ಅಮಿತ್ ಮಿಸ್ತ್ರಿ 
ಬಾಲಿವುಡ್

'ಬಂದಿಷ್ ಬ್ಯಾಂಡಿಟ್ಸ್' ನಟ ಅಮಿತ್ ಮಿಸ್ತ್ರಿ ಹೃದಯಾಘಾತದಿಂದ ನಿಧನ

ಅಮೆಜಾನ್ ಪ್ರೈಮ್ ವಿಡಿಯೋ ಸಿರೀಸ್ 'ಬಂದಿಷ್ ಬ್ಯಾಂಡಿಟ್ಸ್' ಖ್ಯಾತಿಯ ಬಾಲಿವುಡ್ ನಟ ಅಮಿತ್ ಮಿಸ್ಟ್ರಿ ಅವರು ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ.

ಮುಂಬೈ: ಅಮೆಜಾನ್ ಪ್ರೈಮ್ ವಿಡಿಯೋ ಸಿರೀಸ್ 'ಬಂದಿಷ್ ಬ್ಯಾಂಡಿಟ್ಸ್' ಖ್ಯಾತಿಯ ಬಾಲಿವುಡ್ ನಟ ಅಮಿತ್ ಮಿಸ್ಟ್ರಿ ಅವರು ಶುಕ್ರವಾರ ಬೆಳಗ್ಗೆ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ.

"ಶೋರ್ ಇನ್‌ ದಿ ಸಿಟಿ", ಬೇ ಯಾರ್, 'ಎ ಜೆಂಟಲ್‌ಮ್ಯಾನ್', 'ಕ್ಯಾ ಕೆಹನಾ' ಸೇರಿದಂತೆ ಹಲವು ಗುಜರಾತಿ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಅಮಿತ್ ಮಿಸ್ತ್ರಿ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

ತಮ್ಮ ತಾಯಿಯೊಂದಿಗೆ ಅಂಧೇರಿಯಲ್ಲಿ ವಾಸವಾಗಿದ್ದ 47 ವರ್ಷದ ನಟ ಅಮಿತ್ ಅವರು ಇಂದು ಬೆಳಗ್ಗೆ 9.30ರ ಸುಮಾರಿಗೆ ಮನೆಯಲ್ಲಿಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ.

‘ಅಮಿತ್ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಬೆಳಗ್ಗೆ ಉಪಾಹಾರದ ಬಳಿಕ ಸಣ್ಣಗೆ ಎದೆನೋವು ಎಂದು ಹೇಳಿದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲೂ ವಿಧಿ ಅವಕಾಶ ಕೊಡಲಿಲ್ಲ. ಅಷ್ಟರೊಳಗೇ ಅವರು ನಿಧನರಾದರು. ಮನೋರಂಜನಾ ಕ್ಷೇತ್ರಕ್ಕೆ ಅವರ ಸಾವು ತುಂಬಾ ನಷ್ಟ ಉಂಟುಮಾಡಿದೆ’ ಎಂದು ಮಿಸ್ತ್ರಿ ಅವರ ಮ್ಯಾನೇಜರ್‌ ಮಹರ್ಷಿ ದೇಸಾಯಿ ಹೇಳಿದ್ದಾರೆ.

ಅಹಾನಾ ಕುಮ್ರಾ, ಸುಮೀತ್ ವ್ಯಾಸ್, ತಿಶಾರ್ ಕಪೂರ್ ಮುಂತಾದ ನಟರು ಅಮಿತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!

'ದೇಶಕ್ಕೆ ಬೇಕಿರುವುದು ಸಾಕ್ಷ್ಯವೇ ಹೊರತು ಆರೋಪಗಳಲ್ಲ; ರಾಹುಲ್ ಗಾಂಧಿಯದ್ದು 'ಪೊಳ್ಳು' ಪ್ರತಿಭಟನೆ, ಆರೋಪ: ಬಿಜೆಪಿ ವಾಗ್ದಾಳಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!

'ಬೆಂಗಳೂರಿನಲ್ಲಿ ಬ್ಲಿಂಕಿಟ್ ರೀತಿ ಕೆಲವೇ ನಿಮಿಷದಲ್ಲಿ ಗುಂಡಿ ಮುಚ್ಚುತ್ತೇವೆ': GBA ಮುಖ್ಯ ಆಯುಕ್ತ ಮಹೇಶ್ವರ ರಾವ್