ಕಂಗನಾ ರಾನಾವತ್ 
ಬಾಲಿವುಡ್

ಬಾಲಿವುಡ್ ನಟಿ ಕಂಗನಾ ರಾನಾವತ್ ಗೆ ಕೊರೋನಾ ಪಾಸಿಟಿವ್

ಬಾಲಿವುಡ್ ನಟಿ ಕಂಗನಾ ರಾನಾವತ್ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ತಮಗೆ ಸೋಂಕು ತಗುಲಿರುವುದಾಗಿ ನಟಿ ಕಂಗನಾ ಹೇಳಿಕೊಂಡಿದ್ದಾರೆ.

ಮುಂಬೈ: ಬಾಲಿವುಡ್ ನಟಿ ಕಂಗನಾ ರಾನಾವತ್ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ತಮಗೆ ಸೋಂಕು ತಗುಲಿರುವುದಾಗಿ ನಟಿ ಕಂಗನಾ ಹೇಳಿಕೊಂಡಿದ್ದಾರೆ.

ಈ ವಿಷಯವನ್ನು ಸ್ವತಃ ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

''ಕಳೆದ ಕೆಲವು ದಿನಗಳಿಂದ ನನ್ನ ಕಣ್ಣುಗಳಲ್ಲಿ ಸ್ವಲ್ಪ ಉರಿ ಕಾಣಿಸಿಕೊಂಡಿತ್ತು. ಸ್ವಲ್ಪ ಸುಸ್ತು ಹಾಗೂ ನಿಶ್ಯಕ್ತಿ ಉಂಟಾಗಿದೆ. ಹಿಮಾಚಲಕ್ಕೆ ಹೋಗಲು ಬಯಸಿದ್ದೆ. ಅದಕ್ಕೂ ಮುನ್ನ ಕೋವಿಡ್‌ ಪರೀಕ್ಷೆಗೆ ಒಳಗಾದೆ. ಇಂದು ವರದಿ ಪಾಸಿಟಿವ್‌ ಎಂದು ಬಂದಿದೆ. ಹಾಗಾಗಿ ನಾನು ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದೇನೆ. ಈ ವೈರಸ್‌ ನನ್ನ ದೇಹದೊಳಗೆ ಸೇರಿ ಪಾರ್ಟಿ ಮಾಡುತ್ತಿದೆ ಎಂದು ಗೊತ್ತಿರಲಿಲ್ಲ.

ಈಗ ನಾನು ಅದನ್ನು ನಾಶ ಮಾಡುತ್ತೇನೆ ಎಂದು ಗೊತ್ತು. ಜನರೇ ಯಾವುದೇ ಶಕ್ತಿ ನಿಮ್ಮ ಮೇಲೆ ಸವಾರಿ ಮಾಡಲು ಅವಕಾಶ ಕೊಡಬೇಡಿ. ನೀವು ಹೆದರಿದರೆ ಅದು (ವೈರಸ್‌) ನಿಮ್ಮನ್ನು ಹೆಚ್ಚು ಹೆದರಿಸುತ್ತದೆ. ಬನ್ನಿ ಈ ಕೋವಿಡ್ -19 ಅನ್ನು ನಾಶಪಡಿಸೋಣ. ಇದು ಅಲ್ಪಕಾಲದ ಜ್ವರ. ಆದರೆ, ಹೆಚ್ಚು ಒತ್ತಡ ಹಾಕುತ್ತಿದೆ. ಜನರನ್ನು ಮಾನಸಿಕವಾಗಿ ಆತಂಕಕ್ಕೆ ತಳ್ಳಿದೆ. ಹರ ಹರ ಮಹಾದೇವ್‌'' ಎಂದು ಬರೆದುಕೊಂಡಿದ್ದಾರೆ.

ಜಾಲತಾಣಗಳಲ್ಲಿ ಸದಾ ಕ್ರಿಯಾಶೀಲರಾಗಿರುವ ಕಂಗನಾ ಅವರ ಟ್ವಿಟರ್‌ ಖಾತೆಯನ್ನು ಇತ್ತೀಚೆಗೆ ಶಾಶ್ವತವಾಗಿ ಅಮಾನತು ಮಾಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT