ಬಾಲಿವುಡ್

ದೇಶದ್ರೋಹ ಪ್ರಕರಣ: ಕಂಗನಾ ರನೌತ್ ಮತ್ತುಸಹೋದರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ಬಾಂಬೆ ಹೈಕೋರ್ಟ್

Raghavendra Adiga

ಮುಂಬೈ: ಕೋಮು ಪ್ರಚೋದನಾಕಾರಿ ಟ್ವೀಟ್ ಆರೋಪದ ಮೇಲೆ ಮುಂಬೈ ಪೊಲೀಸರು ದಾಖಲಿಸಿದ ಎಫ್‌ಐಆರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ನಟಿ ಕಂಗನಾ ರನೌತ್ ಮತ್ತು ಅವರ ಸಹೋದರಿ ರಂಗೋಲಿ ಚಾಂಡೇಲ್ ಅವರಿಗೆ ಬಂಧನದಿಂದ ಬಾಂಬೆ ಹೈಕೋರ್ಟ್ ಮಂಗಳವಾರ ಮಧ್ಯಂತರ ರಕ್ಷಣೆ ನೀಡಿದೆ.

ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಎಂ.ಎಸ್. ಕಾರ್ನಿಕ್ ಅವರ ವಿಭಾಗೀಯ ಪೀಠವು ಕಂಗನಾ ರನೌತ್ ಮತ್ತು ಅವರ ಸಹೋದರಿ ರಂಗೋಲಿ ಅವರುಗಳು ಜನವರಿ 8 ರಂದು ಪೊಲೀಸರ ಮುಂದೆ ಹಾಜರಾಗಬೇಕೆಂದು ನಿರ್ದೇಶಿಸಿದ್ದು ಅಲ್ಲಿಯವರೆಗೆ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಪೊಲೀಸರಿಗೆ ಸೂಚಿಸಿದೆ.

ನಟಿ ಕಂಗನಾ ಮತ್ತು ಆಕೆಯ ಸೋದರಿ ರಂಗೋಲಿ ಪರವಾಗಿ ವಕೀಲ ರಿಜ್ವಾನ್ ಸಿದ್ದಿಕಿ ಅವರ ಹೇಳಿಕೆಯನ್ನು ನ್ಯಾಯಪೀಠ ದಾಖಲಿಸಿದ್ದು, ಈ ವಿಷಯಬಾಕಿ ಇರುವಾಗ ಎಫ್‌ಐಆರ್ ವಿಷಯದ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಅವರು ಹಾಕುವಿದಿಲ್ಲ ಆದರೂ ವಿಚಾರಣೆಯ ಸಮಯದಲ್ಲಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಅಡಿಯಲ್ಲಿ ದೇಶದ್ರೋಹದ ಅಪರಾಧವನ್ನು ಎಫ್ಐರ್ ನಲ್ಲಿ ಸೇರಿಸಲಾಗಿದೆ ಎನ್ನುವ ಬಗ್ಗೆ ನ್ಯಾಯಪೀಠ ಅಚ್ಚರಿ ವ್ಯಕ್ತಪಡಿಸಿತು

"ನಾವು ಇತರ ವಿಭಾಗಗಳನ್ನು ಅರಿತಿದ್ದೇವೆ. ದರೆ ಸೆಕ್ಷನ್ 124 ಎ ಏಕೆ? ನೀವು ದೇಶದ ನಾಗರಿಕರನ್ನು ಈ ರೀತಿ ಪರಿಗಣಿಸುವಾಗ ಇದರ ಅಗತ್ಯವೇನು?" ಎಂದು ನ್ಯಾಯಮೂರ್ತಿ ಶಿಂಧೆ ಮುಂಬೈ ಪೊಲೀಸರನ್ನು ಪ್ರತಿನಿಧಿಸಿದ ಹಿರಿಯ ವಕೀಲ ರಿಜ್ವಾನ್ ಮರ್ಚೆಂಟ್ ಅವರನ್ನು ಪ್ರಶ್ನಿಸಿದ್ದಾರೆ.

"ಯಾರಾದರೂ ಸರ್ಕಾರದ ವ್ಯಾಪ್ತಿಯಲ್ಲಿ ಬರದಿದ್ದರೆ, ಅದು ದೇಶದ್ರೋಹವಾಗುತ್ತದೆಯೇ?" ಎಂದು ನ್ಯಾಯಮೂರ್ತಿ ಶಿಂಧೆ ಕೇಳಿದ್ದಾರೆ. ಅಲ್ಲದೆ ಎಫ್‌ಐಆರ್‌ಗಳಲ್ಲಿ ಸೇರ್ಪಡೆ ಮಾಡಬೇಕಾಗಿರುವ ವಿಭಾಗಗಳ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸರಿಯಾದ ಕಾರ್ಯಾಗಾರಗಳನ್ನು ನೀಡಬೇಕು ಎಂದು ನ್ಯಾಯಾಧೀಶರು ಪಬ್ಲಿಕ್ ಪ್ರಾಸಿಕ್ಯೂಟರ್ ದೀಪಕ್ ಠಾಕರೆ ಅವರಿಗೆ ತಿಳಿಸಿದರು.
 

SCROLL FOR NEXT