ಬಾಲಿವುಡ್

ನನ್ನ ತಾಯಿಯ ಕನಸು ನನಸಾಯಿತು: ಒಟಿಟಿ ಬಿಗ್ ಬಾಸ್ ಕರಣ್ ಜೋಹರ್ ನಿರೂಪಣೆ!

Shilpa D

ಹಿಂದಿ ಕಿರುತೆರೆಯ ಬಹು ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್' ಒಟಿಟಿಯಲ್ಲಿ ಪ್ರಸಾರಗೊಳ್ಳಲಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್‌ ಜೋಹರ್‌ ಅವರು ಒಟಿಟಿಯಲ್ಲಿ ಪ್ರಸಾರಗೊಳ್ಳುವ ಬಿಗ್‌ ಬಾಸ್‌ ಶೋ ನಡೆಸಿಕೊಡಲಿದ್ದಾರೆ. 

ಹಿಂದಿ ಬಿಗ್​ ಬಾಸ್​ ಸೀಸನ್​ 15’ ಆಗಸ್ಟ್​ 8ರಿಂದ ಆರಂಭಗೊಳ್ಳುತ್ತಿದೆ. ವೂಟ್​ ಆ್ಯಪ್​ಗೆ ಈ ಬಾರಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಹೀಗಾಗಿ, ಬಿಗ್​ ಬಾಸ್​ ಒಟಿಟಿಯನ್ನು ವೂಟ್​ ಪರಿಚಯಿಸಿದೆ. 

ಮೊದಲು ಆರು ವಾರದ ಎಪಿಸೋಡ್​ಗಳು ವೂಟ್​ನಲ್ಲಿ ಮಾತ್ರ ಪ್ರಸಾರವಾಗಲಿದ್ದು ನಂತರ ಟಿವಿಗೆ ಶಿಫ್ಟ್​ ಆಗಲಿದೆ. ಒಟಿಟಿ ಶೋಅನ್ನು ನಡೆಸಿಕೊಡೋಕೆ ಖ್ಯಾತ ಬಾಲಿವುಡ್​ ನಿರ್ಮಾಪಕ ಕರಣ್​ ಜೋಹರ್ ಆಗಮಿಸಿದ್ದಾರೆ. ಟಿವಿಯಲ್ಲಿ ಪ್ರಸಾರವಾಗುವ ಶೋ ನ್ನು ಸಲ್ಮಾನ್ ಖಾನ್​ ನಡೆಸಿಕೊಡಲಿದ್ದಾರೆ. 

ಸಾಮಾನ್ಯವಾಗಿ ಬಿಗ್​ ಬಾಸ್ ಪ್ರತೀ ಸೀಸನ್​ 100ರಿಂದ 120 ದಿನಗಳ ಕಾಲ ನಡೆಯುತ್ತದೆ. ಅಂದರೆ ನಾಲ್ಕು ತಿಂಗಳಿಗೆ ಬಿಗ್​ ಬಾಸ್​ ಪೂರ್ಣಗೊಳ್ಳುತ್ತದೆ. ಆದರೆ, ಈಗ ಇದನ್ನು ಎರಡು ತಿಂಗಳು ಹೆಚ್ಚುವರಿಯಾಗಿ ನಡೆಸೋಕೆ ವಾಹಿನಿ ನಿರ್ಧರಿಸಿದೆ. ಇದು ತುಂಬಾನೇ ದೀರ್ಘ ಎನಿಸಿರುವುದರಿಂದ ಮೊದಲ ಆರು ವಾರ ಈ ಶೋ ಅನ್ನು ಒಟಿಟಿಯಲ್ಲಿ ಪ್ರಸಾರ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಈಗ ಈ ಶೋ ಅನ್ನು ಕರಣ್​ ನಡೆಸಿಕೊಡಲಿದ್ದಾರೆ.

ಕರಣ್​ ಅವರನ್ನು ಈ ಶೋಗೆ ಆಯ್ಕೆ ಮಾಡಿಕೊಳ್ಳೋಕೂ ಒಂದು ಕಾರಣವಿದೆ. ಕರಣ್​ ಜೋಹರ್​ ಈಗಾಗಲೇ ಸಾಕಷ್ಟು ಶೋಗಳನ್ನು ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ. ಕಾಫಿ ವಿತ್​ ಕರಣ್​ಗೆ ದೊಡ್ಡ ಮಟ್ಟದ ವೀಕ್ಷಕರ ವಲಯ ಇದೆ. ಹೀಗಾಗಿ, ಬಿಗ್​ ಬಾಸ್​ ಒಟಿಟಿಯನ್ನು ಅವರು ನಡೆಸಿಕೊಟ್ಟರೆ ವೀಕ್ಷಕರನ್ನು ಸೆಳೆದುಕೊಳ್ಳಬಹುದು ಎಂಬುದು ವಾಹಿನಿಯ ಲೆಕ್ಕಾಚಾರವಾಗಿದೆ.

SCROLL FOR NEXT