ಬಾಲಿವುಡ್

ಬಾಲಿವುಡ್ ಚಿತ್ರ ನಿರ್ಮಾಪಕ ನಿತಿನ್ ಮನಮೋಹನ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

Nagaraja AB

ಮುಂಬೈ: ಬಾಲಿವುಡ್ ಚಿತ್ರ ನಿರ್ಮಾಪಕ ನಿತಿನ್ ಮನಮೋಹನ್ ಅವರನ್ನು  ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ನಿತಿನ್ ಮನಮೋಹನ್ ಅವರು ಬೋಲ್ ರಾಧಾ ಬೋಲ್ ಮತ್ತು ಲಾಡ್ಲಾ ಮುಂತಾದ ಹಿನ್ನಲೆ ಚಲನಚಿತ್ರಗಳನ್ನು ನಿರ್ಮಿಸಿ ಹೆಸರುವಾಸಿಯಾಗಿದ್ದಾರೆ. 

ಶನಿವಾರ ಸಂಜೆ ನಿತಿನ್ ಮನಮೋಹನ್ ಅವರಿಗೆ ತೀವ್ರ ಹೃದಯಾಘಾತವಾಗಿದ್ದು,  ಅವರನ್ನು ನವಿ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಸ್ತುತ ಅವರು ತೀವ್ರ ನಿಗಾ ಘಟಕದಲ್ಲಿ ಇದ್ದಾರೆ ಎಂದು ಆಸ್ಪತ್ರೆ ಅಧಿಕಾರಿ ತಿಳಿಸಿದ್ದಾರೆ. 

ದಿವಂಗತ ನಟ ಮನಮೋಹನ್ ಅವರ ಪುತ್ರನಾಗಿರುವ ನಿತಿನ್ ಮನಮೋಹನ್ ಅವರು, ಬ್ರಹ್ಮಚಾರಿ, ಗುಮ್ನಾಂ ಮತ್ತು ನಯಾ ಜಮಾನಾ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

SCROLL FOR NEXT