ಬಾಲಿವುಡ್

ಬಾಲಿವುಡ್ ಪ್ರಸಿದ್ದ ನೃತ್ಯ ಸಂಯೋಜಕಿ ಸರೋಜ್ ಖಾನ್ ಆಸ್ಪತ್ರೆಗೆ ದಾಖಲು

Raghavendra Adiga

ಬಾಲಿವುಡ್ ಹಿರಿಯ ನೃತ್ಯಸಂಯೋಜಕಿ ಸರೋಜ್ ಖಾನ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಮುಂಬೈನ ಗುರುನಾನಕ್ ಆಸ್ಪತ್ರೆಗೆದಾಕಲಾಗಿರುವ ಸರೋಜ್ ಖಾನ್ ಅವರಿಗೆ ಕೊರೋನಾವೈರಸ್ ನೆಗೆಟಿವ್ ವರದಿ ಬಂದಿದೆ.

71 ವರ್ಷದ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಸರೋಜ್ ಖಾನ್ ಅವರಿಗೆ ಕೊರೋನಾ ಸೋಂಕು ಇಲ್ಲವೆಂದು ಹೆಸರು ಹೇಳಲಿಚ್ಚಿಸದ ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

"ಉಸಿರಾಟದ ಸಮಸ್ಯೆಗಳಿಗಾಗಿ ಅವರನ್ನು ಬಾಂದ್ರಾ ಈಸ್ಟ್ ನ  ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಈಗ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇನ್ನೊಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿದ್ದಾರೆ. " ಸಂಬಂಧಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಭಾರತದ ಅತ್ಯಂತ ಪ್ರಸಿದ್ಧ ನೃತ್ಯ ಸಂಯೋಜಕರಲ್ಲಿ ಒಬ್ಬರಾದ ಸರೋಜ್ ಖಾನ್ "ಏಕ್ ದೋ ತೀನ್”, “ಹಮ್ ಕೋ ಆಜ್ ಕಲ್ ಹೈ ಇಂತಜಾರ್", "ಧಕ್ ಧಕ್ ಕರನೇ ಲಗಾ", "“ಚೋಲಿ ಕೆ ಪೀಚೆ ಕ್ಯಾ ಹೈ”, “ ನಿಂಬುಡಾ" ಹಾಗೂ ಡೋಲಾ ರೆ ಡೋಲಾ ”.ಹಾಡುಗಳಂತಾ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು.

ಕರಣ್ ಜೋಹರ್ ಅವರ 2019ನೇ ವರ್ಷದಲ್ಲಿ ತೆರೆಕಂಡ "ಕಾಲಾಂತ್" ಆಕೆಯ ಕಡೇ ಚಲನಚಿತ್ರವಾಗಿದೆ. ಖಾನ್ ಅವರು "ತಬಾ ಹೋ ಗಯೆ" ಹಾಡನ್ನು ನೃತ್ಯ ಸಂಯೋಜನೆ ಮಾಡಿದ್ದಾರೆ, ಇದರಲ್ಲಿ ಮಾಧುರಿ ದೀಕ್ಷಿತ್ ಕಾಣಿಸಿಕೊಂಡಿದ್ದಾರೆ, ಅವರೊಂದಿಗೆ ಅವರು ದೀರ್ಘಕಾಲದ ಸಹಭಾಗಿತ್ವ ಹೊಂದಿದ್ದರು.

SCROLL FOR NEXT