ಕಿರಣ್ ರಾವ್-ಅಮೀರ್ ಖಾನ್ 
ಬಾಲಿವುಡ್

'ನಾವಿಬ್ಬರೂ ಖುಷಿಯಾಗಿದ್ದೇವೆ, ಒಂದೇ ಕುಟುಂಬದಂತೆ ಇದ್ದೇವೆ, ಸಂಬಂಧ ಮಾತ್ರ ಬದಲಾಗಿದೆ': ಅಮೀರ್ ಖಾನ್- ಕಿರಣ್ ರಾವ್

ಬಾಲಿವುಡ್ ಜೋಡಿ ಅಮೀರ್ ಖಾನ್ ಮತ್ತು ಕಿರಣ್ ರಾವ್ ಇದ್ದಕ್ಕಿದ್ದಂತೆ ವಿಚ್ಛೇದನ ಘೋಷಿಸಿ ಅಭಿಮಾನಿಗಳಿಗೆ ಆಘಾತ, ಬೇಸರ ನೀಡಿದ್ದರು.

ಮುಂಬೈ: ಬಾಲಿವುಡ್ ಜೋಡಿ ಅಮೀರ್ ಖಾನ್ ಮತ್ತು ಕಿರಣ್ ರಾವ್ ಇದ್ದಕ್ಕಿದ್ದಂತೆ ವಿಚ್ಛೇದನ ಘೋಷಿಸಿ ಅಭಿಮಾನಿಗಳಿಗೆ ಆಘಾತ, ಬೇಸರ ನೀಡಿದ್ದರು.

15 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಜೋಡಿ ಏಕೆ ಈ ನಿರ್ಣಯ ತೆಗೆದುಕೊಂಡರು, ಇವರ ಪ್ರೀತಿಗೆ ಯಾರು ಅಡ್ಡಬಂದರು ಇತ್ಯಾದಿ ಹಲವು ಪ್ರಶ್ನೆಗಳು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ, ಅಮೀರ್-ಕಿರಣ್ ರಾವ್ ದಂಪತಿಗಳ ಮಧ್ಯೆ ದಂಗಲ್ ಚಿತ್ರದ ನಾಯಕಿ ಫಾತಿಮಾ ಸನಾ ಶೇಕ್ ವಿಲನ್ ನಂತೆ ಬಂದಳು, ಅಮೀರ್ ಮತ್ತು ಫಾತಿಮಾ ನಡುವಿನ ಅಫೇರ್ ನಿಂದಾಗಿ ಇವರಿಬ್ಬರ ದಾಂಪತ್ಯ ಮುರಿದುಬಿದ್ದಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

ನಿನ್ನೆ ತಮ್ಮ ವಿಚ್ಛೇದನವನ್ನು ಪ್ರಕಟಿಸಿದ್ದ ದಂಪತಿ ಮಗ ಆಜಾದ್ ನ ಯೋಗಕ್ಷೇಮವನ್ನು ಇಬ್ಬರೂ ಒಟ್ಟಿಗೆ ನೋಡಿಕೊಳ್ಳುವುದಾಗಿ ಮತ್ತು ಪಾನಿ ಫೌಂಡೇಶನ್ ಮೂಲಕ ಸಾಮಾಜಿಕ ಕಾರ್ಯವನ್ನು ಒಟ್ಟಿಗೆ ಮುಂದುವರಿಸಿಕೊಂಡು ಹೋಗುವುದಾಗಿಯೂ ಹೇಳಿಕೊಂಡಿದ್ದರು. ಅದರಂತೆ ಇಂದು ತಮ್ಮ ಪಾನಿ ಫೌಂಡೇಶನ್  ಯೂಟ್ಯೂಬ್ ಚಾನೆಲ್ ಮೂಲಕ ಲೈವ್ ಬಂದಿದ್ದರು.

ಅದರಲ್ಲಿ ಆರಂಭದಲ್ಲಿ ತಮ್ಮ ವಿಚ್ಛೇದನ ನಿರ್ಣಯದ ಬಗ್ಗೆ ಸ್ಪಷ್ಟನೆ ನೀಡಿದರು.ಹೊರಗೆ ಸಮಾಜದಲ್ಲಿ ಜನರು, ಅಭಿಮಾನಿಗಳು ಏನೇ ಮಾತನಾಡಿಕೊಳ್ಳುವುದಿದ್ದರೂ ತಮ್ಮ ಮಧ್ಯೆ ಏನೂ ನಡೆದಿಲ್ಲವೆಂಬಂತೆ ಕಂಡುಬಂದರು. ಕಳೆದ ಎರಡು ವಾರಗಳಿಂದ ನಾವು ಕಾಣಿಸಿಕೊಂಡಿರಲಿಲ್ಲ, ಹಿಮಾಚಲ ಪ್ರದೇಶಕ್ಕೆ ಕೆಲಸದ ಮೇಲೆ ಹೋಗಿದ್ದೆವು, ಇಂದು ನಿಮ್ಮ ಜೊತೆ ಮಾತನಾಡಬೇಕೆಂದು ಲೈವ್ ಬಂದಿದ್ದೇವೆ, ಎಲ್ಲರಿಗೂ ಸ್ವಾಗತ ಎಂದು ಮಾತು ಸುರುವಿಟ್ಟರು.

'ನಿನ್ನೆ ನಾವು ನಮ್ಮ ವಿಚ್ಛೇದನದ ಬಗ್ಗೆ ಪ್ರಕಟಣೆ ಹೊರಡಿಸಿದ್ದೆವು. ನಿಮಗೆಲ್ಲರಿಗೂ ಆಘಾತ,ದುಃಖವಾಗಿರಬಹುದು,ಆದರೆ ನಾವು ಇನ್ನು ಮುಂದೆಯೂ ಜೊತೆಯಲ್ಲಿರುತ್ತೇವೆ, ಪಾನಿ ಫೌಂಡೇಶನ್ ಮೂಲಕ ಒಟ್ಟಿಗೆ ಕೆಲಸ ಮುಂದುವರಿಸುತ್ತೇವೆ. ಪಾನಿ ಫೌಂಡೇಶನ್ ನಮಗೆ ಮಗುವಿದ್ದ ಹಾಗೆ. ಆಜಾದ್ ಹೇಗೆ ನಮ್ಮ ಮಗನೋ ಅದೇ ರೀತಿ ಪಾನಿ ಫೌಂಡೇಶನ್ ಕೂಡ ನಮ್ಮ ಮಗು ಎಂದು ಜೋಡಿಯಿಬ್ಬರೂ ಹೇಳಿಕೊಂಡರು.

ಈ ವಿಷಯವನ್ನು ಸ್ಪಷ್ಟಪಡಿಸಬೇಕೆಂದು ನಾವು ಅಂದುಕೊಂಡಿದ್ದೆವು, ನೀವು ಯಾರೂ ಬೇಸರಪಟ್ಟುಕೊಳ್ಳಬೇಕಾದ ಅಗತ್ಯವಿಲ್ಲ, ಪಾನಿ ಫೌಂಡೇಶನ್ ಮೂಲಕ ನಾವಿಬ್ಬರೂ ಜೊತೆಯಾಗಿರುತ್ತೇವೆ. ಜನರ ಆಶೀರ್ವಾದ ಹಿಂದಿನಂತೆಯೇ ನಮಗೆ ಮುಂದೆಯೂ ಬೇಕು. ನಾವಿಬ್ಬರೂ ಖುಷಿಯಾಗಿದ್ದೇವೆ, ಒಂದೇ ಕುಟುಂಬದಂತೆ ಇದ್ದೇವೆ, ನಮ್ಮ ಸಂಬಂಧದಲ್ಲಿ ಮಾತ್ರ ಬದಲಾಗಿದೆಯೇ ಹೊರತು ನಮ್ಮಿಬ್ಬರ ಮಧ್ಯೆ ಪ್ರೀತಿ, ವಿಶ್ವಾಸ, ಗೌರವ ಮೊದಲಿನಂತೆಯೇ ಇದೆ ಎಂದು ಜೋಡಿ ಪರಸ್ಪರ ಕೈ ಹಿಡಿದುಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT