥಿತಿಗತಿಗೆ ಕನ್ನಡಿ ಹಿಡಿಯುವಂತಿತ್ತು ಈ ವಿಡಿಯೊ. ತಾಯಿಯನ್ನು ಕಳೆದುಕೊಂಡ ಆ ಪುಟ್ಟ ಮಗುವಿನ ಸಹಾಯಕ್ಕೆ ಬರುವುದಾಗಿ ಶಾರೂಕ್ ಖಾನ್ ಹೇಳಿದ್ದಾರೆ.ವಿಡಿಯೊ ವೈರಲ್ ಆಗುತ್ತಿದ್ದಂತೆ ಮೀರ್ ಫೌಂಡೇಶನ್ ಮಗುವನ್ನು ಪತ್ತೆಹಚ್ಚಿ ನೆರವಿಗೆ ಬಂದಿದೆ.

ಸದ್ಯ ಮಗು ಅದರ ತಾತನ ಆರೈಕೆಯಲ್ಲಿದೆ ಎಂದು ಮೀರ್ ಫೌಂಡೇಶನ್ ಟ್ವೀಟ್ ಮಾಡಿದ್ದು ಮಗು ಮತ್ತು ಆ ಮಗುವಿನ ಸೋದರ ತಮ್ಮ ತಾತ-ಅಜ್ಜಿ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದೆ.

ಇಡೀ ದೇಶ ಕೊರೋನಾ ಸೋಂಕಿಗೆ ಪರಿತಪಿಸುತ್ತಿರುವ ಸಂದರ್ಭದಲ್ಲಿ ಕೆಲವು ನಟರಂತೆ ಶಾರೂಕ್ ಖಾನ್ ಸಹ ಬಡವರು, ವಲಸೆ ಕಾರ್ಮಿಕರು, ಕೊರೋನಾ ವಾರಿಯರ್ಸ್ ಗಳ ನೆರವಿಗೆ ನಿಂತಿದ್ದಾರೆ.

SCROLL FOR NEXT