ಧ್ವಂಸಗೊಂಡ ಕಟ್ಟಡವನ್ನು ಪರಿಶೀಲಿಸಿದ ನಟಿ ಕಂಗನಾ ರಾನಾವತ್ 
ಬಾಲಿವುಡ್

ಮುಂಬೈಯ ತಮ್ಮ ಕಟ್ಟಡ ಶರದ್ ಪವಾರ್ ಗೆ ಸೇರಿದ್ದು:ಕಂಗನಾ ರಾನಾವತ್ 

ಮಹಾನಗರಿ ಮುಂಬೈಯಲ್ಲಿ ತಾವು ವಾಸಿಸುತ್ತಿರುವ ಕಟ್ಟಡ ಶರದ್ ಪವಾರ್ ಅವರಿಗೆ ಸೇರಿದ್ದು ಎಂದು ಬಾಲಿವುಡ್ ನಟಿ ಕಂಗನಾ ರಾನಾವತ್ ಹೇಳುತ್ತಿದ್ದಂತೆ ಅವರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಬಗ್ಗೆ ಹೇಳುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಯಿತು.

ಮುಂಬೈ: ಮಹಾನಗರಿ ಮುಂಬೈಯಲ್ಲಿ ತಾವು ವಾಸಿಸುತ್ತಿರುವ ಕಟ್ಟಡ ಶರದ್ ಪವಾರ್ ಅವರಿಗೆ ಸೇರಿದ್ದು ಎಂದು ಬಾಲಿವುಡ್ ನಟಿ ಕಂಗನಾ ರಾನಾವತ್ ಹೇಳುತ್ತಿದ್ದಂತೆ ಅವರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಬಗ್ಗೆ ಹೇಳುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಯಿತು.

ಆದರೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಕಂಗನಾ ರಾನಾವತ್ ಹೇಳುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದ್ದಾರೆ. ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ನಂತರ ರಾನಾವತ್ ಮೇಲೆ ವ್ಯಾಪಕ ಟೀಕೆ ವ್ಯಕ್ತವಾಗಿ ಮುಂಬೈಗೆ ಕಾಲಿಡಬೇಡಿ ಎಂದು ಶಿವಸೇನಾ ನಾಯಕರು ಬೆದರಿಕೆ ಹಾಕಿ, ಅವರ ಮುಂಬೈಯ ಕಚೇರಿ ಕಟ್ಟಡವನ್ನು ಮಹಾನಗರ ಪಾಲಿಕೆ ಧ್ವಂಸಗೊಳಿಸಿ ವಿವಾದ ಇನ್ನಷ್ಟು ಭುಗಿಲೆದ್ದಿದೆ. 

ಮೊನ್ನೆ ಬುಧವಾರ ಕಂಗನಾ ಟ್ವೀಟ್ ವೊಂದನ್ನು ಮಾಡಿ, ಈ ಕಟ್ಟಡದ ನಿರ್ಮಾಪಕರು ಈ ಬಗ್ಗೆ ಸ್ಪಷ್ಟಪಡಿಸಬೇಕು, ಈ ಕಟ್ಟಡವನ್ನು ನಾವು ಶರದ್ ಪವಾರ್ ಅವರ ಸಹವರ್ತಿಯ ಬಳಿಯಿಂದ ನಾವು ಖರೀದಿಸಿದ್ದು ಹೀಗಾಗಿ ಅವರು ಉತ್ತರ ಕೊಡಬೇಕು ಎಂದಿದ್ದರು.
ಈ ಬಗ್ಗೆ ಮಾಧ್ಯಮದವರು ಶರದ್ ಪವಾರ್ ಅವರನ್ನು ಕೇಳಿದಾಗ, ಕಟ್ಟಡ ನನಗೆ ಸೇರಿದ್ದು ಎಂದು ಹೇಳಿದರೆ ಖುಷಿಯಾಯಿತು ಎಂದು ವ್ಯಂಗ್ಯವಾಗಿ ನುಡಿದರು.ಜವಾಬ್ದಾರಿಯುತವಾಗಿ ಯಾರು ಮಾತನಾಡಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತದೆ, ಕಟ್ಟಡ ನನಗೆ ಸೇರಿದ್ದಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ