ಕಂಗನಾ ರಾನಾವತ್ 
ಬಾಲಿವುಡ್

ಪತನದತ್ತ 'ಮಹಾ' ಮೈತ್ರಿ ಸರ್ಕಾರ: ಕಂಗನಾ ರಾನಾವತ್ ಹಳೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್!

ಅದು 2020ರ ಸೆಪ್ಟೆಂಬರ್‌, ಅಕ್ರಮ ನಿರ್ಮಾಣದ ಆರೋಪದ ಮೇಲೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಬಾಲಿವುಡ್ ನಟಿ ಕಂಗನಾ ರಾನಾವತ್ ಅವರ ಮುಂಬೈ ಕಚೇರಿಯನ್ನು ನೆಲಸಮಗೊಳಿಸಿತ್ತು. 

ಮುಂಬೈ: ಅದು 2020ರ ಸೆಪ್ಟೆಂಬರ್‌, ಅಕ್ರಮ ನಿರ್ಮಾಣದ ಆರೋಪದ ಮೇಲೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಬಾಲಿವುಡ್ ನಟಿ ಕಂಗನಾ ರಾನಾವತ್ ಅವರ ಮುಂಬೈ ಕಚೇರಿಯನ್ನು ನೆಲಸಮಗೊಳಿಸಿತ್ತು. 

ಪ್ರಖರವಾದ ಮುಲಾಜಿಲ್ಲದ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಕಂಗನಾ ರಾನಾವತ್ ಅಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ಪ್ರಸ್ತುತ ಮಹಾರಾಷ್ಟ್ರದಲ್ಲಿ ಗಂಭೀರ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಕಂಗನಾ ಅವರು ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ ಹಳೆಯ ವೀಡಿಯೊ ಮತ್ತೊಮ್ಮೆ ಸಾಮಾಜಿಕ ತಾಣದಲ್ಲಿ ಇಂದು ವೈರಲ್ ಆಗುತ್ತಿದೆ.

ಹಳೆ ವಿಡಿಯೊದಲ್ಲಿ ಕಂಗನಾ ಏನು ಹೇಳಿದ್ದರು?: ವೀಡಿಯೊದಲ್ಲಿ ಕಂಗನಾ ರಾನಾವತ್, "ಉದ್ಧವ್ ಠಾಕ್ರೆ ತುಜೆ ಕ್ಯಾ ಲಗ್ತಾ ಹೈ ಕಿ ತುನೆ ಫಿಲ್ಮ್ ಮಾಫಿಯಾ ಕೆ ಸಾಥ್ ಮಿಲ್ಕೆ ಮೇರಾ ಘರ್ ತೋಡ್ಕೆ ಮುಜ್ಸೆ ಬಹುತ್ ಬಡಾ ಬದ್ಲಾ ಲಿಯಾ ಹೈ? ಆಜ್ ಮೇರಾ ಘರ್ ಟೂಟಾ ಹೈ ಕಲ್ ತೇರಾ ಘಮಂಡ್ ಟೂಟೇಗಾ ಜೈಸಾ ನಹಿಂ ರೆಹತಾ. (ಉದ್ಧವ್ ಠಾಕ್ರೆಯವರೇ, ಸಿನಿಮಾ ಮಾಫಿಯಾಗಳ ಜೊತೆ ಸೇರಿ ಇಂದು ನನ್ನ ಮನೆಯನ್ನು ಕೆಡವಿದ್ದೀರಿ, ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ನೋಡುತ್ತಿದ್ದೀರಿ, ಇಂದು ನನ್ನ ಮನೆ ಕೆಡವಿದ ನಿಮ್ಮ ದುರಹಂಕಾರ ನಾಳೆ ಮುರಿಯಲಿದೆ ಎಂದು ನೇರವಾಗಿ ಉದ್ಧವ್ ಠಾಕ್ರೆ ಉದ್ದೇಶಿಸಿ ವಾಗ್ದಾಳಿ ನಡೆಸಿದ್ದರು.

ಇಂದು ಸೋಷಿಯಲ್ ಮೀಡಿಯಾ ಬಳಕೆದಾರರು ಹಲವಾರು ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ಠಾಕ್ರೆ ಅವರ ಕೆಟ್ಟ ಕರ್ಮಕ್ಕೆ ಬೆಲೆ ತೆರುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ನಮ್ಮ ಸುತ್ತಲೂ ಕರ್ಮ ಸುತ್ತುತ್ತದೆ ಎಂದು ಒಬ್ಬರು ಬರೆದು #MahaVikasAghadi #UddhavThackeray ಹ್ಯಾಶ್ ಟ್ಯಾಗ್ ಮಾಡಿದ್ದಾರೆ.

ಮತ್ತೊಬ್ಬರು, ಇದು ಕಟು ವಾಸ್ತವ. ಅಲ್ಪಾವಧಿಯ ಆಲೋಚನೆಯಿಂದ ಉದ್ಧವ್ ಠಾಕ್ರೆಯವರು ಹಿಂದೂ ತತ್ವಗಳಿಂದ ದೂರ ಮಾಡಿಕೊಂಡಿದ್ದರಿಂದ ದೀರ್ಘಾವಧಿಯ ಪರಿಣಾಮಗಳನ್ನು ನೋಡಲಿಲ್ಲ. ಶಿವಸೇನೆ ಕಟ್ಟಿ ಬೆಳೆಸಿದ ಬಾಳಾ ಸಾಹೇಬ್ ಠಾಕ್ರೆ ಸಿಂಹದ ಮನುಷ್ಯ, ಇಂದು ನಿಜಕ್ಕೂ ದುಃಖದ ದಿನ ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT