ಬಾಲಿವುಡ್

ಅಂದು  'ಪದ್ಮಾವತ್' ಇಂದು 'ಪೃಥ್ವಿರಾಜ್': ಅಕ್ಷಯ್ ಕುಮಾರ್ ಹೊಸ ಚಿತ್ರದ ಶೀರ್ಷಿಕೆ ಬದಲಾವಣೆಗೆ ಕರ್ಣಿ ಸೇನಾ ಆಗ್ರಹ!

Raghavendra Adiga

ಸತ್ಯವನ್ನು ವಿರೂಪಗೊಳಿಸುವ ಕಾರಣ ನೀಡಿ ಸಂಜಯ್ ಲೀಲಾ ಭನ್ಸಾಲಿ ಅವರ 'ಪದ್ಮಾವತ್' ಬಿಡುಗಡೆ ಕುರಿತು ವಿವಾದ ಎಬ್ಬಿಸಿದ್ದ ಶ್ರೀ ರಜಪೂತ್ ಕರ್ಣಿ ಸೇನಾ ಇದೀಗ ನಟ ಅಕ್ಷಯ್ ಕುಮಾರ್ ಅಭಿನಯದ ಮುಂದಿನ ಚಿತ್ರ 'ಪೃಥ್ವಿರಾಜ್' ಕುರಿತು ತಕರಾರು ಎತ್ತಿದೆ. ಚಿತ್ರದ ಶೀರ್ಷಿಕೆ ಬದಲಾಯಿಸಬೇಕೆಂದು ಒತ್ತಾಯಿಸುತ್ತಿದೆ.

ರಜಪೂತ ಸಮುದಾಯಕ್ಕೆ ಸಂಬಂಧಿಸಿದ ಇತಿಹಾಸವನ್ನು ಮೂಲವಾಗಿಸಿಕೊಂಡ ಫ್ರಿಂಜ್ ಗ್ರೂಪ್, ಯಶ್ ರಾಜ್ ಫಿಲ್ಮ್ಸ್ ಹಿಸ್ಟಾರಿಕ್ ಡ್ರಾಮಾದ ಶೀರ್ಷಿಕೆ ದೆಹಲಿಯ ಕೊನೆಯ ಹಿಂದೂ ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ ಹಿರಿಮೆ ಸಾರಬೇಕು ಎಂದು ಬಯಸಿದೆ. ಚಿತ್ರಕ್ಕೆ 'ಪೃಥ್ವಿರಾಜ್' ಎಂದು ಹೆಸರಿಸುವುದರಿಂದ "ಅವರ ವೈಭವದ ಆಳ್ವಿಕೆಗೆ ಅನ್ಯಾಯವಾಗುತ್ತದೆ" ಎಂದಿರುವ ಸಂಘಟನೆ  ಪ್ರತಿಭಟನೆಗಳ ಬಗ್ಗೆ ಎಚ್ಚರಿಕೆ ನೀಡಿದೆ.

"ಚಲನಚಿತ್ರ ನಿರ್ಮಾಪಕರು ಕೊನೆಯ ಹಿಂದೂ ಚಕ್ರವರ್ತಿ ಮತ್ತು ಮಹಾನ್ ರಜಪೂತ ರಾಜನಾಗಿದ್ದ ಮಹಾರಾಜ ಪೃಥ್ವಿರಾಜ್ ಚೌಹಾಣ್ ಅವರ ಮೇಲೆ ಚಿತ್ರ ಮಾಡಿದ್ದಾರೆ. ಚಿತ್ರದ ಹೆಸರನ್ನು ಕೇವಲ ಪೃಥ್ವಿರಾಜ್ ಎಂದು ಏಕೆ ಇಡಬೇಕು? ಶೀರ್ಷಿಕೆಗೆ ಪೂರ್ಣ ಹೆಸರು ಇರಬೇಕು" ಎಂದು ಶ್ರೀ ರಜಪೂತ್ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ. ಮಹಿಪಾಲ್ ಸಿಂಗ್ ಮಕ್ರಾನಾ ಹೇಳಿದರು

ದಿಲೀಪ್ ಸಿಂಗ್ ನೇತೃತ್ವದ ಕರ್ಣಿ ಸೇನೆಯ ಮುಂಬೈ ತಂಡವು ಕಳೆದ ವಾರ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಶೀರ್ಷಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ, ಆದರೆ ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಈ ಕುರಿತು ಪ್ರತಿಕ್ರಿಯೆಗಾಗಿ ಕೇಳಲು ನಿರ್ಮಾಣ ಸಂಸ್ಥೆಯು ಯಾವ ಉತ್ತರ ನೀಡಿಲ್ಲ.

ಕಳೆದ ವರ್ಷ ಮಾರ್ಚ್‌ನಲ್ಲಿ, ಮಕ್ರಾನ ನೇತೃತ್ವದ ಕರ್ಣಿ ಸೇನಾ ಸದಸ್ಯರು ಜೈಪುರದ ಹೊರವಲಯದಲ್ಲಿರುವ "ಪೃಥ್ವಿರಾಜ್" ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದರು.

ಮಕ್ರಾನ ಅವರ ಪ್ರಕಾರ, ಚಲನಚಿತ್ರ ನಿರ್ಮಾಪಕರು ಬಯೋಪಿಕ್ ಮಾಡುವಾಗ ಐತಿಹಾಸಿಕ ವ್ಯಕ್ತಿಗಳಿಗೆ ಸರಿಯಾದ ಗೌರವವನ್ನು ನೀಡಬೇಕು.

SCROLL FOR NEXT