ಬಾಲಿವುಡ್

ಅಶ್ಲೀಲ ಫೋಟೋ ಕಳುಹಿಸಿದ ವ್ಯಕ್ತಿಯ ವಿರುದ್ಧ ನಟಿ ಕವಿತಾ ಕೌಶಿಕ್ ದೂರು ದಾಖಲು

Nagaraja AB

ಮುಂಬೈ: ಸಾಮಾಜಿಕ ಜಾಲತಾಣದ ಮೂಲಕ ಮರ್ಮಾಂಗ ಕಳುಹಿಸಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜನಪ್ರಿಯ ನಟಿ ಕವಿತಾ ಕೌಶಿಲ್  ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಫೋಟೋಗಳ ಸ್ಕ್ರೀನ್ ಶಾಟ್ ತೆಗೆದು ಮುಂಬೈ ಪೊಲೀಸ್, ಸೈಬಲ್ ಘಟಕ , ಅದಿತ್ಯ ಠಾಕ್ರೆ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಟ್ಯಾಗ್ ಮಾಡಿದ್ದು, ಈ ವ್ಯಕ್ತಿಯನ್ನು ಬಂಧಿಸುವುದು ಕಷ್ಟವೇನಲ್ಲಾ ಎಂಬ ಭರವಸೆ ಹೊಂದಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ಸಮಾಜದಲ್ಲಿನ ಕಪಟತೆಯನ್ನು ಪ್ರಸ್ತಾಪಿಸಿದ್ದು, ಆತ ನಾಚಿಕೆಗೇಡಿನ ಕೃತ್ಯ ಮಾಡಿದ್ದರೂ ಯಾರೂ ಕೂಡಾ ಮಾತನಾಡುತ್ತಿಲ್ಲ, ಆತ ಎಲ್ಲಿದ್ದಾನೆ ಎಂಬುದನ್ನು ಹೇಳುತ್ತಿಲ್ಲ. ಮುಂಬೈ ಪೊಲೀಸರು ಕೂಡಲೇ  ಕ್ರಮ ಕೈಗೊಳ್ಳಬೇಕೆಂದು ಕವಿತಾ ಕೌಶಿಕ್ ಒತ್ತಾಯಿಸಿದ್ದಾರೆ.

SCROLL FOR NEXT