ಬಾಲಿವುಡ್ ನಟಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್ 
ಬಾಲಿವುಡ್

ಕತ್ರಿನಾ- ವಿಕ್ಕಿ ಕೌಶಲ್ ಗೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ; ನಟಿಯನ್ನು ಮದ್ವೆಯಾಗುವ ಆಸೆ!

ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಅವರ ಪತಿ ವಿಕ್ಕಿ ಕೌಶಲ್ ಅವರಿಗೆ ಸೋಷಿಯಲ್ ಮೀಡಿಯಾದ ಮೂಲಕ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ.

ನವದೆಹಲಿ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಅವರ ಪತಿ ವಿಕ್ಕಿ ಕೌಶಲ್ ಅವರಿಗೆ ಸೋಷಿಯಲ್ ಮೀಡಿಯಾದ ಮೂಲಕ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ.

ಮಾಹಿತಿಯ ಪ್ರಕಾರ, ಮುಂಬೈ ಪೊಲೀಸರು ಮನ್ವಿಂದರ್ ಸಿಂಗ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮನ್ವಿಂದರ್ ವೃತ್ತಿಯಲ್ಲಿ ಬಾಲಿವುಡ್ ನಲ್ಲಿ ಅಂಬೆಗಾಲು ಇಡುತ್ತಿದ್ದ ನಟ ಹಾಗೂ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ದೊಡ್ಡ ಅಭಿಮಾನಿ ಎಂದು ಹೇಳಲಾಗುತ್ತಿದೆ. ಈತ ಕತ್ರಿನಾಳನ್ನು ಮದುವೆಯಾಗಲು ಬಯಸಿದ್ದನಂತೆ. ಇದಕ್ಕಾಗಿಯೇ ಕಳೆದ ಕೆಲವು ತಿಂಗಳುಗಳಿಂದ ಅವರು ಸಾಮಾಜಿಕ ಮಾಧ್ಯಮದಲ್ಲಿ ಕತ್ರಿನಾ ಮತ್ತು ವಿಕ್ಕಿ ಕೌಶಲ್‌ಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದನು ಎಂದು ಮೂಲಗಳು ತಿಳಿಸಿವೆ.

ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಯ ಇನ್‌ಸ್ಟಾಗ್ರಾಮ್ ಖಾತೆ ನೋಡಿದರೆ ನೀವೂ ಬೆಚ್ಚಿ ಬೀಳುತ್ತೀರಿ. ಈ ವ್ಯಕ್ತಿ ತನ್ನ ಹೆಸರನ್ನು ಕಿಂಗ್ ಆದಿತ್ಯ ರಜಪೂತ್ VVIP ಎಂದು Instagram ನಲ್ಲಿ ಬರೆದುಕೊಂಡಿದ್ದಾನೆ. ಪ್ರೊಫೈಲ್ ಬಯೋದಲ್ಲಿ, ವ್ಯಕ್ತಿಯು ತನ್ನನ್ನು ತಾನು ನಟ ಎಂದು ವಿವರಿಸಿದ್ದಾನೆ. ಅತ್ಯಂತ ಆಘಾತಕಾರಿ ಸಂಗತಿಯೆಂದರೆ, ಈ ವ್ಯಕ್ತಿ ಬಯೋದಲ್ಲಿ ನನ್ನ ಗೆಳತಿ/ಹೆಂಡತಿ @katrinakaif ಎಂದು ಬರೆದಿದ್ದಾನೆ. ಆರೋಪಿ ಕತ್ರಿನಾಳ ಅಧಿಕೃತ ಐಡಿಯನ್ನೂ ತನ್ನ ಪೋಸ್ಟ್ ನಲ್ಲಿ ಟ್ಯಾಗ್ ಮಾಡಿಕೊಂಡಿದ್ದಾನೆ.

ಅಭಿಮಾನಿಗಳ ನೆಚ್ಚಿನ ಜೋಡಿ ಕತ್ರಿನಾ-ವಿಕ್ಕಿ
ಕತ್ರಿನಾ ಮತ್ತು ವಿಕ್ಕಿ ಇಬ್ಬರೂ ಅಭಿಮಾನಿಗಳ ನೆಚ್ಚಿನ ಜೋಡಿ. ಕತ್ರಿನಾ ಇತ್ತೀಚೆಗಷ್ಟೇ ಮಾಲ್ಡೀವ್ಸ್‌ನಲ್ಲಿ ತನ್ನ ಪತಿ ಮತ್ತು ಆಪ್ತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಹಿಂತಿರುಗಿದ್ದಾರೆ. ಆದ್ರೆ ಈ ಸ್ಟಾರ್ ಜೋಡಿಗೆ ಬೆದರಿಕೆ ಬಂದ ತಕ್ಷಣ ಅಭಿಮಾನಿಗಳು ಹಾಗೂ ಪತಿ-ಪತ್ನಿ ಟೆನ್ಷನ್ ಆಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!