ಪ್ರಿಯಾಂಕಾ ಛೋಪ್ರಾ 
ಬಾಲಿವುಡ್

ತಮ್ಮ 20 ವರ್ಷಗಳ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಸಮಾನ ವೇತನ ಪಡೆದ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ತಮ್ಮ ಮುಂಬರುವ ಅಮೆಜಾನ್ ಪ್ರೈಮ್ ವಿಡಿಯೋ ಸರಣಿ 'ಸಿಟಾಡೆಲ್'ಗಾಗಿ ಮೊದಲ ಬಾರಿಗೆ ತಮ್ಮ ಸಹ ನಟನಿಗೆ ಸಮಾನವಾದ ವೇತನ ಪಡೆದಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಮುಂಬೈ: ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ತಮ್ಮ ಮುಂಬರುವ ಅಮೆಜಾನ್ ಪ್ರೈಮ್ ವಿಡಿಯೋ ಸರಣಿ 'ಸಿಟಾಡೆಲ್'ಗಾಗಿ ಮೊದಲ ಬಾರಿಗೆ ತಮ್ಮ ಸಹ ನಟನಿಗೆ ಸಮಾನವಾದ ವೇತನ ಪಡೆದಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಅವರು 20 ವರ್ಷಗಳಿಂದಲೂ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ.

ನಾನು ಈವರೆಗೂ ಬಾಲಿವುಡ್‌ನಲ್ಲಿ ಎಂದಿಗೂ ಸಮಾನ ವೇತನವನ್ನು ಪಡೆದಿಲ್ಲ ಎಂದು ಬಿಬಿಸಿಯ 100 ವುಮೆನ್ (ದಿ ಇಂಡಿಪೆಂಡೆಂಟ್ ಮೂಲಕ) ಸಂದರ್ಶನದಲ್ಲಿ ಪ್ರಿಯಾಂಕಾ ಹೇಳಿದ್ದಾರೆ.

ನನ್ನ ಸಹನಟನ ಸಂಬಳದ ಶೇ 10 ರಷ್ಟನ್ನು ನಾನು ಪಡೆಯುತ್ತಿದ್ದೆ. ಈ ವೇತನದ ಅಂತರ ದೊಡ್ಡದಾಗಿದೆ ಮತ್ತು ಗಣನೀಯವಾಗಿ ದೊಡ್ಡದಾಗಿದೆ. ಇನ್ನೂ ಅನೇಕ ಮಹಿಳೆಯರು ಇದೇ ರೀತಿಯಲ್ಲಿ ವೇತನ ಪಡೆಯುತ್ತಿದ್ದಾರೆ. ನನ್ನ ಪೀಳಿಗೆಯ ಮಹಿಳಾ ನಟಿಯರು ಖಂಡಿತವಾಗಿಯೂ ಸಮಾನ ವೇತನ ಕೇಳಿದ್ದಾರೆ. ನಾವು ಕೇಳಿದ್ದೇವೆ, ಆದರೆ ನಮಗೆ ಅದು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಲಿಂಗಭೇದಭಾವದ ವಿರುದ್ಧ ಹೋರಾಡಿದ ಇತರ ವಿಧಾನಗಳನ್ನು ಪ್ರಿಯಾಂಕಾ ವಿವರಿಸಿದ್ದಾರೆ. 'ಸೆಟ್‌ನಲ್ಲಿ ಗಂಟೆಗಳ ಕಾಲ ಕುಳಿತುಕೊಳ್ಳುವುದು ಸಂಪೂರ್ಣವಾಗಿ ಸರಿ ಎಂದು ನಾನು ಭಾವಿಸಿದೆ. ಆದರೆ, ನನ್ನ ಸಹನಟ ಅವರಿಗೆ ಬೇಕಾದ ಸಮಯವನ್ನು ತೆಗೆದುಕೊಳ್ಳುತ್ತಾರೆ. ಯಾವಾಗ ಸೆಟ್‌ಗೆ ಬರಬೇಕು ಎಂದು ಅವರು ಬಯಸುತ್ತಾರೋ ಆಗ ನಾವು ಶೂಟ್ ಮಾಡಲು ನಿರ್ಧರಿಸುತ್ತೇವೆ' ಎಂದು ಅವರು ಹೇಳಿದರು.

ನನ್ನನ್ನು 'ಕಪ್ಪು ಬೆಕ್ಕು' ಮತ್ತು 'ಕಪ್ಪುಬಣ್ಣ' (ಡಸ್ಕಿ) ಎಂದು ಕರೆಯುತ್ತಿದ್ದರು. ಅಂದರೆ, ನಾವೆಲ್ಲರೂ ಅಕ್ಷರಶಃ ಎಣ್ಣೆಗೆಂಪು ಬಣ್ಣದಲ್ಲಿರುವ ದೇಶದಲ್ಲಿ 'ಡಸ್ಕಿ' ಎಂದರೆ ಏನು?. ನಾನು ಸಾಕಷ್ಟು ಸುಂದರವಾಗಿಲ್ಲ ಎಂದು ನಾನು ಭಾವಿಸಿದೆ. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಎಂದು ನಾನು ನಂಬಿದ್ದೇನೆ. ಬಿಳಿ ಮೈಬಣ್ಣದ ನನ್ನ ಸಹ ನಟರಿಗಿಂತ ನಾನು ಬಹುಶಃ ಸ್ವಲ್ಪ ಹೆಚ್ಚು ಪ್ರತಿಭಾವಂತೆಯಾಗಿದ್ದೆ' ಎಂದು ತಿಳಿಸಿದ್ದಾರೆ.

ಅಮೆಜಾನ್ ಪ್ರೈಮ್ ವೀಡಿಯೊದ ಮುಂಬರುವ 'ಸಿಟಾಡೆಲ್' ವೆಬ್ ಸರಣಿಯನ್ನು 'ಅವೆಂಜರ್ಸ್: ಇನ್ಫಿನಿಟಿ ವಾರ್' ನಿರ್ದೇಶಕರಾದ ಜೋ ಮತ್ತು ಆಂಥೋನಿ ರುಸ್ಸೋ ಅವರು ನಿರ್ದೇಶಿಸಿದ್ದಾರೆ. ಇದರಲ್ಲಿ ಪ್ರಿಯಾಂಕಾ ಮತ್ತು ರಿಚರ್ಡ್ ಮ್ಯಾಡೆನ್ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT