ಬಾಲಿವುಡ್

ವಂಚನೆ ಪ್ರಕರಣ: ಸಲ್ಮಾನ್ ಖಾನ್, ಇತರ 8 ಮಂದಿಗೆ ಚಂಡೀಘರ್ ಪೋಲೀಸರಿಂದ ಸಮನ್ಸ್ ಜಾರಿ

Raghavendra Adiga

ಚಂಡೀಘರ್: ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ ಶಾಪ್ ಮಾಲೀಕರು ಸಲ್ಲಿಸಿದ ವಂಚನೆ ದೂರಿನ ಹಿನ್ನೆಲೆಯಲ್ಲಿ ನಟ ಸಲ್ಮಾನ್ ಖಾನ್ ಮತ್ತು ಅವರ ಸಹೋದರಿಅಲ್ವಿರಾ ಖಾನ್ ಅಗ್ನಿಹೋತ್ರಿ ಸೇರಿದಂತೆ ಒಂಬತ್ತು ಮಂದಿಗೆ ಚಂಡೀಘರ್ ಪೊಲೀಸರು ಸಮನ್ಸ್ ಕಳುಹಿಸಿದ್ದಾರೆ.

ಮಣಿ ಮಾಜ್ರದಲ್ಲಿ ಮಳಿಗೆಯನ್ನು ಹೊಂದಿರುವ ದೂರುದಾರ ಅರುಣ್ ಗುಪ್ತಾ, ಕಂಪನಿಯು ತನಗೆ ನೀಡಿದ್ದ ವಾಗ್ದಾನವನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು. ಸಲ್ಮಾನ್ ಅಂಗಡಿಯನ್ನು ಪ್ರಚಾರಕ್ಕೆ ತರುವ ಭರವಸೆ ನೀಡಿದ್ದಾಗಿ ಗುಪ್ತಾ ಆರೋಪಿಸಿದ್ದಾರೆ. ಆದಾಗ್ಯೂ ಅದು ಹಾಗಾಗಿಲ್ಲ.

ಸಲ್ಮಾನ್ ಕಾನ್ 'ಬೀಯಿಂಗ್ ಹ್ಯೂಮನ್' ಹೆಸರಿನ ಎನ್‌ಜಿಒ ನಡೆಸುತ್ತಿದ್ದಾರೆ ಹಾಗೂ ಅದೇ ಹೆಸರಿನ ಬ್ರ್ಯಾಂಡ್ ನಲ್ಲಿ ಉತ್ಪನ್ನಗಳ ಮಾರಾಟವನ್ನೂ ನಡೆಸಿದ್ದಾರೆ. ಅರುಣ್ ಕುಮಾರ್ ಅದೇ ಸಂಸ್ಥೆಯಡಿಯಲ್ಲಿ ತಮ್ಮ ಮಳಿಗೆ ತೆರೆದಿದ್ದರು. ದೂರುದಾರ ಹೇಳುವಂತೆ ಸುಮಾರು 2-3 ಕೋಟಿ ರೂಪಾಯಿ ವ್ಯಯಿಸಿ ಜ್ಯುವೆಲ್ಲರಿ ಶಾಪ್ ತೆರೆದರೂ ದಾಸ್ತಾನಿಗಾಗಿ ಹಣ ಸಹ ಪಾವತಿಸಿಯೂ ಯಾವ ದಾಸ್ತಾನೂ ಇದುವರೆಗೆ ಬಂದಿಲ್ಲ  ಹಾಗಾಗಿ ಯಿಂಗ್ ಹ್ಯೂಮನ್ ನವರು ಅವರಿಗೆ ವಂಚಿಸಿದ್ದಾರೆ.

ಈ ಅಂಗಡಿಯನ್ನು ನಟ ಉದ್ಘಾಟಿಸುವುದಾಗಿ ಭರವಸೆ ನೀಡಿದ್ದರು., ಆದರೆ ಅವರ ಸೋದರ ಮಾವ ಆಯುಷ್ ಶರ್ಮಾ ಇದನ್ನು 2018 ರಲ್ಲಿ ಉದ್ಘಾಟಿಸಿದರು.

ಜುಲೈ 13 ರೊಳಗೆ ಒಂಬತ್ತು ಜನ ವಿಚಾರಣೆಗೆ ಹಾಜರಾಗಬೇಕೆಂದು ಚಂಡೀಘರ್ ಪೊಲೀಸರು ಸಮನ್ಸ್ ನಲ್ಲಿ ಹೇಳಿದ್ದಾರೆ.

SCROLL FOR NEXT