ಬಾಲಿವುಡ್

ಸುಶಾಂತ್ ಸಿಂಗ್ ಕುಟುಂಬದೊಂದಿಗೆ ನಿಲ್ಲಿ: ಕ್ರಿಮಿನಲ್ ಕೇಸ್ ದಾಖಲಾದ ಬಳಿಕ ಅಭಿಮಾನಿಗಳಿಗೆ ಸಲ್ಮಾನ್ ಮನವಿ

Nagaraja AB

ಮುಂಬೈ: ಸುಶಾಂತ್ ಸಿಂಗ್  ಆತ್ಮಹತ್ಯೆ ಘಟನೆಗೆ ಸಂಬಂಧಿಸಿದಂತೆ  ತನ್ನ ವಿರುದ್ಧ ದೂರು ದಾಖಲಾದ ಬಳಿಕ, ತನ್ನ ಅಭಿಮಾನಿಗಳು ಸುಶಾಂತ್ ಸಿಂಗ್ ಕುಟುಂಬ ಹಾಗೂ ಅಭಿಮಾನಿಗಳ ಪರ ನಿಲ್ಲುವಂತೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮನವಿ ಮಾಡಿಕೊಂಡಿದ್ದಾರೆ.

34 ವರ್ಷದ ಸುಶಾಂತ್ ಸಿಂಗ್ ಜೂನ್ 14 ರಂದು ಮುಂಬೈಯಲ್ಲಿನ ತಮ್ಮ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಈ ವಾರದ ಆರಂಭದಲ್ಲಿ ಮುಜಾಫರ್ ಪುರ್ ಮೂಲದ ವಕೀಲ ಸುಧೀರ್ ಕುಮಾರ್ ಓಜಾ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್, ನಿರ್ಮಾಪಕ ಅದಿತ್ಯಾ ಚೋಪ್ರಾ, ಕರಣ್ ಜೋಹರ್, ಏಕ್ತಾ ಕಪೂರ್ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಆರೋಪಿಗಳನ್ನಾಗಿ ದೂರು ನೀಡಿದ್ದರು. 

ಸುಶಾಂತ್ ಸಿಂಗ್ ಅಭಿಮಾನಿಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳುವಂತೆ ಟ್ವಿಟರ್ ಖಾತೆಯಲ್ಲಿ ಸಲ್ಮಾನ್ ಖಾನ್ ತನ್ನ ಅಭಿಮಾನಿಗಳಿಗೆ ಹೇಳಿದ್ದಾರೆ. ಎಲ್ಲಾ ಅಭಿಮಾನಿಗಳು ಸುಶಾಂತ್ ಕುಟುಂಬ ಹಾಗೂ ಅವರ ಅಭಿಮಾನಿಗಳಿಗಳೊಂದಿಗೆ ನಿಲ್ಲಬೇಕು,  ಭಾಷೆ ಹಾಗೂ ಬಳಸಿದ ಶಾಪಗಳ ಪ್ರಕಾರ ಹೋಗಬಾರದು, ಆದರೆ, ಅದರ ಹಿಂದಿನ ಭಾವನೆಯೊಂದಿಗೆ ಹೋಗಬೇಕು, ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಆಗುವ ನೋವಂತೆ ಸುಶಾಂತ್ ಕುಟುಂಬ ಹಾಗೂ ಅವರ ಅಭಿಮಾನಿಗಳನ್ನು ಬೆಂಬಲಿಸಿ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

ಸುಶಾಂತ್ ಸಿಂಗ್ ಅವರ ವೃತ್ತಿಜೀವನವನ್ನು ಕೊನೆಗಾಣಿಸಲು ಬಾಲಿವುಡ್ ನ ಘಟನಾನುಘಟಿ ಮುಖಂಡರು ಪ್ರಯತ್ನಿಸಿದ್ದಾರೆ ಎಂದು ಓಜಾ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಇತರ ಒಂದೆರಡು ಚಲನಚಿತ್ರ ನಿರ್ಮಾಪಕರನ್ನು ಸಹ ಆರೋಪಿಗಳೆಂದು ಹೆಸರಿಸಲಾಗಿದೆ.ನಟಿ ರಿಯಾ ಚಕ್ರವರ್ತಿ ಕೂಡಾ ರಜಪೂತ್  ಆತ್ಮಹತ್ಯೆಗೆ ಸಹಕರಿಸಿದ್ದಾರೆ ಎಂದು ಆರೋಪಿಸಿ ಬಿಹಾರದ ನ್ಯಾಯಾಲಯಕ್ಕೆ ಶನಿವಾರ ದೂರು ದಾಖಲಿಸಲಾಗಿದೆ.

SCROLL FOR NEXT