ಕೌನ್ ಬನೇಗಾ ಕರೋಡ್ ಪತಿಯ ಪ್ರೊಮೊದ ಸಾಂದರ್ಭಿಕ ಚಿತ್ರ 
ಬಾಲಿವುಡ್

ಈ ಬಾರಿ ಕೌನ್ ಬನೇಗಾ ಕರೋಡ್ ಪತಿ ಆಯ್ಕೆ, ಸ್ಕ್ರೀನಿಂಗ್ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣ

ಹಿಂದಿಯ ಜನಪ್ರಿಯ ಗೇಮ್ ಶೋ ಕೌನ್ ಬನೇಗ ಕರೋಡ್ ಪತಿಯ 12ನೇ ಕಂತಿಗೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯನ್ನು ವಾಹಿನಿ ಸಂಪೂರ್ಣವಾಗಿ ಡಿಜಿಟಲೀಕರಣ ಮೂಲಕ ನಡೆಸಲಿದೆ.

ಮುಂಬೈ: ಕೊರೋನಾ ವೈರಸ್ ಲಾಕ್ ಡೌನ್ ಮಧ್ಯೆ ಹಿಂದಿಯ ಜನಪ್ರಿಯ ಗೇಮ್ ಶೋ ಕೌನ್ ಬನೇಗ ಕರೋಡ್ ಪತಿಯ 12ನೇ ಕಂತಿಗೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯನ್ನು ವಾಹಿನಿ ಸಂಪೂರ್ಣವಾಗಿ ಡಿಜಿಟಲೀಕರಣ ಮೂಲಕ ನಡೆಸಲಿದೆ.

12ನೇ ಸೀಸನ್ ನ ಪ್ರೊಮೊ ವಿಡಿಯೊವನ್ನು ನಿರೂಪಕ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಮನೆಯಿಂದಲೇ ಚಿತ್ರೀಕರಿಸಲಾಗಿದ್ದು ಅದನ್ನು ಡಿಜಿಟಲ್ ಮೂಲಕ ದಂಗಲ್ ಚಿತ್ರದ ನಿರ್ದೇಶಕ ನಿತೇಶ್ ತಿವಾರಿ ಚಿತ್ರೀಕರಿಸಿದ್ದಾರೆ.

ಸೋನಿ ಎಂಟರ್ಟೈನ್ ಮೆಂಟ್ ಟೆಲಿವಿಷನ್ ನಲ್ಲಿ ಮೇ 9ರಿಂದ ಮೇ 22ರವರೆಗೆ  ಸ್ಪರ್ಧಿಗಳ ದಾಖಲಾತಿ ನಡೆಯಲಿದೆ. ಪ್ರತಿದಿನ ರಾತ್ರಿ ಅಮಿತಾಬ್ ಬಚ್ಚನ್ ಅವರು ಸೋನಿ ಟಿವಿಯಲ್ಲಿ ಪ್ರಶ್ನೆಗಳನ್ನು ಕೇಳಲಿದ್ದು ವೀಕ್ಷಕರು ಎಸ್ ಎಂಎಸ್ ಅಥವಾ ಸೋನಿ ಲೈವ್ ಮೂಲಕ ಉತ್ತರಿಸಲಿದ್ದಾರೆ.

ಕೌನ್ ಬನೇಗ ಕಾರ್ಯಕ್ರಮದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಚಿತ್ರೀಕರಣ ಡಿಜಿಟಲೀಕರಣ ಮೂಲಕ ನಡೆಯಲಿದೆ. ಮೊದಲ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದವರನ್ನು ಎರಡನೇ ಹಂತದಲ್ಲಿ ಟೆಲಿಫೋನ್ ಮೂಲಕ ಆಯ್ಕೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಮೂರನೇ ಹಂತದ ಪ್ರಕ್ರಿಯೆ ಆನ್ ಲೈನ್ ಆಡಿಷನ್ ಮೂಲಕ ನಡೆಯಲಿದೆ. ಅಂತಿಮ ಸುತ್ತು ವೈಯಕ್ತಿಕ ಸಂದರ್ಶನವಾಗಿರಲಿದೆ, ಅದನ್ನು ವಿಡಿಯೊ ಕಾಲ್ ಮೂಲಕ ನಡೆಸಲಾಗುತ್ತದೆ.ಇಡೀ ಆಯ್ಕೆ ಪ್ರಕ್ರಿಯೆಯನ್ನು ಸ್ವತಂತ್ರ ಆಡಿಟ್ ಕೇಂದ್ರ ತಪಾಸಣೆ ಮಾಡಲಿದೆ ಎಂದು ಸೋನಿ ಟಿವಿ ಬ್ಯುಸಿನೆಸ್ ಹೆಡ್ ಅಮಿತ್ ರೈಸಿಂಘಾನಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!

ಅಭಿಮನ್ಯು ಇಲ್ಲದ ದಸರಾ; ಈ ಬಾರಿ ಹೊರೋದ್ಯಾರು ಅಂಬಾರಿ?

ಅಮೆರಿಕ ಯೋಧನ ತಲೆಗೆ 30 ಸಾವಿರ ಡಾಲರ್ ಬಹುಮಾನ: ಇರಾನ್‌ನಿಂದ ವಿಜಯನಗರದ ಅರಸನ ತಂತ್ರ ಬಳಕೆ!