ಪ್ರಿಯಾಂಕಾ ಚೋಪ್ರಾ 
ಬಾಲಿವುಡ್

ಬ್ರಿಟಿಷ್ ಫ್ಯಾಷನ್ ಕೌನ್ಸಿಲ್ ನ ರಾಯಭಾರಿಯಾಗಿ ಪ್ರಿಯಾಂಕಾ ಚೋಪ್ರಾ ಆಯ್ಕೆ

ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಬ್ರಿಟಿಷ್ ಫ್ಯಾಶನ್ ಕೌನ್ಸಿಲ್ ನ 'ಪಾಸಿಟಿವ್ ಚೇಂಜ್' ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಲಂಡನ್: ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಬ್ರಿಟಿಷ್ ಫ್ಯಾಶನ್ ಕೌನ್ಸಿಲ್ ನ 'ಪಾಸಿಟಿವ್ ಚೇಂಜ್' ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಈ ಸಂಬಂಧ ಟ್ವಿಟ್ ನಲ್ಲಿ ಹರ್ಷ ವ್ಯಕ್ತಪಡಿಸಿರುವ ನಟಿ ಪ್ರಿಯಾಂಕಾ ತಾನು ಮುಂದಿನ ವರ್ಷ ಲಂಡನ್ ನಲ್ಲಿ ನೆಲೆಸಲಿದ್ದೇನೆ, ಅಲ್ಲೇ ಕಾರ್ಯನಿರ್ವಹಿಸಲಿದ್ದೇನೆ ಎಂದಿದ್ದಾರೆ,  "ಮುಂದಿನ ವರ್ಷದಲ್ಲಿ ನಾನು ಲಂಡನ್‌ನಲ್ಲಿ ನೆಲೆಸುತ್ತೇನೆ ಹಾಗೂ ಕೆಲಸ ಮಾಡುತ್ತೇನೆ. ಪಾಸಿಟಿವ್ ಚೇಂಜ್ ನ ಬ್ರಿಟಿಷ್ ಫ್ಯಾಷನ್ ಕೌನ್ಸಿಲ್‌ನ ರಾಯಭಾರಿಯಾಗಿರುವುದಕ್ಕೆ ನನಗೆ ಹೆಮ್ಮೆ ಇದೆ"

ಪ್ರಿಯಾಂಕಾ ಚೋಪ್ರಾ ಪಾಸಿಟಿವ್ ಚೇಂಜ್ ಗೆ ಬಿಎಫ್‌ಸಿ ರಾಯಭಾರಿಯಾಗುವ ಬಗ್ಗೆ "ಫ್ಯಾಷನ್ ಯಾವಾಗಲೂ ಪಾಪ್ ಸಂಸ್ಕೃತಿಯ ನಾಡಿಮಿಡಿತವಾಗಿದೆ, ಮತ್ತು ಸಂಸ್ಕೃತಿಗಳನ್ನು ಬೆಸೆಯುವ ಮತ್ತು ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯವನ್ನು ಹೊಂದಿರುವ ಪ್ರಬಲ ಶಕ್ತಿಯಾಗಿದೆ" ಎಂದು ಬರೆದಿದ್ದಾರೆ.

ಅಷ್ಟೇ ಅಲ್ಲದೆ "ಫ್ಯಾಷನ್ ಉದ್ಯಮದ ನಂಬಲಾಗದ ವೈವಿಧ್ಯತೆ ಮತ್ತು ಸೃಜನಶೀಲತೆಯನ್ನು ಆಚರಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಚೋಪ್ರಾ ಹೇಳಿದರು

ಮಾಜಿ ಮಿಸ್ ವರ್ಲ್ಡ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟಿ , ಪರ್ಪಲ್ ಪೆಬಲ್ ಪಿಕ್ಚರ್ಸ್ ಎಂಬ ಪ್ರೊಡಕ್ಷನ್ ಹೌಸ್ ನಡೆಸುತ್ತಿದ್ದಾರೆ. 2010 ಮತ್ತು 2016 ರಲ್ಲಿ ಕ್ರಮವಾಗಿ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಮತ್ತು ಜಾಗತಿಕ ಯುನಿಸೆಫ್ ಗುಡ್ ವಿಲ್ ರಾಯಭಾರಿಯಾಗಿ ಆಯ್ಕೆಯಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!